ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ, ಶರತ್ ಕಮಲ್‌ಗೆ ಖೇಲ್ ರತ್ನ, ಪೂನಿಯಾ ಹಾಗೂ ಲಕ್ಷ್ಯಸೇನ್‌ಗೆ ಅರ್ಜುನ!

By Suvarna News  |  First Published Nov 14, 2022, 8:50 PM IST

ಕ್ರೀಡಾ ಕ್ಷೇತ್ರದಲ್ಲಿ ಸಾಧಕರಿಗೆ 2022ರ ಸಾಲಿನ ಕ್ರೀಡಾ ಪ್ರಶಸ್ತಿ ಪ್ರಕಟಗೊಂಡಿದ. ಹಿರಿಯ ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್‌ಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಸೀಮಾ ಪೂನಿಯಾ ಸೇರಿದಂತೆ 25 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಈ ಬಾರಿಯ ಕ್ರೀಡಾ ಪ್ರಶಸ್ತಿಗಳ ಸಂಪೂರ್ಣ ವಿವರ ಇಲ್ಲಿದೆ


ನವದೆಹಲಿ(ನ.14): ಪಸಕ್ತ ಸಾಲಿನ ಪ್ರತಿಷ್ಠಿಕ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಟೇಬಲ್ ಟೆನಿಸ್ ಸ್ಟಾರ್ ಅಚಂತಾ ಶರ್ಮಾ ಕಮಲ್ ಪಡೆದುಕೊಂಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಶರ್ಮಾ ಕಮಲ್ 4 ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಇನ್ನು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಎಲ್ದೋಸ್ ಪೌಲ್, ಲಕ್ಷ್ಯ ಸೇನ್, ನಿಖಾತ್ ಜರೀನ್ ಸೇರಿದಂತೆ 25 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಇದೇ ಮೊದಲ ಬಾರಿಗೆ ಕ್ರೀಡಾಪಟುಗಳು, ಕೋಚ್, ಸಿಬ್ಬಂದಗಳು ಪ್ರಶಸ್ತಿಗಾಗಿ ಖುದ್ದು ಅರ್ಜಿ ಸಲ್ಲಿಸಲು ಕೇಂದ್ರ ಕ್ರೀಡಾ ಇಲಾಖೆ ಅವಕಾಶ ಕಲ್ಪಿಸಿತ್ತು.  ಸಾವಿರಾರು ಸಂಖ್ಯೆಯಲ್ಲಿ ಪ್ರಶಸ್ತಿಗಾಗಿ ಸಾಧಕರಿಗೆ ಅರ್ಜಿಗಳು ಬಂದಿತ್ತು. ಈ ಅರ್ಜಿಗಳನ್ನು ಪರಿಶೀಲಿಸಿ ಇದೀಗ ಪ್ರಶಸ್ತಿ ಘೋಷಿಸಲಾಗಿದೆ.  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಎಂ ಖಾನವಿಲ್ಕರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಈ ಸಮಿತಿಯಲ್ಲಿ ಹಲವು ಮಾಜಿ ಕ್ರೀಡಾಪಟುಗಳು, ಕ್ರೀಡಾ ಪತ್ರಕರ್ತರು ಉಪಸ್ಥಿತರಿದ್ದರು.

Tap to resize

Latest Videos

 

ವೇದಿಕೆಯಲ್ಲಿ ನಟನನ್ನು ಹೂವಂತೆ ಸಲೀಸಾಗಿ ಎತ್ತಿದ ವೇಟ್‌ಲಿಫ್ಟರ್ ಚಾನು: ವಿಡಿಯೋ ವೈರಲ್

ಪ್ರಶಸ್ತಿಯ ವಿವರ:
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಅಜಂತ ಶರ್ಮಾ ಕಮಲ್(ಟೇಬಲ್ ಟೆನಿಸ್)

ಅರ್ಜುನ ಪ್ರಶಸ್ತಿ
ಸೀಮಾ ಪೂನಿಯಾ(ಅಥ್ಲೆಟಿಕ್ಸ್), ಪ್ರದೀಪ್ ಕುಲಕರ್ಣಿ(ಚೆಸ್), ಎಲ್ದೋಲ್ ಪೌಲ್(ಅಥ್ಲೆಟಿಕ್ಸ್, ಅವಿನಾಶ್ ಮುಕುಂದ್ ಸೇಬಲ್( ಅಥ್ಲೆಟಿಕ್ಸ್, ಲಕ್ಷ್ಯ ಸೇನ್( ಬ್ಯಾಡ್ಮಿಂಟನ್), ಎಚ್ ಎಸ್ ಪ್ರಣಯ್( ಬ್ಯಾಡ್ಮಿಂಟನ್) ಅಮಿತ್(ಬಾಕ್ಸಿಂಗ್), ನಿಖತ್ ಜರೀನ್(ಬಾಕ್ಸಿಂಗ್), ಆರ್ ಪ್ರಗ್ನಾನಂದ(ಚೆಸ್), ದೀಪ್ ಗ್ರೇಸ್ ಎಕ್ಕಾ(ಹಾಕಿ), ಸಾಕ್ಷಿ ಕುಮಾರಿ(ಕಬಡ್ಡಿ), ಸುಶೀಲಾ ದೇವಿ( ಜೊಡೋ), ನಯನ್ ಮೋನಿ ಸೈಕಿಯಾ (ಲಾನ್ ಬೌಲ್), ಸಾಗರ್ ಕೈಲಾಸ್ ಓವಲ್ಕರ್ (ಮಲ್ಲಕಂಬ),   ಮಾನಸಿ ಗಿರೀಶ್ಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್),  ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್) , ಎಲವೆನಿಲ್ ವಲರಿವನ್ (ಶೂಟಿಂಗ್), ಶ್ರೀಜಾ ಅಕುಲಾ (ಟೇಬಲ್ ಟೆನಿಸ್), ವಿಕಾಸ್ ಠಾಕೂರ್ (ವೇಟ್‌ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್ (ವುಶು), ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್), ಜೆರ್ಲಿನ್ ಅನಿಕಾ ಜೆ (ಪ್ಯಾರಾ ಬ್ಯಾಡ್ಮಿಂಟನ್) ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ ಈಜು)

ದ್ರೋಣಾಚಾರ್ಯ ಪ್ರಶಸ್ತಿ:
ಜೀವನ್‌ಜೋತ್ ಸಿಂಗ್ ತೇಜಾ(ಆರ್ಚರಿ ಕೋಚ್), ಮೊಹಮ್ಮದ್್ ಆಲಿ ಖಾಮರ್( ಬಾಕ್ಸಿಂಗ್ ಕೋಚ್), ಸುಮಾ ಸಿದ್ಧಾರ್ತ್ ಶಿರೂರ್( ಪ್ಯಾರಾ ಶೋಟಿಂಗ್ ಕೋಚ್), ಸುಜೀತ್ ಮಾನ್ (ರಸ್ಲಿಂಗ್ ಕೋಚ್)

ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ
ದಿನೇಶ್ ಜವಾಹರ್ ಲಾಡ್( ಕ್ರಿಕೆಟ್), ಬಿಮಲ್ ಪ್ರಫುಲ್ಲಾ ಘೋಷ್(ಫುಟ್ಬಾಲ್), ರಾಜ್ ಸಿಂಗ್(ರಸ್ಲಿಂಗ್)

ಧ್ಯಾನಚಂದ್ ಜೀವಮಾನ ಶ್ರೇಷ್ಠ ಪ್ರಶಸ್ತಿ(ಕ್ರೀಡೆ ಹಾಗೂ ಗೇಮ್ಸ್ ವಿಭಾಗ)
ಅಶ್ವಿನಿ ಅಕ್ಕುಂಜಿ(ಅಥ್ಲೀಟಿಕ್ಸ್) , ಧರ್ಮವೀರ್ ಸಿಂಗ್(ಹಾಕಿ), ಬಿಸಿ ಸುರೇಶ್(ಕಬಡ್ಡಿ) ನೀರ್ ಬಹದ್ದೂರ್ ಗುರಂಗ(ಪ್ಯಾರಾ ಅಥ್ಲಿಟಿಕ್ಸ್)
 

click me!