ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಇದೀಗ ಲುಸಾನ್ ಡೈಮಂಡ್ ಲೀಗ್ ಸ್ಪರ್ಧೆ ಖಚಿತ..!

By Kannadaprabha News  |  First Published Aug 18, 2024, 12:08 PM IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ನೀರಜ್ ಚೋಪ್ರಾ, ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ: ಆ.22ರಂದು ಸ್ವಿಜರ್‌ಲೆಂಡ್‌ನ ಲುಸಾನ್‌ ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ನಲ್ಲಿ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸ್ಪರ್ಧಿಸಲಿದ್ದಾರೆ. ಇದನ್ನು ಸ್ವತಃ ನೀರಜ್ ಖಚಿತಪಡಿಸಿದ್ದಾರೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್, ಸದ್ಯ ಸ್ವಿಜರ್‌ಲೆಂಡ್‌ನಲ್ಲಿ ತರಬೇತಿ ನಿರತರಾಗಿದ್ದಾರೆ. ಲುಸಾನ್ ಡೈಮಂಡ್ ಲೀಗ್ ಬಳಿಕ ಅವರು ಸೆ.13-14ಕ್ಕೆ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಆ ಬಳಿಕ ಅವರು ತಮ್ಮ ತೊಡೆಯ ಸ್ನಾಯುಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

Latest Videos

undefined

ರೇಪ್ ಖಂಡಿಸಿ ಧರಣಿ: ಕೋಲ್ಕತಾದ ಡುರಾಂಡ್ ಫುಟ್ಬಾಲ್ ಪಂದ್ಯ ರದ್ದು

ಕೋಲ್ಕತಾ: ವೈದ್ಯೆಯ ಅತ್ಯಾಚಾರ, ಹತ್ಯೆ ಖಂಡಿಸಿ ಐದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬಿಸಿ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಗೂ ತಟ್ಟಿದೆ. ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಿಗದಿಯಾಗಿದ್ದ ಮೋಹನ್ ಬಗಾನ್ ಹಾಗೂ ಈಸ್ಟ್ ಬೆಂಗಾಲ್ ನಡುವಿನ ಪಂದ್ಯ ರದ್ದುಗೊಳಿಸಲಾಗಿದೆ. 

ಮಹಾರಾಜ ಟ್ರೋಫಿ: ಮನೋಜ್‌ ಸ್ಪೋಟಕ ಬ್ಯಾಟಿಂಗ್, ಇನ್ನಾದ್ರೂ ಕನ್ನಡಿಗರಿಗೆ ಚಾನ್ಸ್‌ ಕೊಡ್ರೋ ಎಂದು ಆರ್‌ಸಿಬಿಗೆ ಫ್ಯಾನ್ಸ್ ತರಾಟೆ

ಕೋಲ್ಕತಾ ಪೊಲೀಸ್ ಅಧಿಕಾರಿಗಳು ಮತ್ತು ಟೂರ್ನಿ ಆಯೋಜಕರ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಎರಡೂ ತಂಡ ಗಳು ತಲಾ 1 ಅಂಕ ಹಂಚಿಕೊಳ್ಳಲಿವೆ. ಪಂದ್ಯ ವೀಕ್ಷಣೆಗೆ ಖರೀದಿಸಿದ್ದ ಟಿಕೆಟ್‌ಗಳ ದರವನ್ನು ಸಂಪೂರ್ಣ ಮರು ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತಾದಲ್ಲಿ ನಡೆಯಬೇಕಿರುವ ಎಲ್ಲಾ ಪಂದ್ಯಗಳು ಜಮೆಡ್‌ಪುರಕ್ಕೆ ಸ್ಥಳಾಂತರಗೊಳ್ಳಬಹುದು ಮೂಲಗಳು ತಿಳಿಸಿವೆ.

ಜೂ, ಏಷ್ಯಾ ಬ್ಯಾಡ್ಮಿಂಟನ್: ರಾಜ್ಯದ ಹಿತೈಶ್ರೀ, ಐಕ್ಯ ಸೇರಿ ಭಾರತದ 39 ಮಂದಿ

ನವದೆಹಲಿ: ಆ.20ರಿಂದ 25ರ ವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯಾ ಜೂನಿಯರ್ (ಅಂಡರ್-15, ಅಂಡರ್ -17) ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 39 ಮಂದಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಕರ್ನಾಟಕದ ಹಿತೈಶ್ರೀ ರಾಜಯ್ಯ, ಐಕ್ಯ ಶೆಟ್ಟಿ, ದಿಯಾ ಭೀಮಯ್ಯ, ಅದಿತಿ ದೀಪಕ್ ರಾಜ್, ಶೈನಾ ಮಣಿಮುತ್ತು ಕೂಡಾ ಒಳಗೊಂಡಿದ್ದಾರೆ. 

ಹಿತೈಶ್ರೀ ಅಂಡರ್ -15 ಬಾಲಕಿಯರ ಸಿಂಗಲ್ಸ್‌ನಲ್ಲಿ ಐಕ್ಯ ಹಾಗೂ ಶೈನಾ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ದಿಯಾ ಅಂಡರ್-17 ಬಾಲಕಿಯರ ಡಬಲ್ಸ್‌ನಲ್ಲಿ, ಅದಿತಿ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತದ ಸ್ಪರ್ಧಿಗಳ ಪೈಕಿ ಶೈನಾ ಮಾತ್ರ 2 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಲಾ 1 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.

ವಿನೇಶ್ ಫೋಗಟ್ ಸ್ವಾಗತಿಸುವ ಭರದಲ್ಲಿ ಭಾರತದ ಬಾವುಟ ತುಳಿದ ಬಜರಂಗ್ ಪೂನಿಯಾ..! ವಿಡಿಯೋ ವೈರಲ್

ಯುಎಸ್ ಓಪನ್‌ನಿಂದ ಹಿಂದೆ ಸರಿದ ಮಾರ್ಕೆಟಾ

ನ್ಯೂಯಾರ್ಕ್: 2023ರ ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡೇಸೊವಾ ಆಗಸ್ಟ್ 26ರಿಂದ ಆರಂಭ ಗೊಳ್ಳಲಿರುವ ಯುಎಸ್ ಓಪನ್ ಗ್ರಾನ್‌ಸ್ಲಾಂ ಟೆನಿಸ್ ನಿಂದ ಗಾಯದ ಕಾರಣದಿಂದಾಗಿ ಹಿಂದೆ ಸರಿದಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 47ನೇ ಸ್ಥಾನದಲ್ಲಿರುವ ಟೆನಿಸಿಗ, ಬ್ರಿಟನ್‌ನ ಕ್ಯಾಮ್ ನೋರಿ ಕೂಡಾ ಗಾಯದಿಂದಾಗಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡೇವಿಸ್‌ ಕಪ್‌ಗೆ ನಗಾಲ್‌: ಯೂಕಿ ಭಾಂಬ್ರಿ ಅಲಭ್ಯ

ನವದೆಹಲಿ: ಸೆ.14-15ಕ್ಕೆ ಸ್ವೀಡನ್‌ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಸುಮಿತ್‌ ನಗಾಲ್‌, ರಾಮ್‌ಕುಮಾರ್‌, ಶ್ರೀರಾಮ್‌ ಬಾಲಾಜಿ, ನಿಕಿ ಪೂನಚ್ಚ, ಸಿದ್ಧಾರ್ಥ್‌ ವಿಶ್ವಕರ್ಮ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಯೂಕಿ ಭಾಂಬ್ರಿ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆರ್ಯನ್‌ ಶಾ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದು, ಅಶುತೋಶ್‌ ಸಿಂಗ್‌ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ.
 

click me!