ಟ್ವೀಟರ್‌ನಲ್ಲಿ ಸ್ವತಃ ಶ್ರೀಶಂಕರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಏಷ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್, ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8.37 ಮೀ. ದೂರಕ್ಕೆ ನೆಗೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
ನವದೆಹಲಿ(ಏ.19): ಭಾರತದ ತಾರಾ ಲಾಂಗ್ ಜಂಪ್ ಪಟು ಶ್ರೀಶಂಕರ್ ಮುರಳಿ ಅಭ್ಯಾಸದ ವೇಳೆ ಮಂಡಿ ಗಾಯಕ್ಕೆ ತುತ್ತಾಗಿದ್ದು, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ 2024ರ ಋತುವಿನಿಂದಲೇ ಹೊರಬಿದ್ದಿದ್ದಾರೆ.
ಟ್ವೀಟರ್‌ನಲ್ಲಿ ಸ್ವತಃ ಶ್ರೀಶಂಕರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಏಷ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್, ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8.37 ಮೀ. ದೂರಕ್ಕೆ ನೆಗೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
ಒಲಿಂಪಿಕ್ಸ್ ಕೌಂಟ್‌ಡೌನ್: ಕೇವಲ 99 ದಿನ ಬಾಕಿ
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು, ಇನ್ನು ಕೇವಲ 99 ದಿನ ಮಾತ್ರ ಬಾಕಿ ಇದೆ. ಜುಲೈ 26ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಆ.11ರಂದು ಸಮಾಪ್ತಿಗೊಳ್ಳಲಿದೆ. 10,500ರಷ್ಟು ಅಥ್ಲೀಟ್‌ಗಳು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬಗ್ಗೆ ಅಚ್ಚರಿ ಅಭಿಪ್ರಾಯ ತಿಳಿಸಿದ ರೋಹಿತ್ ಶರ್ಮಾ..!
ಕ್ರೀಡಾ ಗ್ರಾಮದಲ್ಲಿ ಈಗಾಗಲೇ ಮೈದಾನ, ಟ್ರ್ಯಾಕ್‌ಗಳನ್ನು ಸಿದ್ಧಗೊಳಿಸಲಾಗಿದ್ದು, ಅಂತಿಮ ಸ್ಪರ್ಷ ನೀಡಲಾಗುತ್ತಿದೆ. ಆ.28ರಿಂದ ಸೆ.8ರ ವರೆಗೆ ಪ್ಯಾರಾಲಿಂಪಿಕ್ಸ್‌ಗೂ ಪ್ಯಾರಿಸ್ ಆತಿಥ್ಯ ವಹಿಸಲಿದ್ದು, 4400 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಕ್ಯಾಂಡಿಡೇಟ್ಸ್ ಚೆಸ್: ನಂ.1 ಸ್ಥಾನದಿಂದ ಗುಕೇಶ್ ಕೆಳಕ್ಕೆ
ಟೊರೊಂಟೊ: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 11ನೇ ಸುತ್ತಿನಲ್ಲಿ ಭಾರತದ ಡಿ. ಗುಕೇಶ್ ಅಗ್ರಶ್ರೇಯಾಂಕಿತ ಫ್ಯಾಬಿಯಾನೊ ಕರುನಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದು, ಜಂಟಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ. ಸದ್ಯ ಗುಕೇಶ್ 6.5 ಅಂಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದರೆ, ರಷ್ಯಾದ ಇಯಾನ್ ನೆಪೊನ್ನಿಯಾಚಿ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
UPSC ಪರೀಕ್ಷೆಯಲ್ಲಿ 178ನೇ ಸ್ಥಾನ ಪಡೆದ ಬ್ಯಾಡ್ಮಿಂಟನ್ 'ಗ್ಲಾಮರ್ ಗರ್ಲ್' ಖುಹೂ ಗಾರ್ಗ್!
ಇದೇ ವೇಳೆ ಪ್ರಜ್ಞಾನಂದ ಹಾಗೂ ವಿದಿತ್ ಗುಜರಾತಿ ಕ್ರಮವಾಗಿ ಅಮೆರಿಕದ ಹಿಕರು ನಕಮುರಾ ಹಾಗೂ ನೆಪೊಮ್ಮೆಯಾಚಿ ವಿರುದ್ಧ ಪರಾಭವಗೊಂಡರು. ಮಹಿಳಾ ವಿಭಾಗದಲ್ಲಿ ಆರ್.ವೈಶಾಲಿ ಸತತ 2ನೇ ಜಯ ದಾಖಲಿಸಿದ್ದಾರೆ. ಅವರು ಬುಧವಾರ ಮಧ್ಯರಾತ್ರಿ ರಷ್ಯಾದ ಅಲೆಕ್ಸಾಂಡ್ರಾ ವಿರುದ್ಧ ಗೆದ್ದರೆ, ಕೊನೆರು ಹಂಪಿ ಅವರು ಬಲೇರಿಯಾದ ಸಲಿಮೋವಾ ಅವರನ್ನು ಸೋಲಿಸಿದರು.
ಕೊಡವ ಹಾಕಿ: ಕುಲ್ಲೇಟಿರ ಮುಂದಿನ ಸುತ್ತಿಗೆ
ನಾಪೋಕ್ಲು: ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಗುರುವಾರ ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ತಂಡಗಳು ಜಯಭೇರಿ ಬಾರಿಸಿ ಮುಂದಿನ ಸುತ್ತು ಪ್ರವೇಶಿಸಿದವು. ಕರ್ತಮಾಡ ವಿರುದ್ಧ ನೆಲ್ಲಮಕ್ಕಡ 3- 0 ಅಂತರದಿಂದ ಗೆದ್ದರೆ, ಬೊಪ್ಪಂಡ ವಿರುದ್ಧ ಕುಪ್ಪಮಡ(ಕೈಕೇರಿ) 4- 0ಅಂತರದಲ್ಲಿ ಗೆಲುವು ಸಾಧಿಸಿತು.
ಕಲಿಯಾಟಂಡ ವಿರುದ್ಧ ಕುಲ್ಲೇಟಿರಕ್ಕೆ 4-0 ಜಯ ಲಭಿಸಿತು. ಅಪ್ಪಚೆಟ್ಟೋಳಂಡ ವಿರುದ್ಧ ಅಂಜಪರವಂಡ ಜಯಗಳಿಸಿತು. ಉಳಿದಂತೆ ಕೊಕ್ಕಂಡ, ಚೆರುಮಮದಂಡ, ಮಂಡೇಪಂಡ, ಪೆಮ್ಮಂಡ, ಐನಂಡ, ಕೂತಂಡ, ಬಾಳೆಯಡ, ಬೊಳ್ಳಂಡ ಹಾಗೂ ಚೀಯಕಪೂವಂಡ ತಂಡಗಳು ಗೆದ್ದು ಮುಂದಿನ ಸುತ್ತು ಪ್ರವೇಶಿಸಿದವು.