ಇಂಡೋ-ಆಸಿಸ್ ಸರಣಿ: ತಪ್ಪು ಭವಿಷ್ಯ ನುಡಿದ ರಿಕಿ ಪಾಂಟಿಂಗ್ ಫುಲ್ ಟ್ರೋಲ್!

Published : Jan 08, 2019, 10:32 AM IST
ಇಂಡೋ-ಆಸಿಸ್ ಸರಣಿ: ತಪ್ಪು ಭವಿಷ್ಯ ನುಡಿದ ರಿಕಿ ಪಾಂಟಿಂಗ್ ಫುಲ್ ಟ್ರೋಲ್!

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದಿದ್ದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದೀಗ ಟ್ರೋಲ್ ಆಗಿದ್ದಾರೆ. ಪಾಂಟಿಂಗ್ ಪ್ರತಿಯೊಂದು ಮಾತು ಕೂಡ ಇದೀಗ ಉಲ್ಟಾ ಹೊಡೆದಿದೆ.

ಸಿಡ್ನಿ(ಜ.08): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ. ಒಂದೆಡೆ ಟೀಂ ಇಂಡಿಯಾ ಕ್ರಿಕೆಟಿಗರು ಸೆಲೆಬ್ರೇಷನ್ ಮೂಡ್‌ನಲ್ಲಿದ್ದರೆ, ಇತ್ತ ಅಭಿಮಾನಿಗಳು ಕೂಡ ಐತಿಹಾಸಿಕ ಗೆಲುವನ್ನ ಆಚರಿಸುತ್ತಿದ್ದಾರೆ. ಇದೇ ವೇಳೆ ಸರಣಿಗೂ ಮುನ್ನ ಭವಿಷ್ಯ ನುಡಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಫುಲ್ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಜನವರಿ 8 ಮತ್ತು 9 ಭಾರತ್‌ ಬಂದ್‌: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಟೆಸ್ಟ್ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಫಲಿತಾಂಶದ ಭವಿಷ್ಯ ನುಡಿದಿದ್ದರು. ಆದರೆ ರಿಕಿ ಭವಿಷ್ಯ ಉಲ್ಟಾ ಆಗಿದೆ. ಇಷ್ಟೇ ಅಲ್ಲ ರಿಕಿ ಪಾಂಟಿಂಗ್ ಹೇಳಿದ ಪ್ರತಿಯೊಂದು ಭವಿಷ್ಯವೂ ಉಲ್ಟಾ ಹೊಡೆದಿದೆ. ಪಾಂಟಿಂಗ್ 2-1 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ಗೆಲ್ಲುತ್ತೆ ಎಂದಿದ್ದರು. ಆದರೆ ಭಾರತ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. 

ಇದನ್ನೂ ಓದಿ: 2019ರಲ್ಲಿ ಕೊಹ್ಲಿ ಪುಡಿ ಮಾಡಲಿದ್ದಾರೆ ತೆಂಡುಲ್ಕರ್ 5 ದಾಖಲೆಗಳು!

ಸರಣಿಯಲ್ಲಿ ಆಸಿಸ್ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ರನ್ ಮಳೆ ಸುರಿಸಲಿದ್ದಾರೆ. ಕೊಹ್ಲಿಯನ್ನ ಹಿಂದಿಕ್ಕಲಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದರು. ಆದರೆ ಖವಾಜ 198 ರನ್ ಸಿಡಿಸಿದ್ದರೆ, ಕೊಹ್ಲಿ 282 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ನಿಧಾನಗತಿಯ ಆಟವೇ ಭಾರತಕ್ಕೆ ಮುಳುವಾಗಲಿದೆ ಎಂದಿದ್ದರು. ಆದರೆ ಆಸ್ಟ್ರೇಲಿಯಾ ಇಡೀ ತಂಡ ಪೂಜಾರ ಬ್ಯಾಟಿಂಗ್ ಮಾಡಿದಷ್ಟು ಸಮಯ ಬ್ಯಾಟಿಂಗ್ ಮಾಡಲೇ ಇಲ್ಲ, ಅದಕ್ಕೂ ಮೊದಲೇ ಆಲೌಟ್ ಆಗಿತ್ತು.

 

 

 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!
ಕ್ಯಾಮರೋನ್ ಗ್ರೀನ್ ಬಳಿಕ ಮತ್ತೋರ್ವ ಕಾಸ್ಟ್ಲಿ ಆಟಗಾರನನ್ನು ಖರೀದಿಸಿದ ಕೋಲ್ಕತಾ! ಕೆಕೆಆರ್ ಈಗ ಮತ್ತಷ್ಟು ಬಲಿಷ್ಠ