ಮತ್ತೊಂದು ರಾಜ್ಯದಲ್ಲಿ ಕಬಡ್ಡಿ ಪಂದ್ಯಗಳನ್ನು ಆಯೋಜಿಸುವುದರಿಂದ ಹೆಚ್ಚಿನ ಮೊತ್ತ ವ್ಯಯವಾಗಲಿದೆ. ಇತರೆ ತಂಡಗಳನ್ನು ಹೊಟೇಲ್ ಬುಕ್ಕಿಂಗ್ ಮತ್ತು ಇತರೆ ಖರ್ಚುಗಳಿಂದ ಹೆಚ್ಚಿನ ಹಣ ಪೋಲಾಗಲಿದೆ. ತಂಡ ಕೂಡ ಪ್ರಾಯೋಜಕತ್ವದ ಆದಾಯವನ್ನು ಕಳೆದುಕೊಳ್ಳಲಿದೆ. ಟಿಕೆಟ್ ಮಾರಾಟದಲ್ಲೂ ದೊಡ್ಡ ನಷ್ಟ ಸಂಭವಿ ಸಲಿದೆ. ಒಟ್ಟಾರೆ ಕರ್ನಾಟಕ ಸರ್ಕಾರದ ಈ ನಿರ್ಧಾರ ದಿಂದ ಬೇಸರವಾಗಿದೆ ಎಂದು ಬುಲ್ಸ್ ತಂಡದ ಸಿಇಒ ಉದಯ್ ಸಿನ್ಹಾ ವಾಲಾ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು[ಅ.25]: ಕರ್ನಾಟಕ ಸರ್ಕಾರದ ವಿರುದ್ಧ ಬುಲ್ಸ್ ತಂಡ ಕೆಂಡಾಮಂಡಲ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಕೊನೆಗೂ ನಮಗೆ ಸಿಗಲಿಲ್ಲ. ಈ ನಿರ್ಧಾರ ನಮ್ಮ ಅಭಿಮಾನಿಗಳು ಮತ್ತು ನಮ್ಮ ತಂಡಕ್ಕೆ ಅತೀವ ಬೇಸರ ತರಿಸಿದೆ. ನಾವು 2ನೇ ಬಾರಿ ತವರಿನ ಅಂಗಣದ ಲಾಭ ಪಡೆಯುವುದರಿಂದ ವಂಚಿತರಾಗುತ್ತಿದ್ದೇವೆ. ತವರಿನ ಅಭಿಮಾನಿಗಳ ಉತ್ತೇಜನವನ್ನು ಕಳೆದುಕೊಳ್ಳುತ್ತಿದ್ದೇವೆ. ಆರ್ಥಿಕವಾಗಿಯೂ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಇದನ್ನು ಓದಿ: ಬೆಂಗಳೂರು ಪ್ರೊ ಕಬಡ್ಡಿ ಪುಣೆಗೆ ಹೋಯ್ತು..!
ಮತ್ತೊಂದು ರಾಜ್ಯದಲ್ಲಿ ಕಬಡ್ಡಿ ಪಂದ್ಯಗಳನ್ನು ಆಯೋಜಿಸುವುದರಿಂದ ಹೆಚ್ಚಿನ ಮೊತ್ತ ವ್ಯಯವಾಗಲಿದೆ. ಇತರೆ ತಂಡಗಳನ್ನು ಹೊಟೇಲ್ ಬುಕ್ಕಿಂಗ್ ಮತ್ತು ಇತರೆ ಖರ್ಚುಗಳಿಂದ ಹೆಚ್ಚಿನ ಹಣ ಪೋಲಾಗಲಿದೆ. ತಂಡ ಕೂಡ ಪ್ರಾಯೋಜಕತ್ವದ ಆದಾಯವನ್ನು ಕಳೆದುಕೊಳ್ಳಲಿದೆ. ಟಿಕೆಟ್ ಮಾರಾಟದಲ್ಲೂ ದೊಡ್ಡ ನಷ್ಟ ಸಂಭವಿ ಸಲಿದೆ. ಒಟ್ಟಾರೆ ಕರ್ನಾಟಕ ಸರ್ಕಾರದ ಈ ನಿರ್ಧಾರ ದಿಂದ ಬೇಸರವಾಗಿದೆ ಎಂದು ಬುಲ್ಸ್ ತಂಡದ ಸಿಇಒ ಉದಯ್ ಸಿನ್ಹಾ ವಾಲಾ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಹಳ ಹಿಂದೆಯೇ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಗೆ ಅನುಮತಿ ಕೇಳಿದ್ದೆವು. ಆದರೂ ರಾಜ್ಯ ಕ್ರೀಡಾ ಇಲಾಖೆ ಇತ್ತ ಗಮನಹರಿಸಿಲ್ಲ. ನಮ್ಮ ಮನವಿಗೆ ಕ್ರೀಡಾ ಇಲಾಖೆಗೆ ಸ್ಪಂದಿಸದೇ ಇರುವುದು ಬೇಸರ. ಬೆಂಗಳೂರಿಗೆ ಕಬಡ್ಡಿ ತಂಡ ಬೇಕೋ, ಬೇಡವೋ ಸರ್ಕಾರ ಹೇಳಿಬಿಡಲಿ ಎಂದು ಉದಯ್ ಕಠೋರವಾಗಿ ನುಡಿದಿದ್ದಾರೆ.