Budget 2023: ಕ್ರೀಡಾ ಕ್ಷೇತ್ರಕ್ಕೆ ಬಂಪರ್ ನೀಡಿದ ಕೇಂದ್ರ ಬಜೆಟ್, ದಾಖಲೆಯ ಮೊತ್ತ ಮೀಸಲು..!

By Naveen Kodase  |  First Published Feb 1, 2023, 4:45 PM IST

ಕ್ರೀಡಾ ಕ್ಷೇತ್ರಕ್ಕೆ ಟಾನಿಕ್ ನೀಡಿದ ಕೇಂದ್ರ ಬಜೆಟ್
ಕೇಂದ್ರ ಸರ್ಕಾರವು ದಾಖಲೆಯ 3397.32 ಕೋಟಿ ರುಪಾಯಿ ಅನುದಾನ
ಏಷ್ಯನ್ ಗೇಮ್ಸ್‌ ಹಾಗೂ ಒಲಿಂಪಿಕ್ಸ್‌ ಗೇಮ್ಸ್‌ ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಅನುದಾನ ಮೀಸಲು


ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದು, ದೇಶದ ಅಥ್ಲಿಟ್‌ಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುಂಬರುವ ಏಷ್ಯನ್ ಗೇಮ್ಸ್‌ ಹಾಗೂ ಒಲಿಂಪಿಕ್ಸ್‌ ಗೇಮ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ದಾಖಲೆಯ 3397.32 ಕೋಟಿ ರುಪಾಯಿಗಳನ್ನು 2023-24ರ ಅವಧಿಗೆ ಮೀಸಲಿಟ್ಟಿದೆ.

ಹೌದು, ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರದಲ್ಲಿ ಮೀಸಲಿಟ್ಟ ಹಣಕ್ಕಿಂತ ಈ ಬಾರಿ 300 ಕೋಟಿ ರುಪಾಯಿ ಹೆಚ್ಚುವರಿ ಹಣವನ್ನು ಮೀಸಲಿಟ್ಟಿದೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು, ಕ್ರೀಡಾ ಕ್ಷೇತ್ರಕ್ಕೆ  3062.60 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿತ್ತು. 2023ರಲ್ಲಿ ಏಷ್ಯನ್ ಗೇಮ್ಸ್‌ ನಡೆಯಲಿದ್ದು, 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ನಡೆಯಲಿದ್ದು, ಈ ಮಹತ್ತರ ಕ್ರೀಡಾಕೂಟಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ಬಾರಿ 334.72 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಕ್ರೀಡಾಕ್ಷೇತ್ರಕ್ಕೆ ಮೀಸಲಿಟ್ಟಿದೆ.

Tap to resize

Latest Videos

undefined

ಈ ವರ್ಷದ ಕ್ರೀಡಾಕ್ಷೇತ್ರದ ಬಜೆಟ್‌ನ್ನು ಈ ರೀತಿ ಹಂಚಿಕೆ ಮಾಡಲಾಗಿದೆ:

ರಾಷ್ಟ್ರೀಯ ಕ್ರೀಡಾ ಕ್ಷೇತ್ರಗಳಿಗೆ ಅನುದಾನ:

2023- 325 ಕೋಟಿ ರುಪಾಯಿ
2022- 280 ಕೋಟಿ ರುಪಾಯಿ

ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ

2023- 1000 ಕೋಟಿ ರುಪಾಯಿ
2022 - 974 ಕೋಟಿ ರುಪಾಯಿ

ಒಟ್ಟಾರೆ ಕೇಂದ್ರ ವಲಯದ ಯೋಜನೆಗಳಿಗೆ

2023- 1913.51 ಕೋಟಿ ರುಪಾಯಿ
2022- 1832.50 ಕೋಟಿ ರುಪಾಯಿ

Union Budget 2023 ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಪಟ್ಟಿ!

ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಯಕ ಬಹುಮಾನಳಿಗೆ: ಕ್ರೀಡಾಪಟುಗಳಿಗೆ ಇನ್ಸೆಟಿವ್ಸ್, ನ್ಯಾಷನಲ್ ಸ್ಪೋರ್ಟ್ಸ್ ಡೆವಲ್ಪಮೆಂಟ್‌ ಫಂಡ್ ಮತ್ತು ಕ್ರೀಡಾಪಟುಗಳಿಗೆ ನ್ಯಾಷನಲ್‌ ವೆಲ್ಫೇರ್ ಫಂಡ್

2023- 62 ಕೋಟಿ ರುಪಾಯಿ
2022- 73 ಕೋಟಿ ರುಪಾಯಿ

SAI ಗೆ ಬಂಪರ್ ಬಜೆಟ್‌:

ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ(The Sports Authority of India)ಕ್ಕೆ ಬಂಪರ್ ಬಜೆಟ್ ಎನಿಸಿಕೊಂಡಿದ್ದು, ಏಷ್ಯನ್‌ ಗೇಮ್ಸ್‌ ಹಾಗೂ ಒಲಿಂಪಿಕ್ಸ್‌ ಗೇಮ್ಸ್‌ಗೆ ಅರ್ಹತೆ ಪಡೆದವರಿಗೆ ಈ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ನೆರವಾಗಲಿದೆ.ಈ ವರ್ಷ ಸಾಯ್‌ಗೆ ಕೇಂದ್ರ ಬಜೆಟ್‌ನಲ್ಲಿ 785.52 ಕೋಟಿ ರುಪಾಯಿ ಮೀಸಲಿಡಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಸಾಯ್‌ಗೆ ನೀಡಲಾಗುವ ಅನುದಾನದಲ್ಲಿ 7.41 ಕೋಟಿ ರುಪಾಯಿಗಳನ್ನು ಕಡಿತಗೊಳಿಸಲಾಗಿತ್ತು. ಆದರೆ ಈ ಬಾರಿ ಬರೋಬ್ಬರಿ 132.52 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಬಜೆಟ್‌ಗೆ ಮೀಸಲಿಡಲಾಗಿದೆ

ಕ್ರೀಡಾಪರಿಕರಗಳ ಮೇಲೆ ಜಿಎಸ್‌ಟಿ:

ಕೆಲವು ಆಯ್ದ ಕ್ರೀಡಾಪರಿಕರಗಳ ಮೇಲೆ ಕೇಂದ್ರ ಸರ್ಕಾರವು ಅತಿಹೆಚ್ಚು ಜಿಎಸ್‌ಟಿಯನ್ನು ವಿಧಿಸಿರುವುದು ಕ್ರೀಡಾಪಟುಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಈ ಕುರಿತಂತೆ ಅಂತಹ ಕ್ರೀಡಾಪರಿಕರಗಳ ಮೇಲೆ ಜಿಎಸ್‌ಟಿಯನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದರು. ಸರ್ಕಾರ ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

click me!