ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ; ಭಾರತದಿಂದ ಏಕೈಕ ಸ್ಪರ್ಧಿ

ಬ್ಯಾಂಕಾಂಕ್‌ನಲ್ಲಿ ಇಂದಿನಿಂದ ಬಿಡ್ಲ್ಯುಎಫ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ
ಪ್ರಣಯ್‌ ಟೂರ್ನಿಯಲ್ಲಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.
ಪಿ.ವಿ.ಸಿಂಧು ಗಾಯಗೊಂಡಿರುವ ಕಾರಣ ಈ ಟೂರ್ನಿಯಲ್ಲಿ ಆಡುತ್ತಿಲ್ಲ

BWF World Tour Finals 2022 HS Prannoy carries India hope in season finale kvn

ಬ್ಯಾಂಕಾಕ್‌(ಡಿ.07): ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಬುಧವಾರ ಇಲ್ಲಿ ಆರಂಭಗೊಳ್ಳಲಿರುವ ಬಿಡ್ಲ್ಯುಎಫ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪಿ.ವಿ.ಸಿಂಧು ಗಾಯಗೊಂಡಿರುವ ಕಾರಣ ಆಡುತ್ತಿಲ್ಲ, ಹೀಗಾಗಿ ಪ್ರಣಯ್‌ ಟೂರ್ನಿಯಲ್ಲಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.

ಈ ಋುತುವಿನ ಅಗ್ರ 8 ಆಟಗಾರರು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ತಲಾ 4 ಆಟಗಾರರ ಎರಡು ಗುಂಪು ರಚಿಸಲಾಗಿದೆ. ಪ್ರಣಯ್‌ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಒಲಿಂಪಿಕ್‌ ಚಾಂಪಿಯನ್‌ ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌, ಜಪಾನ್‌ನ ಕೊಡೈ ನರವೊಕಾ ಹಾಗೂ ಚೀನಾದ ಲು ಗುವಾಂಗ್‌ ಜು ವಿರುದ್ಧ ಸೆಣಸಲಿದ್ದಾರೆ. ಈ ಮೂರೂ ಆಟಗಾರರ ವಿರುದ್ಧ ಪ್ರಣಯ್‌ ಕಳಪೆ ದಾಖಲೆ ಹೊಂದಿದ್ದಾರೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ಆಟಗಾರರು ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ.

ಪ್ಲೇಆಫ್‌ ರೇಸ್‌ನಲ್ಲಿ ಉಳಿದ ದಬಾಂಗ್ ಡೆಲ್ಲಿ

ಹೈದರಾಬಾದ್‌: ಪ್ರೊ ಕಬಡ್ಡಿ 9ನೇ ಆವೃತ್ತಿಯ ಪ್ಲೇ-ಆಫ್‌ ರೇಸ್‌ನಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಉಳಿದುಕೊಂಡಿದೆ. ಮಂಗಳವಾರ ಯು ಮುಂಬಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ 41-21 ಅಂಕಗಳ ಅಂತರದಲ್ಲಿ ಜಯಿಸಿತು. ಈ ಸೋಲು ಮುಂಬಾ ತಂಡವನ್ನು ಪ್ಲೇ-ಆಫ್‌ ರೇಸ್‌ನಿಂದ ಹೊರಹಾಕಿತು. 21 ಪಂದ್ಯಗಳಲ್ಲಿ 60 ಅಂಕ ಗಳಿಸಿರುವ ಡೆಲ್ಲಿ, ಕೊನೆ ಪಂದ್ಯವನ್ನು ಟೈ ಮಾಡಿಕೊಂಡರೂ ಸಾಕು ಪ್ಲೇ-ಆಫ್‌ಗೆ ಪ್ರವೇಶ ಪಡೆಯಲಿದೆ.

ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬುಲ್ಸ್‌!

ಈಗಾಗಲೇ 4 ತಂಡಗಳು ಪ್ಲೇ-ಆಫ್‌ಗೆ ಮುನ್ನಡೆದಿದ್ದು ಇನ್ನೆರಡು ಸ್ಥಾನಗಳಿಗೆ ತಮಿಳ್ ತಲೈವಾಸ್‌, ದಬಾಂಗ್ ಡೆಲ್ಲಿ, ಹರ್ಯಾಣ ಸ್ಟೀಲರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳ ನಡುವೆ ಸ್ಪರ್ಧೆ ಇದೆ. ಬುಧವಾರ ತಮಿಳ್ ತಲೈವಾಸ್‌ ಭವಿಷ್ಯ ನಿರ್ಧಾರವಾಗಲಿದೆ. ಯುಪಿ ಯೋಧಾಸ್‌ ವಿರುದ್ಧ ಗೆದ್ದರೆ ಪ್ಲೇ-ಆಫ್‌ ಸ್ಥಾನ ಖಚಿತವಾಗಲಿದೆ. ಈಗಾಗಲೇ ಜೈಪುರ ಪಿಂಕ್ ಪ್ಯಾಂಥರ್ಸ್‌, ಪುಣೇರಿ ಪಲ್ಟಾನ್, ಬೆಂಗಳೂರು ಬುಲ್ಸ್‌ ಹಾಗೂ ಯುಪಿ ಯೋಧಾಸ್ ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 

ಭಾರತ ಮಹಿಳಾ ತಂಡದ ಕೋಚ್‌ ಪೊವಾರ್‌ಗೆ ಹಿಂಬಡ್ತಿ

ನವದೆಹಲಿ: ಟಿ20 ವಿಶ್ವಕಪ್‌ಗೆ ಎರಡೂವರೆ ತಿಂಗಳಷ್ಟೇ ಬಾಕಿ ಉಳಿದಿರುವಾಗ ಭಾರತ ಮಹಿಳಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಯಿಂದ ರಮೇಶ್‌ ಪೊವಾರ್‌ಗೆ ಗೇಟ್‌ಪಾಸ್‌ ನೀಡಲಾಗಿದೆ. ಅವರನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ವರ್ಗಾವಣೆ ಮಾಡಲಾಗಿದೆ. ಪೊವಾರ್‌ ಕಾರ್ಯವೈಖರಿ ಬಗ್ಗೆ ತಂಡದೊಳಗೆ ಅಸಮಾಧಾನವಿದ್ದ ಕಾರಣ ಈ ಬದಲಾವಣೆಗೆ ಬಿಸಿಸಿಐ ಮುಂದಾಯಿತು ಎನ್ನಲಾಗಿದೆ. ಇದೇ ವೇಳೆ ಹೃಷಿಕೇಶ್‌ ಕಾನಿಟ್ಕರ್‌ರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಲಾಗಿದ್ದು, ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಹೊಸ ಕೋಚ್‌ ಹೆಸರು ಶಿಫಾರಸು ಮಾಡಿ ನೇಮಕಗೊಳ್ಳುವ ವರೆಗೂ ಕಾನಿಟ್ಕರ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
 

Latest Videos
Follow Us:
Download App:
  • android
  • ios