Pro Kabaddi League ಬೆಂಗಳೂರು ಬುಲ್ಸ್‌ಗೆ 3ನೇ ಸ್ಥಾನ ಖಚಿತ, ಪ್ಲೇ-ಆಫ್‌ಗೆ ತಲೈವಾಸ್‌ ಪ್ರವೇಶ

By Naveena K VFirst Published Dec 8, 2022, 10:13 AM IST
Highlights

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ನಾಗಾಲೋಟ
ಲೀಗ್‌ ಹಂತದ ಅಂತ್ಯಕ್ಕೆ 3ನೇ ಸ್ಥಾನ ಕಾಯ್ದುಕೊಂಡ ಬೆಂಗಳೂರು ಬುಲ್ಸ್
ಪಾಟ್ನಾ ಪೈರೇಟ್ಸ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಬುಲ್ಸ್‌ ಪಡೆ

ಹೈದರಾಬಾದ್‌(ಡಿ.08): ಪ್ರೊ ಕಬಡ್ಡಿ 9ನೇ ಆವೃತ್ತಿಯ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್‌ 3ನೇ ಸ್ಥಾನ ಪಡೆಯುವುದು ಖಚಿತವಾಗಿದೆ. ಬುಧವಾರ ಪಾಟ್ನಾ ಪೈರೇಟ್ಸ್‌ ವಿರುದ್ಧ ಬುಲ್ಸ್‌ 57-44ರಲ್ಲಿ ಗೆಲುವು ಸಾಧಿಸಿತು. ಯುವ ರೈಡರ್‌ ಭರತ್‌ 20 ಅಂಕ ಕಲೆಹಾಕಿದರು. 21 ಪಂದ್ಯಗಳಲ್ಲಿ 13 ಗೆಲುವು, 7 ಸೋಲು, 1 ಟೈನೊಂದಿಗೆ 73 ಅಂಕ ಪಡೆದಿರುವ ಬುಲ್ಸ್‌ ಪ್ಲೇ-ಆಫ್‌ನಲ್ಲಿ ಎಲಿಮಿನೇಟರ್‌ ಪಂದ್ಯವನ್ನು ಆಡಬೇಕಿದೆ. 

ಇನ್ನು ಮತ್ತೊಂದು ಪಂದ್ಯದಲ್ಲಿ ಯು.ಪಿ.ಯೋಧಾಸ್‌ ವಿರುದ್ಧ 43-28ರಲ್ಲಿ ಗೆದ್ದ ತಮಿಳ್‌ ತಲೈವಾಸ್‌ 5ನೇ ತಂಡವಾಗಿ ಪ್ಲೇ-ಆಫ್‌ಗೇರಿತು. ಈ ಸೋಲು ಯೋಧಾಸ್‌ 4 ಅಥವಾ 5ನೇ ಸ್ಥಾನದಲ್ಲಿ ಲೀಗ್‌ ಹಂತವನ್ನು ಮುಕ್ತಾಯಗೊಳಿಸುವುದನ್ನು ಖಚಿತಪಡಿಸಿತು. ಪ್ಲೇ-ಆಫ್‌ನ ಇನ್ನೊಂದು ಸ್ಥಾನಕ್ಕೆ ದಬಾಂಗ್‌ ಡೆಲ್ಲಿ ಹಾಗೂ ಗುಜರಾತ್‌ ಜೈಂಟ್ಸ್‌ ನಡುವೆ ಸ್ಪರ್ಧೆ ಇದೆ.

𝐁𝐮𝐥𝐥𝐬 continue their dominance & 𝐓𝐡𝐚𝐥𝐚𝐢𝐯𝐚𝐬 book a spot in the playoffs 😉

Here's how the race to the playoffs is shaping up 📊 pic.twitter.com/34R4E3DDXs

— ProKabaddi (@ProKabaddi)

ಮೀರಾಬಾಯಿ ಚಾನುಗೆ ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ!

ಬೊಗೋಟಾ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ತಾರಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಗಾಯದ ನಡುವೆಯೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಮೊದಲಿನಿಂದಲೂ ಅವರು ಮೊಣಕೈ ನೋವಿನಿಂದ ಬಳಲುತ್ತಿದ್ದರು. ಆದರೂ ಮೀರಾಬಾಯಿ ಪದಕ ಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ. 

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ; ಭಾರತದಿಂದ ಏಕೈಕ ಸ್ಪರ್ಧಿ

49 ಕೆ.ಜಿ. ವಿಭಾಗದಲ್ಲಿ ಮೀರಾಬಾಯಿ ಒಟ್ಟು 200 ಕೆ.ಜಿ. (ಸ್ನ್ಯಾಚ್‌ನಲ್ಲಿ 87 ಕೆ.ಜಿ.+ ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 113 ಕೆ.ಜಿ.) ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಒಟ್ಟು 206 ಕೆ.ಜಿ (93 ಕೆ.ಜಿ. + 113 ಕೆ.ಜಿ.) ಭಾರ ಎತ್ತುವ ಮೂಲಕ ಚೀನಾದ ಜಿಯಾಂಗ್‌ ಹುಹೈ ಚಿನ್ನದ ಪದಕ ಗೆದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿಗೆ ಇದು 2ನೇ ಪದಕ. 2017ರಲ್ಲಿ ಅವರು ಚಿನ್ನ ಗೆದ್ದಿದ್ದರು.

ಬ್ಯಾಡ್ಮಿಂಟನ್‌ ವಿಶ್ವ ಟೂರ್‌: ಪ್ರಣಯ್‌ಗೆ ಸೋಲು

ಬ್ಯಾಂಕಾಕ್‌: ಋುತು ಅಂತ್ಯದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಆಟಗಾರ ಎಚ್‌.ಎಸ್‌.ಪ್ರಣಯ್‌ ಪುರುಷರ ಸಿಂಗಲ್ಸ್‌ ಮೊದಲ ಪಂದ್ಯದಲ್ಲಿ ಸೋತಿದ್ದಾರೆ. ‘ಎ’ ಗುಂಪಿನಲ್ಲಿರುವ ಪ್ರಣಯ್‌ ಬುಧವಾರ ಜಪಾನ್‌ನ ಕೊಡೈ ನರವೊಕಾ ವಿರುದ್ಧ 11-21, 21-9, 17-21 ಗೇಮ್‌ಗಳಲ್ಲಿ ಸೋಲುಂಡರು. ಜಪಾನ್‌ನ ಎದುರಾಳಿ ವಿರುದ್ಧ ಪ್ರಣಯ್‌ಗಿದು ಸತತ 2ನೇ ಸೋಲು. ಗುರುವಾರ 2ನೇ ಪಂದ್ಯದಲ್ಲಿ ಪ್ರಣಯ್‌ಗೆ ಚೀನಾದ ಲು ಗುವಾಂಗ್‌ ಜು ಎದುರಾಗಲಿದ್ದು, ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಳ್ಳಲು ಪ್ರಣಯ್‌ ಈ ಪಂದ್ಯದಲ್ಲಿ ಗೆಲ್ಲಬೇಕಿದೆ.

click me!