ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಪ್ರಿ ಕ್ವಾರ್ಟರ್‌ನಲ್ಲಿ ಸೋಲು

By Kannadaprabha News  |  First Published Mar 16, 2024, 11:31 AM IST

ಕಳೆದ ವಾರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸಾತ್ವಿಕ್‌-ಚಿರಾಗ್‌ ಗುರುವಾರ ರಾತ್ರಿ ನಡೆದ 2ನೇ ಸುತ್ತಿನ ಹಣಾಹಣಿಯಲ್ಲಿ ಇಂಡೋನೇಷ್ಯಾದ ಮುಹಮ್ಮದ್‌ ಶೋಹಿಬುಲ್ ಫಿಕ್ರಿ ಹಾಗೂ ಬಗಾಸ್‌ ಮೌಲಾನ ವಿರುದ್ಧ 16-21, 15-21ರಲ್ಲಿ ಸೋಲನುಭವಿಸಿದರು.


ಬರ್ಮಿಂಗ್‌ಹ್ಯಾಮ್‌: ವಿಶ್ವ ನಂ.1 ಪುರುಷ ಡಬಲ್ಸ್‌ ಜೋಡಿ, ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.

ಕಳೆದ ವಾರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸಾತ್ವಿಕ್‌-ಚಿರಾಗ್‌ ಗುರುವಾರ ರಾತ್ರಿ ನಡೆದ 2ನೇ ಸುತ್ತಿನ ಹಣಾಹಣಿಯಲ್ಲಿ ಇಂಡೋನೇಷ್ಯಾದ ಮುಹಮ್ಮದ್‌ ಶೋಹಿಬುಲ್ ಫಿಕ್ರಿ ಹಾಗೂ ಬಗಾಸ್‌ ಮೌಲಾನ ವಿರುದ್ಧ 16-21, 15-21ರಲ್ಲಿ ಸೋಲನುಭವಿಸಿದರು.

Tap to resize

Latest Videos

undefined

ಕೆಎಸ್‌ಸಿಎ ಇಲೆವೆನ್‌ ಪರ ಆಡಿದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌

ಕಳೆದ ಎಂಟು ಪಂದ್ಯಗಳಲ್ಲಿ ಒಂದೂ ಗೇಮ್‌ ಕಳೆದುಕೊಳ್ಳದ ಸಾತ್ವಿಕ್‌-ಚಿರಾಗ್‌ ಈ ಬಾರಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದರು. ಆದರೆ 3ನೇ ಶ್ರೇಯಾಂಕಿತ ಜೋಡಿಯ ಆಟದ ಮುಂದೆ ಮಂಡಿಯೂರಬೇಕಾಯಿತು.

ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ ಚೀನಾದ ಝಾಂಗ್‌ ಶು ಕ್ಷಿಯಾನ್‌-ಝೆಂಗ್‌ ಯು ವಿರುದ್ಧ 21-11, 11-21, 11-21ರಲ್ಲಿ ಸೋಲನುಭವಿಸಿದರು.

ವಿದೇಶಿ ಫುಟ್ಬಾಲಿಗನ ಮೇಲೆ ಕೇರಳದಲ್ಲಿ ಫ್ಯಾನ್ಸ್‌ ಹಲ್ಲೆ

ಮಲಪ್ಪುರಂ: ಕೇರಳದ ಸ್ಥಳೀಯ ಫುಟ್ಬಾಲ್‌ ಟೂರ್ನಿಯಲ್ಲಿ ಆಡುತ್ತಿದ್ದ ಐವರಿ ಕೋಸ್ಟ್‌ನ ಆಟಗಾರನ ಮೇಲೆ ಅಭಿಮಾನಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇತ್ತೀಚೆಗೆ ಸೆವೆನ್ಸ್‌ ಮ್ಯಾಚ್‌ ವೇಳೆ ಈ ಘಟನೆ ನಡೆದಿದೆ. ಜವಾಹರ್‌ ಮಾವೂರ್‌ ತಂಡದ ಪರ ಆಡುತ್ತಿದ್ದ ಹಸ್ಸನ್‌ ಜೂನಿಯರ್‌ ಬಗ್ಗೆ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದು, ಬಳಿಕ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಹಸ್ಸನ್‌ ನೀಡಿದ ದೂರಿನನ್ವಯ ಸ್ಥಳೀಯ ಪೊಲೀಸರು ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.
 

click me!