2023ರಿಂದ ಭಾರತದಲ್ಲಿ ಮೋಟೋ ಜಿಪಿ ಬೈಕ್ ರೇಸ್..!

By Kannadaprabha NewsFirst Published Sep 22, 2022, 10:05 AM IST
Highlights

2023ರಿಂದ 7 ವರ್ಷಗಳ ಕಾಲ ಭಾರತದಲ್ಲಿ ನಡೆಯಲಿದೆಮೋಟೋ ಜಿಪಿ 
‘ಭಾರತೀಯ ಗ್ರ್ಯಾನ್‌ ಪ್ರಿ’ ಹೆಸರಿನ ರೇಸ್‌ ನಡೆಸಲು ಮೋಟೋ ಜಿಪಿ ಆಯೋಜಕರು ನಿರ್ಧಾರ
ಮೊದಲ ರೇಸ್‌ನ ದಿನಾಂಕಗಳೂ ಇನ್ನೂ ನಿಗದಿಯಾಗಿಲ್ಲ

ನವದೆಹಲಿ(ಸೆ.22): ದೇಶದಲ್ಲಿ ಮೋಟಾರ್‌ ಸ್ಪೋರ್ಟ್ಸ್‌ಗೆ ಭಾರೀ ಉತ್ತೇಜನ ನೀಡುವ ಬೆಳವಣೆಗೆಯೊಂದು ನಡೆದಿದೆ. ಕಾರ್‌ ರೇಸಿಂಗ್‌ನಲ್ಲಿ ಹೇಗೆ ಫಾರ್ಮುಲಾ 1 ಉತ್ಕೃಷ್ಟ ರೇಸಿಂಗ್‌ ಎನಿಸಿಕೊಳ್ಳುತ್ತದೆಯೋ ಅದೇ ರೀತಿ ಬೈಕ್‌ ರೇಸಿಂಗ್‌ನಲ್ಲಿ ಮೋಟೋ ಜಿಪಿ ಇದೆ. 2023ರಿಂದ 7 ವರ್ಷಗಳ ಕಾಲ ಭಾರತದಲ್ಲಿ ಮೋಟೋ ಜಿಪಿ ನಡೆಯಲಿದೆ. ‘ಭಾರತೀಯ ಗ್ರ್ಯಾನ್‌ ಪ್ರಿ’ ಹೆಸರಿನ ರೇಸ್‌ ನಡೆಸಲು ಮೋಟೋ ಜಿಪಿ ಆಯೋಜಕರಾದ ಸ್ಪೇನ್‌ನ ಡೊರ್ನಾ ಸ್ಪೋಟ್ಸ್‌ರ್‍ ಹಾಗೂ ಭಾರತದ ಫೇರ್‌ಸ್ಟ್ರೀಟ್‌ ಸ್ಪೋಟ್ಸ್‌ರ್‍ ಸಂಸ್ಥೆಗಳು ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದವು. ಮೊದಲ ರೇಸ್‌ನ ದಿನಾಂಕಗಳೂ ಇನ್ನೂ ನಿಗದಿಯಾಗಿಲ್ಲ.

ನೋಯ್ಡಾದಲ್ಲೇ ಆಯೋಜನೆ ಏಕೆ?

ರೇಸ್‌ ಆಯೋಜನೆಗೂ ಮುನ್ನ ಟ್ರ್ಯಾಕ್‌ಗೆ ಅಂತಾರಾಷ್ಟ್ರೀಯ ಮೋಟಾರ್‌ ಸ್ಪೋಟ್ಸ್‌ರ್‍ ಫೆಡರೇಷನ್‌(ಎಫ್‌ಐಎಂ) ಮಾನ್ಯತೆ ಅಗತ್ಯ. ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬುದ್ಧ ಅಂತಾರಾಷ್ಟ್ರೀಯ ರೇಸ್‌ ಸಕ್ರ್ಯೂಟ್‌(ಬಿಐಸಿ) 2011ರಿಂದ 2013ರ ವರೆಗೂ ಇಂಡಿಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ 1 ರೇಸ್‌ಗೆ ಆತಿಥ್ಯ ವಹಿಸಿತ್ತು. ಎಫ್‌1 ರೇಸ್‌ಗೆ ಸೂಕ್ತವಾದ ಟ್ರ್ಯಾಕ್‌ ಇದಾಗಿದ್ದು, ಬೈಕ್‌ ರೇಸಿಂಗ್‌ಗೆ ಟ್ರ್ಯಾಕ್‌ನಲ್ಲಿ ಕೆಲ ಸಣ್ಣ ಪುಟ್ಟಬದಲಾವಣೆಗಳನ್ನು ಮಾಡಬೇಕಾಗಬಹುದು.

ಭಾರತದ ಆಯ್ಕೆ ಏಕೆ?

ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನದ ಮಾರುಕಟ್ಟೆಹೊಂದಿದೆ. ದಿನೇದಿನೇ ಹೊಸ ಮಾದರಿ, ವಿಶಿಷ್ಟವಿನ್ಯಾಸಗಳನ್ನು ಒಳಗೊಂಡ ಬೈಕ್‌ಗಳು ಭಾರತದಲ್ಲಿ ಅನಾವರಣಗೊಳ್ಳುತ್ತಿವೆ. ಮಾರುಕಟ್ಟೆಪಾಲು ಹೆಚ್ಚಿಸಿಕೊಳ್ಳಲು ಬೈಕ್‌ ತಯಾರಕ ಸಂಸ್ಥೆಗಳಿಗೆ ‘ಭಾರತೀಯ ಗ್ರ್ಯಾನ್‌ ಪ್ರಿ’ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ಆಯೋಜಕರದ್ದು. ಅಲ್ಲದೇ, ಇಲ್ಲಿನ ಯುವ ಜನತೆ ಬೈಕ್‌ ರೇಸಿಂಗ್‌ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಮೋಟೋ ಜಿಪಿ ಆಯೋಜನೆಗೆ ಹೇಳಿ ಮಾಡಿಸಿದ ಸ್ಥಳ ಎನಿಸಿದೆ.

PKL9 ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಅ.7 ರಂದು ಬೆಂಗಳೂರಲ್ಲಿ ಅದ್ಧೂರಿ ಉದ್ಘಾಟನೆ!

ಭಾರತಕ್ಕೆ ಏನು ಲಾಭ?

ಮೋಟೋ ಜಿಪಿ ಆಯೋಜನೆಯಿಂದ ರೇಸ್‌ ಸಮಯದಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೇರವಾಗಿ 5000 ಮಂದಿಗೆ ಉದ್ಯೋಗ ಸಿಗಲಿದೆ. ಅಲ್ಲದೇ ಪರೋಕ್ಷವಾಗಿ 50000ಕ್ಕೂ ಅಧಿಕ ಮಂದಿಗೆ ನೌಕರಿ ದೊರೆಯಲಿದೆ ಎಂದು ಆಯೋಜಕರು ಅಂದಾಜಿಸಿದ್ದಾರೆ.

ಒಂದೇ ನಡೆ ಬಳಿಕ ಹೊರನಡೆದ ಕಾಲ್‌ರ್‍ಸನ್‌: ವಿವಾದ!

ನವದೆಹಲಿ: ವಿಶ್ವ ಚೆಸ್‌ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸನ್‌ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೋಮವಾರ ಪ್ರತಿಷ್ಠಿತ ಆನ್‌ಲೈನ್‌ ಜನರೇಷನ್‌ ಕಪ್‌ ಟೂರ್ನಿಯ 6ನೇ ಸುತ್ತಿನ ಪಂದ್ಯದ ವೇಳೆ ಅಮೆರಿಕದ 19 ವರ್ಷದ ಗ್ರ್ಯಾನ್‌ ಮಾಸ್ಟರ್‌ ಹನ್ಸ್‌ ನೀಮ್ಹನ್‌ ವಿರುದ್ಧ ಕೇವಲ ಒಂದೇ ಒಂದು ನಡೆ ಬಳಿಕ ಪಂದ್ಯದಿಂದ ನಿವೃತ್ತಿ ಪಡೆದಿದ್ದಾರೆ.

ಈ ಹಿಂದೆ ನೀಮ್ಹನ್ಸ್‌ 2 ಆನ್‌ಲೈನ್‌ ಪಂದ್ಯಗಳಲ್ಲಿ ತಾವು ಮೋಸವೆಸೆಗಿದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಕಾಲ್‌ರ್‍ಸನ್‌ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅಮೆರಿಕ ಆಟಗಾರನ ವಿರುದ್ಧ ಆಡಲು ಇಷ್ಟವಿಲ್ಲದೇ ಈ ರೀತಿ ಒಂದೇ ನಡೆ ಬಳಿಕ ಹೊರನಡೆಯುವ ಮೂಲಕ ತಮ್ಮ ಪ್ರತಿಭಟನೆ ಪ್ರದರ್ಶಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಲ್‌ರ್‍ಸನ್‌ ನಡೆದುಕೊಂಡ ರೀತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

‘ಆಟಗಾರನೊಬ್ಬ ತನ್ನ ಎದುರಾಳಿ ತಪ್ಪಿತಸ್ಥ ಇಲ್ಲವೇ ಮೋಸಗಾರ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ. ಮ್ಯಾಗ್ನಸ್‌ ಸೇರಿ ಅಗ್ರ ಆಟಗಾರರ ಜೊತೆ ಮಾತುಕತೆ ನಡೆಸಲಿದ್ದೇವೆ’ ಎಂದು ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ನ ಮುಖ್ಯಸ್ಥ ಎಮಿಲ್‌ ಸುಟೊವ್ಸಿಕ ಹೇಳಿದ್ದಾರೆ.

click me!