ಭಾರತ ಕುಸ್ತಿ ಫೆಡರೇಷನ್ ಮತ್ತೆ ವಿಶ್ವ ಕುಸ್ತಿಯ ಬ್ಯಾನ್ ಎಚ್ಚರಿಕೆ!

By Naveen Kodase  |  First Published Apr 27, 2024, 8:24 AM IST

ಕಳೆದ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಯನ್ನು ಭಾರತ ಒಲಿಂಪಿಕ್ ಸಂಸ್ಥೆ(ಐಒಎ) ಅಮಾನತುಗೊಳಿಸಿದ ಬಳಿಕ ಡಬ್ಲ್ಯುಎಫ್‌ಐ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ ನೇಮಿಸ ಲಾಗಿತ್ತು. ಇತ್ತೀಚೆಗಷ್ಟೇ ಅದನ್ನು ತೆರವುಗೊಳಿಸಲಾಗಿತ್ತು. ಬಳಿಕ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಕಾರಣಗಳನ್ನು ತಿಳಿಸಿ ಎಂದು ಐಒಎಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.


ನವದೆಹಲಿ(ಏ.27): ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿಯಂತ್ರಣಕ್ಕೆ ಮತ್ತೆ ಸ್ವತಂತ್ರ ಸಮಿತಿಯನ್ನು ನೇಮಿಸಿದರೆ ಡಬ್ಲ್ಯುಎಫ್‌ಐ ಮೇಲೆ ಮತ್ತೆ ನಿಷೇಧ ಹೇರುತ್ತೇವೆ ಮತ್ತು ಭಾರತದ ಕುಸ್ತಿಪಟುಗಳನ್ನು ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ ಎಂದು ಕುಸ್ತಿಯ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ. 

ಕಳೆದ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಯನ್ನು ಭಾರತ ಒಲಿಂಪಿಕ್ ಸಂಸ್ಥೆ(ಐಒಎ) ಅಮಾನತುಗೊಳಿಸಿದ ಬಳಿಕ ಡಬ್ಲ್ಯುಎಫ್‌ಐ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ ನೇಮಿಸ ಲಾಗಿತ್ತು. ಇತ್ತೀಚೆಗಷ್ಟೇ ಅದನ್ನು ತೆರವುಗೊಳಿಸಲಾಗಿತ್ತು. ಬಳಿಕ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಕಾರಣಗಳನ್ನು ತಿಳಿಸಿ ಎಂದು ಐಒಎಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.

Tap to resize

Latest Videos

undefined

ವಿಶ್ವ ಆರ್ಚರಿ: ಭಾರತಕ್ಕೆ ನಾಲ್ಕು ಪದಕಗಳು ಖಚಿತ

ಶಾಂಫ್ಟ್: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 4 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಶುಕ್ರ ವಾರ ಜ್ಯೋತಿ, ಅಭಿಷೇಕ್ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಫೈನಲ್‌ಗೇರಿದರು. ಈಗಾಗಲೇ ಕಾಂಪೌಂಡ್‌ ಪುರುಷ, ಮಹಿಳಾ, ಪುರುಷರ ರೀಕರ್ವ್ ತಂಡಗಳು ಪದಕ ಸುತ್ತಿಗೇರಿದ್ದು, ಬೆಳ್ಳಿ ಖಚಿತಪಡಿಸಿ ಕೊಂಡಿವೆ. ಇನ್ನು ಮಹಿಳೆಯರ ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಸೆಮಿಫೈನಲ್ ಪ್ರವೇಶಿಸಿದರು.

ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ!

ಏಷ್ಯನ್‌ ಅಥ್ಲೆಟಿಕ್ಸ್‌: ಕರ್ನಾಟಕದ ಶ್ರೀಯಾ ರಾಜೇಶ್‌ಗೆ ಕಂಚಿನ ಪದಕ

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶ್ರೀಯಾ ರಾಜೇಶ್‌ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ 59.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಯಾ 3ನೇ ಸ್ಥಾನ ಪಡೆದರು. ಇದು ಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಕ್ಕ 2ನೇ ಪದಕ. ಗುರುವಾರ ಪಾವನ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕೂಟದಲ್ಲಿ ಭಾರತ 5 ಚಿನ್ನ ಸೇರಿ 15 ಪದಕ ಗೆದ್ದಿದೆ. ಶನಿವಾರ ಕೂಟ ಮುಕ್ತಾಯಗೊಳ್ಳಲಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸೆಲೆಕ್ಟ್ ಮಾಡಿದ ಸಂಜಯ್ ಮಂಜ್ರೇಕರ್; ಕೊಹ್ಲಿ, ಪಾಂಡ್ಯಗಿಲ್ಲ ಸ್ಥಾನ..!

ಸೇಲಿಂಗ್‌: ಭಾರತದ ನೇತ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ ಪ್ರವೇಶ

ನವದೆಹಲಿ: ಭಾರತದ ಸೇಲಿಂಗ್‌(ಹಾಯಿ ದೋಣಿ) ಪಟು ನೇತ್ರಾ ಕುಮಾನನ್‌ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದು ಸೇಲಿಂಗ್‌ನಲ್ಲಿ ಭಾರತಕ್ಕೆ ದೊರೆತ 2ನೇ ಒಲಿಂಪಿಕ್ಸ್‌ ಕೋಟಾ.

ಫ್ರಾನ್ಸ್‌ನ ಹೇರೆಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ನೇತ್ರಾ ಮಹಿಳೆಯರ ಡಿಂಘಿ(ಐಎಲ್‌ಸಿಎ 6) ವಿಭಾಗದಲ್ಲಿ ಒಟ್ಟು 67 ಅಂಕ ಸಂಪಾದಿಸಿ 5ನೇ ಸ್ಥಾನಿಯಾದರು. ಆದರೆ ಇನ್ನೂ ಒಲಿಂಪಿಕ್ಸ್‌ ಕೋಟಾ ಪಡೆಯದ ಎಮರ್ಜಿಂಗ್‌ ನೇಷನ್ಸ್‌ ಪ್ರೋಗ್ರಾಂ(ಇಎನ್‌ಪಿ) ಸ್ಪರ್ಧಿಗಳ ಪೈಕಿ ಅಗ್ರಸ್ಥಾನ ಪಡೆದ ಕಾರಣ ನೇತ್ರಾ ಒಲಿಂಪಿಕ್ಸ್‌ ಪ್ರವೇಶಿಸಿದರು. ನೇತ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.
 

click me!