ದಸರಾ ಕ್ರೀಡಾಕೂಟ: ಸಮಗ್ರ ಪ್ರಶಸ್ತಿ ಜಯಿಸಿದ ಆತಿಥೇಯ ಮೈಸೂರು

By Kannadaprabha NewsFirst Published Oct 3, 2022, 10:59 AM IST
Highlights

ದಸರಾ ಕ್ರೀಡಾಕೂಟದಲ್ಲಿ ಭರ್ಜರಿ ಪ್ರದರ್ಶನ ತೋರಿದ ಆತಿಥೇಯ ಮೈಸೂರು
ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಸಾಧಿಸಿದ ಮೈಸೂರು ವಿಭಾಗ
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾವಳಿ

ಮೈಸೂರು(ಅ.03): ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್‌ ಕ್ರೀಡಾಕೂಟದಲ್ಲಿ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಸಾಧಿಸಿದ ಮೈಸೂರು ವಿಭಾಗ 157 ಅಂಕಗಳೊಡನೆ ಸಮಗ್ರ ತಂಡ ಪ್ರಶಸ್ತಿ ಪಡೆದಿದೆ.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾವಳಿಯ ಅಥ್ಲೆಟಿಕ್ಸ್‌, ಈಜು, ಜಿಮ್ನಾಸ್ಟಿಕ್‌, ಗುಂಪುಕ್ರೀಡೆ ಸೇರಿ ಎಲ್ಲಾ ವಿಭಾಗದಲ್ಲೂ ಮೈಸೂರು ವಿಭಾಗ ಪ್ರಾಬಲ್ಯ ಸಾಧಿಸಿತು. 135 ಅಂಕಗಳೊಂದಿಗೆ ಬೆಂಗಳೂರು ನಗರ ವಿಭಾಗ ದ್ವಿತೀಯ, 77 ಅಂಕ ಗಳಿಸಿದ ಬೆಳಗಾವಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಅಥ್ಲೆಟಿಕ್ಸ್‌ನಲ್ಲಿ ಮೈಸೂರು ತಂಡ 203 ಅಂಕಗಳೊಡನೆ ಪ್ರಶಸ್ತಿ ಪಡೆದಿದೆ. ಬೆಂಗಳೂರು ನಗರ ದ್ವಿತೀಯ(114 ಅಂಕ), ಬೆಳಗಾವಿ (95 ಅಂಕ) ತೃತೀಯ ಸ್ಥಾನ ಪಡೆಯಿತು.

3 ಕೂಟ ದಾಖಲೆ

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಎಚ್‌.ಆರ್‌. ನವಮಿ ಮತ್ತು ಚೈತ್ರಾ ದೇವಾಡಿಗ ಅವರಿಗೆ ತಲಾ ಎರಡು ಚಿನ್ನದ ಪದಕ ಲಭಿಸಿದ್ದು, ಈ ಪೈಕಿ ಚೈತ್ರಾ ಅವರು ಎರಡು ಕೂಟ ದಾಖಲೆ ನಿರ್ಮಿಸಿದ್ದಾರೆ. ಪುರುಷರ ವೈಯಕ್ತಿಕ ಪ್ರಶಸ್ತಿಯಲ್ಲಿ ಜೋನಥನ್‌ ಸ್ಯಾಮ್ಯುಯಲ್‌ ಜಾಜ್‌ರ್‍ 2 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 3000 ಮೀ. ಮಹಿಳೆಯರ ಓಟದಲ್ಲಿ ಮೈಸೂರಿನ ಚೈತ್ರಾ ದೇವಾಡಿಗ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 10.5.72 ನಿಮಿಷದಲ್ಲಿ ಚೈತ್ರಾ ಗುರಿ ತಲುಪಿ, 2012ರಲ್ಲಿ ತಿಪ್ಪವ್ವ ಸಣ್ಣಕ್ಕಿ ನಿರ್ಮಿಸಿದ್ದ (10.22.70 ನಿ.) ದಾಖಲೆ ಮುರಿದರು.

ತ್ರಿಬಲ್‌ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿಯೂ ನೂತನ ಕೂಟ ದಾಖಲೆಯಾಗಿದೆ. ಪುರುಷರ ವಿಭಾಗದಲ್ಲಿ ಮೈಸೂರಿನ ಬಿ.ಮಹಂತ್‌ 15.25 ಮೀ. ದೂರ ಎಸೆದು ದಾಖಲೆ ನಿರ್ಮಿಸಿದರು. ಕಾರ್ತಿಕ್‌ ಬಸಗೊಂಡಪ್ಪ ಐಹೊಳೆ ಅವರು 2016ರಲ್ಲಿ (15.04) ನಿರ್ಮಿಸಿದ್ದ ದಾಖಲೆ ಸರಿಗಟ್ಟಿದರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಜಿ. ಪವಿತ್ರಾ 12.69 ಮೀ. ಎಸೆಯುವ ಮೂಲಕ ನೂತನ ದಾಖಲೆ ನಿರ್ಮಿಸಿದರು. 2013 ಜಾಯ್‌ಲಿನ್‌ ಲೋಬೋ (12.38ಮೀ.) ಅವರ ದಾಖಲೆ ಸರಿಗಟ್ಟಿದರು.

National Games 2022: ಈಜಿನಲ್ಲಿ ಕರ್ನಾಟಕ ಮತ್ತೊಮ್ಮೆ ಪ್ರಾಬಲ್ಯ

ಪುರುಷರ ಕಬ್ಬಡಿಯಲ್ಲಿ ಬೆಂಗಳೂರು ನಗರ ಪ್ರಥಮ, ಮೈಸೂರು ದ್ವಿತೀಯ, ಬೆಂ.ಗ್ರಾಮಾಂತರ ತೃತೀಯ, ಮಹಿಳೆಯರ ವಿಭಾಗದಲ್ಲಿ ಮೈಸೂರು ಪ್ರಥಮ, ಬೆಳಗಾವಿ ದ್ವಿತೀಯ ಮತ್ತು ಬೆಂಗಳೂರು ನಗರ ತೃತೀಯ ಸ್ಥಾನಗಳಿಸಿದೆ. ಹಾಕಿ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಪ್ರಥಮ, ಬೆಳಗಾವಿ ದ್ವಿತೀಯ ಮತ್ತು ಮೈಸೂರು ತೃತೀಯ, ಮಹಿಳೆಯರ ವಿಭಾಗದಲ್ಲಿ ಮೈಸೂರು ಪ್ರಥಮ, ಬೆಂಗಳೂರು ಗ್ರಾಮಾಂತರ ದ್ವಿತೀಯ ಮತ್ತು ಬೆಂಗಳೂರು ನಗರ ತೃತೀಯ ಸ್ಥಾನಗಳಿಸಿತು.

click me!