ಆಸ್ಪ್ರೇಲಿಯನ್‌ ಓಪನ್‌ಗಿಲ್ಲ ವಿಶ್ವ ನಂ.1 ಕಾರ್ಲೊಸ್‌ ಆಲ್ಕರಜ್‌..!

By Naveen Kodase  |  First Published Jan 8, 2023, 9:41 AM IST

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಿಂದ ಕಾರ್ಲೊಸ್‌ ಆಲ್ಕರಜ್‌
19 ವರ್ಷದ ಆಲ್ಕರಜ್‌ ಬಲಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ
ಅಮೆರಿಕದ ವೀನಸ್‌ ವಿಲಿಯಮ್ಸ್‌  ಕೂಡಾ ಫಿಟ್ನೆಸ್ ಸಮಸ್ಯೆಯಿಂದ ಟೂರ್ನಿಯಿಂದ ಔಟ್


ಮೆಲ್ಬರ್ನ್‌(ಜ.08): 2023ರ ಮೊದಲ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಗೆ ವಿಶ್ವ ನಂ.1 ಆಟಗಾರ, ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್‌ ಗೈರಾಗಲಿದ್ದಾರೆ. ಅಭ್ಯಾಸದ ವೇಳೆ 19 ವರ್ಷದ ಆಲ್ಕರಜ್‌ ಬಲಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ ತಿಳಿದುಬಂದಿದೆ. ಅವರ ಗೈರು ಹಾಜರಿಯಲ್ಲಿ ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ರಾಫೆಲ್‌ ನಡಾಲ್‌ ಅಗ್ರ ಶ್ರೇಯಾಂಕಿತರಾಗಿ ಟೂರ್ನಿಗೆ ಪ್ರವೇಶಿಸಲಿದ್ದಾರೆ. ಇದೇ ವೇಳೆ 7 ಬಾರಿ ಗ್ರ್ಯಾನ್‌ ಸ್ಲಾಂ ಚಾಂಪಿಯನ್‌ ಅಮೆರಿಕದ ವೀನಸ್‌ ವಿಲಿಯಮ್ಸ್‌ ಸಹ ಗಾಯಗೊಂಡಿರುವ ಕಾರಣ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌: ರಾಜ್ಯದ ಅಭಿನಯ ಸ್ಪರ್ಧೆ

Tap to resize

Latest Videos

ನವದೆಹಲಿ: ಫೆ.10ರಿಂದ 12ರ ವರೆಗೂ ಕಜಕಸ್ತಾನದ ಆಸ್ತಾನದಲ್ಲಿ ನಡೆಯಲಿರುವ 10ನೇ ಆವೃತ್ತಿಯ ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ 26 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಕರ್ನಾಟಕದ ಅಭಿನಯ ಶೆಟ್ಟಿಸ್ಪರ್ಧಿಸಲಿದ್ದಾರೆ. 

ಕಳೆದ ವರ್ಷ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಅಥ್ಲೀಟ್‌ಗಳ ಆಯ್ಕೆ ನಡೆಸಿರುವುದಾಗಿ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ(ಎಎಫ್‌ಐ) ತಿಳಿಸಿದೆ. ಕಳೆದ ಆವೃತ್ತಿಯಲ್ಲಿ ಭಾರತ 4 ಬೆಳ್ಳಿ, 2 ಕಂಚಿನ ಪದಕ ಗೆದ್ದಿತ್ತು.

ಇಂದು ಬೆಂಗ್ಳೂರು 10ಕೆ ಓಟ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ, ಕರ್ನಾಟಕ ಒಲಿಂಪಿಕ್ಸ್‌ ಹಾಗೂ ಅಥ್ಲೆಟಿಕ್ಸ್‌ ಸಂಸ್ಥೆ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಗ್ರೇಟ್‌ ಬೆಂಗಳೂರು 10ಕೆ ಮ್ಯಾರಥಾನ್‌ ಓಟ ಭಾನುವಾರ ನಗರದಲ್ಲಿ ನಡೆಯಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಮುಂಜಾನೆ 6.15ಕ್ಕೆ ಮ್ಯಾರಥಾನ್‌ ಆರಂಭಗೊಳ್ಳಲಿದ್ದು, ವಿಧಾನಸೌಧ, ಕಬ್ಬನ್‌ಪಾರ್ಕ್ ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಂಠೀರವದಲ್ಲೇ ಮುಕ್ತಾಯಗೊಳ್ಳಲಿದೆ. ಮ್ಯಾರಥಾನ್‌ 10ಕೆ, 5ಕೆ ಹಾಗೂ 3ಕೆ ವಿಭಾಗದಲ್ಲಿ ನಡೆಯಲಿದೆ.

ಲಂಕಾ ಸರಣಿ ತಯಾರಿ ನಡುವೆ ರೋಹಿತ್ ಶರ್ಮಾ ಡ್ಯಾನ್ಸ್, ವೈರಲ್ ವಿಡಿಯೋಗೆ ಭರ್ಜರಿ ರೆಸ್ಪಾನ್ಸ್!

ಒಟ್ಟಾರೆ ದೇಶದ ವಿವಿಧ ಕಡೆಯ ಎಲೈಟ್‌ ಅಥ್ಲೀಟ್‌ಗಳು ಸೇರಿ 7,500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಕೂಡಾ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಹಲವು ಕಾರ್ಪೋರೇಟ್‌ ಸಂಸ್ಥೆಗಳ ಉದ್ಯೋಗಿಗಳು ಸಹ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾಜ್‌ರ್‍, ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ.

1991ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಈಗ ಅಮಾನತು

ನ್ಯೂಯಾರ್ಕ್: 1991ರಲ್ಲಿ ಬಾರ್‌ ಹೊರಗಡೆ ತಮ್ಮ ಪತ್ನಿಗೆ ಒದ್ದಿದ್ದ ಪ್ರಕರಣದಲ್ಲಿ ಅಮೆರಿಕ ಫುಟ್ಬಾಲ್‌ ತಂಡದ ಕೋಚ್‌ ಗ್ರೇಗ್‌ ಬೆರ್‌ಹಾಲ್ಟರ್‌ ಈಗ ಅಮಾನತುಗೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಸಮಿತಿ ರಚಿಸಿ ತನಿಖೆಗೆ ಅಮೆರಿಕ ಫುಟ್ಬಾಲ್‌ ಫೆಡರೇಶನ್‌(ಯುಎಸ್‌ಎಸ್‌ಎಫ್‌) ಆದೇಶಿಸಿತ್ತು. 

ಈ ನಡುವೆಯೇ ಬೆರ್‌ಹಾಲ್ಟರ್‌ರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಆ್ಯಂಥೋನಿ ಹಡ್ಸನ್‌ ಹಂಗಾಮಿ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಆದರೆ ತಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಬೆರ್‌ಹಾಲ್ಟರ್‌ ಆರೋಪಿಸಿದ್ದಾರೆ. ತಮ್ಮ ಪುತ್ರನಿಗೆ ವಿಶ್ವಕಪ್‌ನಲ್ಲಿ ಸರಿಯಾದ ಅವಕಾಶ ನೀಡದ್ದಕ್ಕೆ ಬಹು ವರ್ಷಗಳ ಸ್ನೇಹಿತ, ಮಾಜಿ ಫುಟ್ಬಾಲಿಗ ಕ್ಲಾಡಿಯೊ ರೇಯ್ನಾ ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ. ಕ್ಲಾಡಿಯೊ ಅವರ ಪತ್ನಿ, ಯುಎಸ್‌ಎಸ್‌ಎಫ್‌ನ ಮುಖ್ಯಸ್ಥರಿಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

click me!