ಪಾಕಿಸ್ತಾನದಲ್ಲಿ ಭಾರತ ಟೆನಿಸ್ ತಂಡಕ್ಕೆ ಭಾರಿ ಭದ್ರತೆ..! ಝೀರೋ ಟ್ರಾಫಿಕ್ ಸೌಲಭ್ಯ

By Kannadaprabha News  |  First Published Jan 30, 2024, 1:02 PM IST

ಭಾರತ ತಂಡಕ್ಕೆ ವಿವಿಐಪಿ ದರ್ಜೆಯ, ನಾಲ್ಕರಿಂದ ಐದು ಹಂತಗಳಲ್ಲಿ ಭದ್ರತೆ ನೀಡಲಾಗುತ್ತಿದೆ. ಪಂದ್ಯಗಳು ನಡೆಯಲಿರುವ ಕ್ರೀಡಾಂಗಣವನ್ನು ಪ್ರತಿ ದಿನವೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಲಿದ್ದು, ಆ ಬಳಿಕವಷ್ಟೇ ಪ್ರತಿಯೊಬ್ಬರನ್ನೂ ಒಳಕ್ಕೆ ಬಿಡಲಾಗುತ್ತದೆ


ಇಸ್ಲಾಮಾಬಾದ್(ಜ.30): 60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಿರುವ ಭಾರತ ಡೇವಿಸ್ ಕಪ್ ಟೆನಿಸ್ ತಂಡಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಭಾನುವಾರ ರಾತ್ರಿ ಭಾರತದ ಐವರು ಆಟಗಾರರು, ತಲಾ ಇಬ್ಬರು ಫಿಸಿಯೋಗಳು ಹಾಗೂ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ಅಧಿಕಾರಿಗಳು ಇಸ್ಲಾಮಾಬಾದ್ ತಲುಪಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವ ಗುಂಪು-1ರ ಪ್ಲೇ-ಆಫ್ ಪಂದ್ಯ ಫೆ.3, 4ರಂದು ನಡೆಯಲಿದೆ.

ಭಾರತ ತಂಡಕ್ಕೆ ವಿವಿಐಪಿ ದರ್ಜೆಯ, ನಾಲ್ಕರಿಂದ ಐದು ಹಂತಗಳಲ್ಲಿ ಭದ್ರತೆ ನೀಡಲಾಗುತ್ತಿದೆ. ಪಂದ್ಯಗಳು ನಡೆಯಲಿರುವ ಕ್ರೀಡಾಂಗಣವನ್ನು ಪ್ರತಿ ದಿನವೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಲಿದ್ದು, ಆ ಬಳಿಕವಷ್ಟೇ ಪ್ರತಿಯೊಬ್ಬರನ್ನೂ ಒಳಕ್ಕೆ ಬಿಡಲಾಗುತ್ತದೆ. ಆಟಗಾರರು ತೆರಳುವ ವಾಹನಗಳ ಅಕ್ಕಪಕ್ಕದಲ್ಲಿ ಭದ್ರತಾ ವಾಹನಗಳು ಇರಲಿದ್ದು, ಝೀರೋ ಟ್ರಾಫಿಕ್ ಮೂಲಕ ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ. 

Tap to resize

Latest Videos

Pro Kabaddi League ಹರ್ಯಾಣ ಸ್ಟೀಲರ್ಸ್‌, ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಜಯ

ಇಸ್ಲಾಮಾಬಾದ್ ನಗರದಲ್ಲಿ ಸುಮಾರು 10,000 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪಾಕಿಸ್ತಾನ ವಾಯು ಸೇನೆಯೂ ಇಡೀ ನಗರದ ಮೇಲೆ ಕಣ್ಣಿಡಲಿದೆ ಎಂದು ಭದ್ರತಾ ವ್ಯವಸ್ಥೆಯ ಮುಖ್ಯಸ್ಥ ಕರ್ನಲ್ ಗುಲ್ ರೆಹಮಾನ್ ತಿಳಿಸಿದ್ದಾರೆ. ಭಾರತ ತಂಡದ ಆಟಗಾರರು ಹೋಟೆಲ್, ಕ್ರೀಡಾಂಗಣ ಹೊರತುಪಡಿಸಿ ಉಳಿದೆಡೆ ತೆರಳಲು ಅನುಮತಿ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಪಾಕಿಸ್ತಾನ ಟೆನಿಸ್ ಫೆಡರೇಶನ್ (ಪಿಟಿಎಫ್) ಅಧಿಕಾರಿಗಳು ತಿಳಿಸಿದ್ದಾರೆ. 

Indian players seem comfortable in Pakistan ahead of Davis Cup tie 🇵🇰🇮🇳🎾

Hope BCCI is watching 😉 pic.twitter.com/bzjKt16cly

— Muneeb Farrukh (@Muneeb313_)

ಆಟಗಾರರು ಹೊರ ಹೋಗಲು ಇಚ್ಛಿಸಿದರೆ, ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ಭಾರತ ತಂಡ ಇಸ್ಲಾಮಾಬಾದ್‌ನಲ್ಲಿ ಅಭ್ಯಾಸ ನಡೆಸಿತು. ಹುಲ್ಲಿನ ಅಂಕಣದಲ್ಲಿ ಪಂದ್ಯ ನಡೆಯಲಿದ್ದು, ಭಾರತ ಈ ಪಂದ್ಯ ಗೆದ್ದು ವಿಶ್ವ ಗುಂಪು-1ರಲ್ಲೇ ಉಳಿಯುವ ನಿರೀಕ್ಷೆಯಲ್ಲಿದೆ.

ಈ ಕ್ರಿಕೆಟಿಗನ ಬಳಿಯಿದೆ ₹1.5 ಲಕ್ಷ ಕೋಟಿ ಸಂಪತ್ತು..! ಈತನ ಪಿತ್ರಾರ್ಜಿತ ಆಸ್ತಿಯೇ 70 ಸಾವಿರ ಕೋಟಿ..!

ಭಾರತ ಟೆನಿಸ್‌ ತಂಡ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ತೆರಳಿದ್ದು 1964ರಲ್ಲಿ. ಆ ಮುಖಾಮುಖಿಯಲ್ಲಿ ಭಾರತ 4-0ಯಲ್ಲಿ ಜಯಭೇರಿ ಬಾರಿಸಿತ್ತು. ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್‌ ಕಪ್‌ನಲ್ಲಿ 8 ಬಾರಿ ಸೆಣಸಿದ್ದು, ಒಮ್ಮೆಯೂ ಸೋತಿಲ್ಲ.

click me!