ಇತ್ತೀಚೆಗಷ್ಟೇ ನಗಾಲ್, ಪ್ರತಿಷ್ಠಿತ ಮಾಂಟೆ ಕಾರ್ಲೋ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿ, ವಿಶ್ವ ನಂ.7 ಹೋಲ್ಗರ್ ರ್‍ಯುನೆ ವಿರುದ್ಧ ಒಂದು ಸೆಟ್ ಗೆದ್ದಿದ್ದರು. ಮೊದಲ ಸುತ್ತಿನಲ್ಲಿ ವಿಶ್ವ ನಂ. 38 ಮ್ಯಾಟಿಯೋ ಅರ್ನಾಲ್ಡಿ ವಿರುದ್ಧ ಜಯ ಸಾಧಿಸಿದ್ದರು. ಅಲ್ಲದೇ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಗೂ ನೇರ ಪ್ರವೇಶ ಪಡೆದಿದ್ದಾರೆ.
ಲಂಡನ್: ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್, ಎಟಿಪಿ ಟೆನಿಸ್ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ 13 ಸ್ಥಾನ ಮೇಲೇರಿ 80ನೇ ಸ್ಥಾನ ಪಡೆಯಲಿದ್ದಾರೆ. ಸೋಮವಾರ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ ನಗಾಲ್, ಪ್ರತಿಷ್ಠಿತ ಮಾಂಟೆ ಕಾರ್ಲೋ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿ, ವಿಶ್ವ ನಂ.7 ಹೋಲ್ಗರ್ ರ್‍ಯುನೆ ವಿರುದ್ಧ ಒಂದು ಸೆಟ್ ಗೆದ್ದಿದ್ದರು. ಮೊದಲ ಸುತ್ತಿನಲ್ಲಿ ವಿಶ್ವ ನಂ. 38 ಮ್ಯಾಟಿಯೋ ಅರ್ನಾಲ್ಡಿ ವಿರುದ್ಧ ಜಯ ಸಾಧಿಸಿದ್ದರು. ಅಲ್ಲದೇ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಗೂ ನೇರ ಪ್ರವೇಶ ಪಡೆದಿದ್ದಾರೆ.
undefined
ಸುಮಿತ್ ಕಳೆದೊಂದು ವರ್ಷದಿಂದ ಅಮೋಘ ಪ್ರದರ್ಶನ ನೀಡುತ್ತಿದ್ದು, ಟೂರ್ನಿಯಿಂದ ಟೂರ್ನಿಗೆ ಅವರ ಪ್ರದರ್ಶನ ಗುಣಮಟ್ಟ ಸುಧಾರಿಸುತ್ತಿದೆ. ಫ್ರೆಂಚ್ ಓಪನ್‌ನಲ್ಲೂ ಉತ್ತಮ ಆಟವಾಡಿ, ರ್‍ಯಾಂಕಿಂಗ್ ಪಟ್ಟಿಯಲ್ಲಿ ಮತ್ತಷ್ಟು ಸ್ಥಾನ ಮೇಲೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
2011ರ ವಿಶ್ವಕಪ್ ಟ್ರೋಫಿ ಮುಟ್ಟಿ ಭಾವುಕರಾದ ಕ್ಯಾಪ್ಟನ್ ಕೂಲ್ ಧೋನಿ!
ಕಳೆದ ವರ್ಷ ಸುಮಿತ್ ತಾವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಳಲು ತೋಡಿಕೊಂಡಿದ್ದರು. ಇದೀಗ ಮಾಂಟೆ ಕಾರ್ಲೋ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸುಮಿತ್‌ಗೆ ಹೈದರಾಬಾದ್‌ನ ಉದ್ಯಮಿಯೊಬ್ಬರು 10 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಕುಸ್ತಿ: ಭಾರತಕ್ಕೆ 2 ಪದಕ
ಬಿಶ್ಕೆಕ್(ಕಿರ್ಗಿಸ್ತಾನ): ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ ದೊರೆತಿದೆ. ಮಹಿಳೆಯರ 68 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಭಾರತದ ರಾಧಿಕಾ ಜಪಾನ್‌ನ ಒಸಾಕಿ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರೆ, 50 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಶಿವಾನಿ ಗೆಲುವು ಸಾಧಿಸಿದರು.
ಹಾಕಿ: ಆಸೀಸ್ ವಿರುದ್ಧ ಭಾರತ 0-5 ವೈಟ್‌ವಾಶ್
ಪರ್ತ್: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವ ಸಲು ವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಪುರು ಷರ ಹಾಕಿ ತಂಡ, 5 ಪಂದ್ಯಗಳ ಸರಣಿಯನ್ನು 0-5ರಲ್ಲಿ ಸೋತಿದೆ. ಶನಿವಾರ ನಡೆದ 5ನೇ ಪಂದ್ಯದಲ್ಲಿ ಭಾರತ 2-3 ಗೋಲುಗಳ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ 1-5ರಿಂದ ಸೋತಿದ್ದ ಭಾರತ, ನಂತರ 2-4, 1-2, 1-3ರ ಅಂತರದಲ್ಲಿ ಪರಾಭವಗೊಂಡಿತ್ತು.
ಮುಂಬೈ ಇಂಡಿಯನ್ಸ್‌ಗೆ ಬಸ್ ಡ್ರೈವರ್ ಆದ ರೋಹಿತ್ ಶರ್ಮಾ, ವಿಡಿಯೋ ವೈರಲ್!
ಕೊಡವ ಹಾಕಿ: ಮುಂದಿನ ಸುತ್ತಿಗೆ ನೆಲ್ಲಮಕ್ಕಡ ತಂಡ
ನಾಪೋಕ್ಲು: ನೆಲ್ಲಮಕ್ಕಡ ತಂಡದ ಆಟಗಾರ ಪ್ರತೀಕ್ ಪೂವಣ್ಣ ಹೊಡೆದ ಎರಡು ಗೋಲುಗಳು, ಆಶಿಕ್ ಅಪ್ಪಣ್ಣ ಮತ್ತು ಅಯ್ಯಪ್ಪ ಹೊಡೆದ ತಲಾ ಒಂದು ಗೋಲುಗಳ ನೆರವಿನಿಂದ ದಾಸಂಡ ತಂಡದ ವಿರುದ್ಧ 4-0 ಅಂತರದ ಭರ್ಜರಿ ಜಯ ಗಳಿಸಿ ನೆಲ್ಲಮಕ್ಕಡ ಮುಂದಿನ ಸುತ್ತು ಪ್ರವೇಶಿಸಿತು.
ಇನ್ನು ಕರ್ತ ಮಾಡ ತಂಡ ಮೊಣ್ಣಂಡ ವಿರುದ್ಧ3-0 ಯಲ್ಲಿ ಮಾದಂಡ ವಿರುದ್ಧ ಕಲ್ಯಾಟಂಡ 1-0ಯಲ್ಲಿ ಅಮ್ಮಂಡ ವಿರುದ್ಧ ಅರೆಯಡ 2-0ಯಲ್ಲಿ ಅಪ್ಪಡೇರಂಡ ವಿರುದ್ಧ ಮಂಡೆಪಂಡ 4-1ರಲ್ಲಿ ಗೆದ್ದು ಮುಂದಿನ ಸುತ್ತಿಗೇರಿತು.