ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

By Web DeskFirst Published Jan 15, 2019, 9:35 AM IST
Highlights

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿದಿದೆ. 5ನೇ ದಿನ 10 ಪಂದಕ ಗೆದ್ದ ರಾಜ್ಯದ ಈಜುಪಟುಗಳು ಹೊಸ ದಾಖಲೆ ಬರೆದಿದ್ದಾರೆ.
 

ಪುಣೆ(ಜ.15): ಇಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಪರ್ಧಿಗಳು ಪದಕಗಳ ಕೊಳ್ಳೆ ಹೊಡೆಯುತ್ತಿದ್ದಾರೆ. ಕೂಟದ 5ನೇ ದಿನವಾದ ಸೋಮವಾರ ರಾಜ್ಯ ಈಜು ಸ್ಪರ್ಧಿಗಳು 6 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನೊಂದಿಗೆ ಒಟ್ಟು 10 ಪದಕ ಜಯಿಸಿದರು. ಕರ್ನಾಟಕ ತಂಡ 25 ಚಿನ್ನ, 22 ಬೆಳ್ಳಿ, 13 ಕಂಚಿನೊಂದಿಗೆ 60 ಪದಕ ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: ಮೇರಿ ಕೋಮ್’ಗೆ ಒಲಿದ ಗೌರವ ಡಾಕ್ಟರೇಟ್

ಈಜು ಸ್ಪರ್ಧೆಯಲ್ಲಿ ರಾಜ್ಯದ ಈಜುಪಟುಗಳು ಒಟ್ಟಾರೆ 41 ಪದಕ ಗೆದ್ದಿದ್ದಾರೆ. ಇದರಲ್ಲಿ 18 ಚಿನ್ನ, 14 ಬೆಳ್ಳಿ ಹಾಗೂ 9 ಕಂಚು ಸೇರಿವೆ. ಮೊದಲ ಆವೃತ್ತಿಯಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ತಂಡ, 2ನೇ ಆವೃತ್ತಿಯಲ್ಲೂ ಅದೇ ಹಾದಿಯಲ್ಲಿ ಸಾಗುತ್ತಿದೆ.

ಮುಂದುವರಿದ ಪ್ರಾಬಲ್ಯ: ರಾಜ್ಯದ ಈಜು ಪಟುಗಳಾದ ಸಂಜಯ್‌, ಲಿಖಿತ್‌, ದೀಕ್ಷಾ ಸೇರಿದಂತೆ ಇತರರು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅಂಡರ್‌ 17 ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಕರ್ನಾಟಕದ ಸಂಜಯ್‌ ಸಿ.ಜೆ. ಚಿನ್ನ ಗೆದ್ದರು. 50 ಮೀ. ಬ್ರೆಸ್ಟ್‌ ಸ್ಟೊ್ರೕಕ್‌ನಲ್ಲಿ ಪಸುಮರ್ತೆ ಕುಶಾಲ್‌ ಕಂಚಿಗೆ ತೃಪ್ತಿಪಟ್ಟರು. 4/100 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಲ್‌, ಮೋಹಿತ್‌, ಸಂಭವ್‌ ಮತ್ತು ಸಂಜಯ್‌ ಅವರನ್ನೊಳಗೊಂಡ ತಂಡ ಕಂಚು ಗಳಿಸಿತು. ಅಂಡರ್‌-21 ವಿಭಾಗದ 200 ಮೀ. ಬಟರ್‌ಫ್ಲೈನಲ್ಲಿ ಅವಿನಾಶ್‌ ಮಣಿ ಬೆಳ್ಳಿ ಜಯಿಸಿದರು. 50 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಹಾಗೂ 50 ಮೀ. ಫ್ರೀಸ್ಟೈಲ್‌ನಲ್ಲಿ ಲಿಖಿತ್‌ ಎಸ್‌.ಪಿ, ಚಿನ್ನಕ್ಕೆ ಮುತ್ತಿಟ್ಟರು. 4/100 ಮೀ. ಫ್ರೀಸ್ಟೆ್ರೖಲ್‌ನಲ್ಲಿ ಅವಿನಾಶ್‌, ಚಂದ್ರು, ಲಿಖಿತ್‌ ಮತ್ತು ಶ್ರೀಹರಿ ಅವರನ್ನೊಳಗೊಂಡ ತಂಡ ಚಿನ್ನ ಜಯಿಸಿತು.

ಇದನ್ನೂ ಓದಿ: ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್‌, ಪೂಜಾ

ಅಂಡರ್‌ 17 ಬಾಲಕಿಯರ 200 ಮೀ. ಬಟರ್‌ಫ್ಲೈನಲ್ಲಿ ಅನ್ವೇಶ್‌ ಗಿರೀಶ್‌ ಬೆಳ್ಳಿಗೆ ತೃಪ್ತಿಪಟ್ಟರೆ, 50 ಮೀ. ಬ್ರೆಸ್ಟ್‌ ಸ್ಟೊ್ರೕಕ್‌ನಲ್ಲಿ ರಚನಾ ರಾವ್‌ ಬೆಳ್ಳಿ ಜಯಿಸಿದರು. 50 ಮೀ. ಫ್ರೀಸ್ಟೈಲ್‌ನಲ್ಲಿ ದೀಕ್ಷಾ ರಮೇಶ್‌ ಸ್ವರ್ಣಕ್ಕೆ ಕೊರೊಳೊಡ್ಡಿದರು.

click me!