T20 World Cup 2024: ಅರ್ಧ ಶತಕ ಸಿಡಿಸಿದ್ರೂ ಅತ್ಯಂತ ಕೆಟ್ಟ ದಾಖಲೆ ಬರೆದ ಪಾಕ್ ಕ್ರಿಕೆಟಿಗ

By Mahmad Rafik  |  First Published Jun 12, 2024, 11:00 AM IST

ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ರಿಝ್ವಾನ್ ಅವರ ಅರ್ಧ ಶತಕದೊಂದಿಗೆ 17.3 ಓವರ್‌ಗಳಲ್ಲಿ 107 ರನ್ ಸೇರಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಪಾಕಿಸ್ತಾನದ ಪರವಾಗಿ ಬಾಬರ್ 33 ಮತ್ತು ಡಿಲೋನ್ 2 ರನ್ ಗಳಿಸಿದ್ದಾರೆ. 


ನ್ಯೂಯಾರ್ಕ್: ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಝ್ವಾನ್ (Mohammad Rizwan) ಕೆನಡಾ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮ ವೃತ್ತಿಜೀವನದಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ. ಹೌದು, ವಿಶ್ವಕಪ್ 22ನೇ ಪಂದ್ಯ ಕೆನಡಾ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಕೆನಡಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಪೇರಿಸಿತ್ತು. ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ರಿಝ್ವಾನ್ ಅವರ ಅರ್ಧ ಶತಕದೊಂದಿಗೆ 17.3 ಓವರ್‌ಗಳಲ್ಲಿ 107 ರನ್ ಸೇರಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಪಾಕಿಸ್ತಾನದ ಪರವಾಗಿ ಬಾಬರ್ 33 ಮತ್ತು ಡಿಲೋನ್ 2 ರನ್ ಗಳಿಸಿದ್ದಾರೆ. 

ರಿಝ್ವಾನ್ ಕೆಟ್ಟ ದಾಖಲೆ 

Tap to resize

Latest Videos

ಮೊಹಮ್ಮದ್ ರಿಜ್ವಾನ್ ನಿಧಾನಗತಿಯಲ್ಲಿ ಅರ್ಧ ಶತಕ ಸಿಡಿಸಲು 52 ಎಸೆತಗಳನ್ನು ಎದುರಿಸಿದ್ದರು. ಇದು ಇವರೆಗಿನ ಟಿ20 ವಿಶ್ವಕಪ್ ಇತಿಹಾಸದಲ್ಲಿನ ನಿಧಾನಗತಿಯ ಅರ್ಧ ಶತಕವಾಗಿದೆ. ಈ  ಮೂಲಕ ಅರ್ಧ ಶತಕಕ್ಕಾಗಿ ಅತಿ ಹೆಚ್ಚು ಎಸೆತಗಳನ್ನು ತೆಗೆದುಕೊಂಡ ಕ್ರಿಕೆಟಿಗ ಎಂಬ ದಾಖಲೆಯನ್ನು ಮೊಹಮ್ಮದ್ ರಿಝ್ವಾನ್ ಹೊಂದಿದ್ದಾರೆ.  

ಇಂಡೋ ಪಾಕ್ ಮ್ಯಾಚ್ ಸೋತ ಪಾಕಿಸ್ತಾನ: 8.4 ಲಕ್ಷದ ಟಿಕೆಟ್‌ಗೆ ಟ್ರ್ಯಾಕ್ಟರ್ ಮಾರಿದ್ದ ಪಾಕ್ ಅಭಿಮಾನಿಯ ಕಣ್ಣೀರು

ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಸೌಥ್ ಆಫ್ರಿಕಾದ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. ಇದೇ ವರ್ಷದ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ 50 ಎಸೆತಗಳನ್ನು ಎದುರಿಸಿ ಅರ್ಧ ಶತಕ ಸಿಡಿಸಿದ್ದರು. ಇದೀಗ ಕೆಟ್ಟ ದಾಖಲೆ ಪಾಕಿಸ್ತಾನ ಮೊಹಮ್ಮದ್ ರಿಝ್ವಾನ್‌ಗೆ ಸೇರಿದೆ. 

ಪಂದ್ಯದ ಹೈಲೈಟ್ಸ್

ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಿದ ಪಾಕಿಸ್ತಾನ, ಆರೋನ್ ಜಾನ್ಸನ್ (52)ರ ಅರ್ಧಶತಕದ ಹೊರತಾಗಿಯೂ ಕೆನಡಾವನ್ನು 20 ಓವರಲ್ಲಿ 7 ವಿಕೆಟ್‌ಗೆ 106 ರನ್‌ಗೆ ಕಟ್ಟಿಹಾಕಿತು. ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ನಿರೀಕ್ಷಿತ ವೇಗದಲ್ಲಿ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ.ಆರಂಭದಲ್ಲೇ ಸೈಮ್ ಅಯುಬ್ (06) ವಿಕೆಟ್ ಕಳೆದುಕೊಂಡರೂ, 2ನೇ ವಿಕೆಟ್‌ಗೆ ಮೊಹಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಜಂ, 63 ರನ್ ಸೇರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. 33 ಎಸೆತದಲ್ಲಿ 33 ರನ್ ಗಳಿಸಿ ಬಾಬರ್ ಔಟಾದರೂ, ರಿಜ್ವಾನ್ ಔಟಾಗದೆ 53 ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.

ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಓದಿನಲ್ಲೂ ಹಿಂದಿದ್ದಾರೆ ಪಾಕಿಸ್ತಾನದ ಈ ಕ್ರಿಕೆಟರ್ಸ್‌..!

click me!