ಇಂದಿನಿಂದ ಇಂಡೋನೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌ ಟೂರ್ನಿ

By Kannadaprabha News  |  First Published Jun 7, 2022, 10:50 AM IST

* ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ ಆರಂಭ

* ಪಿ.ವಿ.ಸಿಂಧು, ಲಕ್ಷ್ಯ ಸೆನ್‌ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ

*  ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ಮೊದಲ ಸುತ್ತಲ್ಲಿ ಡೆನ್ಮಾರ್ಕ್ನ ಲಿನ್‌ ಕ್ರಿಸ್ಟೋಪೆರ್ಸನ್‌ ಸವಾಲು ಎದುರಿಸಲಿದ್ದಾರೆ


ಜಕಾರ್ತ(ಜೂ.07): ಇಂಡೋನೇಷ್ಯಾ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿ (Indonesia Open 2022) ಮಂಗಳವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu), ಲಕ್ಷ್ಯ ಸೆನ್‌ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಐತಿಹಾಸಿಕ ಥಾಮಸ್‌ ಕಪ್‌ (Thomas Cup) ಗೆಲುವಿನ ಹುಮ್ಮಸ್ಸಿನಲ್ಲಿರುವ ಸೆನ್‌ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿಡೆನ್ಮಾರ್ಕ್‌ನ ಹ್ಯಾನ್ಸ್‌ ಕ್ರಿಸ್ಟಿಯನ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ಸಮೀರ್‌ ವರ್ಮಾ ಕೂಡಾ ಕಣದಲ್ಲಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ಮೊದಲ ಸುತ್ತಲ್ಲಿ ಡೆನ್ಮಾರ್ಕ್ನ ಲಿನ್‌ ಕ್ರಿಸ್ಟೋಪೆರ್ಸನ್‌ ಸವಾಲು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಮನು-ಸುಮೀತ್‌ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ, ಸಿಮ್ರಾನ್‌ ಸಿಂಗ್‌-ರಿತಿತಾ ಜೋಡಿ ಕಣಕ್ಕಿಳಿಯಲಿದೆ.

Tap to resize

Latest Videos

ಸ್ಟೀಪಲ್‌ಚೇಸ್‌: 8ನೇ ಬಾರಿ ದಾಖಲೆ ಮುರಿದ ಅವಿನಾಶ್‌

ರಬಾತ್‌(ಮೊರಕ್ಕೊ): ಭಾರತದ ಅಥ್ಲೀಟ್‌ ಅವಿನಾಶ್‌ ಸಬ್ಳೆ ಅವರು 3000 ಮೀ. ಸ್ಪೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು 8ನೇ ಬಾರಿ ಉತ್ತಮಪಡಿಸಿಕೊಂಡಿದ್ದಾರೆ. ಮೊರಕ್ಕೋದಲ್ಲಿ ನಡೆಯುತ್ತಿರುವ ಡೈಮಂಡ್‌ ಲೀಗ್‌ ಕೂಟದಲ್ಲಿ ಅವರು 8 ನಿಮಿಷ 12.48 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 5ನೇ ಸ್ಥಾನ ಪಡೆದುಕೊಂಡರು. 27 ವರ್ಷದ ಮಹಾರಾಷ್ಟ್ರದ ಅವಿನಾಶ್‌ ಮಾಚ್‌ರ್‍ನಲ್ಲಿ ತಿರುವನಂತಪುರಂನಲ್ಲಿ ನಡೆದಿದ್ದ ಇಂಡಿಯನ್ಸ್‌ ಗ್ರ್ಯಾನ್‌ ಪ್ರಿ ಕೂಟದಲ್ಲಿ 8 ನಿ. 16.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಅವರು 2018ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಅಂತರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 8 ನಿ. 29.80 ಸೆಕೆಂಡ್‌ಗಳಲ್ಲಿ ಕ್ರಮಿಸಿ ಗೋಪಾಲ್‌ ಸೈನಿ(8:30.88) ಅವರ ದಾಖಲೆಯನ್ನು ಮುರಿದಿದ್ದರು.

ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಹರ್ಷದಾ

ಪಂಚಕುಲ: 2ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ಹರ್ಷದಾ ಗರುಡ್‌ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಪದಕ ಗೆದ್ದಿದ್ದಾರೆ. ಸೋಮವಾರ ಬಾಲಕಿಯರ ವೇಟ್‌ಲಿಫ್ಟಿಂಗ್‌ನ 45 ಕೆ.ಜಿ. ವಿಭಾಗದಲ್ಲಿ 152 ಕೆ.ಜಿ.(ಸ್ನಾಚ್‌ 69 ಕೆ.ಜಿ. ಮತ್ತು ಕ್ಲೀನ್‌ ಆ್ಯಂಡ್‌ ಜರ್ಕ್ 83 ಕೆ.ಜಿ.) ಭಾರ ಎತ್ತಿ ದಾಖಲೆ ನಿರ್ಮಿಸಿದರು.

French Open ರೋಲ್‌ ಮಾಡೆಲ್‌ ನಡಾಲ್‌ ಜೊತೆ ಪ್ರಶಸ್ತಿಗಾಗಿ ಕಾದಾಡಿದ ರುಡ್!

ಇನ್ನು ಆತಿಥೇಯ ಹರಾರ‍ಯಣ ಕ್ರೀಡಾಕೂಟದ 3ನೇ ದಿನವೂ ಪ್ರಾಬಲ್ಯ ಸಾಧಿಸಿದೆ. ಮೊದಲೆರಡು ದಿನ 6 ಚಿನ್ನದೊಂದಿಗೆ 24 ಪದಕ ಪಡೆದಿದ್ದ ಹರಾರ‍ಯಣ ಸೋಮವಾರ 10 ಚಿನ್ನದ ಪದಕಗಳನ್ನು ಬಾಚಿಕೊಂಡಿತು. 11 ಬೆಳ್ಳಿ, 18 ಕಂಚಿನ ಪದಕವನ್ನೂ ಗೆದ್ದುಕೊಂಡಿರುವ ರಾಜ್ಯ 45 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ ಸೋಮವಾರ 3 ಚಿನ್ನ ಪಡೆದಿದ್ದು, ಒಟ್ಟು 36 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆದರೆ ಕರ್ನಾಟಕ ಸೋಮವಾರ ಯಾವುದೇ ಪದಕ ಗೆಲ್ಲಲು ವಿಫಲವಾಯಿತು. ರಾಜ್ಯ ತಂಡ 1 ಚಿನ್ನ, 1 ಕಂಚು ಗೆದ್ದಿದ್ದು, 19ನೇ ಸ್ಥಾನಕ್ಕೆ ಕುಸಿದಿದೆ. ಬಾಲಕರ ಸೈಕ್ಲಿಂಗ್‌ನ 1000 ಮೀ. ಟೈಮ್‌ ಟ್ರಯಲ್‌ ವಿಭಾಗದಲ್ಲಿ ಸಂಪತ್‌ ಅವರು ರಾಜ್ಯದ ಪರ ಏಕೈಕ ಚಿನ್ನದ ಪದಕ ಪಡೆದಿದ್ದಾರೆ.


 

click me!