BWF World Championships: ಸೆಮೀಸ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿರಾಗ್-ರಂಕಿರೆಡ್ಡಿ ಜೋಡಿ

By Naveen Kodase  |  First Published Aug 26, 2022, 11:24 AM IST

ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪುರುಷರ ಡಬಲ್ಸ್ ಜೋಡಿ
ಪದಕ ಖಚಿತಪಡಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ ರಂಕಿರೆಡ್ಡಿ-ಚಿರಾಗ್ ಜೋಡಿ
ಪುರುಷರ ಡಬಲ್ಸ್‌ನಲ್ಲಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಿದು ಮೊದಲ ಪದಕ


ಟೋಕಿಯೋ(ಆ.26): ಭಾರತದ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕವನ್ನು ಖಚಿತಪಡಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತದ ನಂ.1 ಡಬಲ್ಸ್‌ ಜೋಡಿಯಾಗಿ ಗುರುತಿಸಿಕೊಂಡಿರುವ ಚಿರಾಗ್-ರಂಕಿರೆಡ್ಡಿ ಜೋಡಿಯು ಹಾಲಿ ಚಾಂಪಿಯನ್‌ ಜಪಾನಿನ ಟಕುರೊ ಹೊಕಿ ಹಾಗೂ ಯುಗೊ ಕೊಬೆಯಾಸಿ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈ ಗೆಲುವಿನೊಂದಿಗೆ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಪದಕ ಖಚಿತಪಡಿಸಿಕೊಂಡಿದ್ದಾರೆ. ಈ ಮೂಲಕ  ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರಷರ ಡಬಲ್ಸ್‌ ಜೋಡಿ ಎನ್ನುವ ಕೀರ್ತಿಗೆ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಪಾತ್ರವಾಗಿದೆ. 

Tap to resize

Latest Videos

ಎರಡನೇ ಶ್ರೇಯಾಂಕಿತ ಜೋಡಿಯಾದ ಜಪಾನಿನ ಟಕುರೊ ಹೊಕಿ ಹಾಗೂ ಯುಗೊ ಕೊಬೆಯಾಸಿ ಎದುರು ಅಮೋಘ ಪ್ರದರ್ಶನ ತೋರಿದ ಭಾರತದ ಜೋಡಿ 24-22, 15-21 ಹಾಗೂ 21-4 ಗೇಮ್‌ಗಳ ಅಂತರದಲ್ಲಿ ಗೆಲುವು ಸಾಧಿಸಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ. 

ಈ ಮೊದಲು 2011ರಲ್ಲಿ ಭಾರತದ ಮಹಿಳಾ ಡಬಲ್ಸ್‌ ಜೋಡಿಯಾದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿಯು ಕಂಚಿನ ಪದಕ ಜಯಿಸಿತ್ತು. ಇದೀಗ ಭಾರತದ ಪುರುಷರ ಡಬಲ್ಸ್‌ ಜೋಡಿಯು ಸೆಮೀಸ್ ಪ್ರವೇಶಿಸುವುದರೊಂದಿಗೆ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ 13ನೇ ಪದಕ ಭಾರತದ ಪಾಲಾಗಿದೆ

✅ First 🇮🇳 MD pair to secure a medal

✅ Only 2nd medal from 🇮🇳 doubles pair

✅ 13th medal for 🇮🇳 at World's & script history yet again 😍 pic.twitter.com/POW0uYt7KC

— BAI Media (@BAI_Media)

ಇನ್ನು ಭಾರತದ ಮತ್ತೊಂದು ಪುರುಷರ ಡಬಲ್ಸ್‌ ಜೋಡಿಯಾದ ದೃವ್ ಕಪಿಲ್ ಮತ್ತು ಎಂ ಆರ್ ಅರ್ಜುನ್ ಜೋಡಿಯು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಇಂಡೋನೇಷ್ಯಾದ ಹೆಂದ್ರಾ ಸೆತಿವಾನ್ ಹಾಗೂ ಮೊಹಮ್ಮದ್ ಆಶಾನ್ ಜೋಡಿ ಎದುರು ಸೋಲು ಕಂಡು ನಿರಾಸೆ ಅನುಭವಿಸಿದೆ. ದೃವ್-ಅರ್ಜುನ್ ಜೋಡಿ 8-21, 14-21 ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿತು. 

BWF World Championships ಲಕ್ಷ್ಯ ಮಣಿಸಿ ಪ್ರಣಯ್ ಕ್ವಾರ್ಟರ್‌ಗೆ ಲಗ್ಗೆ

ಸೈನಾಗೆ ಶಾಕ್‌: ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ಒಲಿಂಪಿಕ್ಸ್‌ ಕಂಚು ವಿಜೇತೆ ಸೈನಾ ನೆಹ್ವಾಲ್‌ ಥಾಯ್ಲೆಂಡ್‌ನ ಬುಸಾನನ್‌ ವಿರುದ್ಧ 17-​21, 21-​16, 13​-21 ಗೇಮ್‌ಗಳಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು. ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದ್ದ ಸೈನಾಗೆ 2ನೇ ಸುತ್ತಿನಲ್ಲಿ ಬೈ ಸಿಕ್ಕಿತ್ತು.

ಇನ್ನು ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಳೆದ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ ಲಕ್ಷ್ಯ ಸೇನ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಪರಸ್ಪರ ಮುಖಾಮುಖಿಯಾಗಿದ್ದರು. ಸೇನ್‌ ವಿರುದ್ಧ 17-21, 21-16, 21-17 ಗೇಮ್‌ಗಳಲ್ಲಿ ಗೆದ್ದ ಪ್ರಣಯ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು.

click me!