ಕ್ರಿಕೆಟ್‌ನಂತೆ ಎಲ್ಲಾ ಕ್ರೀಡೆ ಸಮಾನವಾಗಿ ನೋಡಿ: ಮಹಾರಾಷ್ಟ್ರ ಸರ್ಕಾರದ ವಿರುದ್ದ ಗುಡುಗಿದ ಖ್ಯಾತ ಶಟ್ಲರ್ ಚಿರಾಗ್ ಶೆಟ್ಟಿ

By Kannadaprabha News  |  First Published Jul 8, 2024, 11:32 AM IST

ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಿಗುವ ಪ್ರೋತ್ಸಾಹದಂತೆ ಉಳಿದ ಕ್ರೀಡೆಗಳಿಗೂ ಸೂಕ್ತ ಪ್ರೋತ್ಸಾಹ ಸಿಗಲಿ. ಎಲ್ಲಾ ಕ್ರೀಡೆಗಳನ್ನು ಸರ್ಕಾರ ಸಮಾನವಾಗಿ ಕಾಣಲಿ ಎಂದು ಖ್ಯಾತ ಬ್ಯಾಡ್ಮಿಂಟನ್ ಪಟು ಚಿರಾಗ್ ಶೆಟ್ಟಿ ಅಭಿಪ್ರಾಯಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಮುಂಬೈ: ಥಾಮಸ್‌ ಕಪ್‌ ಗೆಲುವು ಕ್ರಿಕೆಟ್‌ನ ವಿಶ್ವಕಪ್‌ಗೆ ಸಮ. ಆದರೆ ಕ್ರಿಕೆಟಿಗರಿಗೆ ಸಿಕ್ಕ ಸನ್ಮಾನ ನಮಗೆ ಸಿಕ್ಕಿಲ್ಲ ಎಂದು ಭಾರತದ ತಾರಾ ಶಟ್ಲರ್‌ ಚಿರಾಗ್‌ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ರೋಹಿತ್‌ ಸೇರಿ ನಾಲ್ವರಿಗೆ ಮಹಾರಾಷ್ಟ ಸರ್ಕಾರ ಸನ್ಮಾನ ಮಾಡಿ, ನಗದು ಬಹುಮಾನ ಘೋಷಿಸಿದ ಬಳಿಕ ಮಹಾರಾಷ್ಟ್ರದ ಚಿರಾಗ್‌ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ‘ಥಾಮಸ್‌ ಕಪ್‌ ವಿಜೇತ ತಂಡದಲ್ಲಿ ನಾನೊಬ್ಬನೇ ಮಹಾರಾಷ್ಟ್ರದವನು. ವಿಶ್ವಕಪ್‌ ಗೆದ್ದ ಕ್ರಿಕೆಟಿಗರನ್ನು ಸರ್ಕಾರ ಗೌರವಿಸಿದೆ. ಇದೇ ರೀತಿ ನಮ್ಮನ್ನೂ ಗುರುತಿಸಬೇಕಿತ್ತು. ಸರ್ಕಾರ ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ನೋಡಬೇಕು’ ಎಂದಿದ್ದಾರೆ.

Latest Videos

undefined

ಮಹಾರಾಷ್ಟ್ರ ವಿಧಾನಸಭೆಯಲ್ಲಿ ರೋಹಿತ್‌, ಸೂರ್ಯಕುಮಾರ್‌ಗೆ ಸನ್ಮಾನ; 11 ಕೋಟಿ ಬಹುಮಾನ

ನಾನು ಕ್ರಿಕೆಟ್‌ ವಿರೋಧಿಯಲ್ಲ. ಆದರೆ ಕ್ರಿಕೆಟಿಗರಿಗೆ ಕೊಡುವ ಬೆಲೆ ಸರ್ಕಾರ ಬ್ಯಾಡ್ಮಿಂಟನ್ ಸಾಧಕರಿಗೆ ಕೊಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮನ್ನು ಸನ್ಮಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿರಾಗ್‌ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಜೊತೆಗೂಡಿ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿ ಹಲವು ಜಾಗತಿಕ ಕೂಟಗಳಲ್ಲಿ ಚಾಂಪಿಯನ್ ಆಗಿದ್ದಾರೆ.

ಜೆಸ್ವಿನ್‌, ಅಂಕಿತಾ ಧ್ಯಾನಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯರ ಸಂಖ್ಯೆ 30ಕ್ಕೆ ಹೆಚ್ಚಳವಾಗಿದೆ. ಲಾಂಗ್‌ ಜಂಪ್‌ ಪಟು ಜೆಸ್ವಿನ್‌ ಆಲ್ಡ್ರಿನ್‌ ಹಾಗೂ 5000 ಮೀ. ಓಟಗಾರ್ತಿ ಅಂಕಿತಾ ಧ್ಯಾನಿ ವಿಶ್ವ ರ್‍ಯಾಂಕಿಂಗ್‌ ಆಧಾರದ ಮೇಲೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿಕೊಂಡರು. 

ವಿಂಬಲ್ಡನ್: ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಇತ್ತೀಚೆಗಷ್ಟೇ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ 28 ಸ್ಪರ್ಧಿಗಳ ಹೆಸರು ಪ್ರಕಟಿಸಿತ್ತು. 22 ವರ್ಷದ ಅಂಕಿತಾ 2023ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರೆ, ಜೆಸ್ವಿನ್‌ ಇತ್ತೀಚೆಗಷ್ಟೇ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪಡೆದಿದ್ದರು. ಒಲಿಂಪಿಕ್ಸ್‌ ಜುಲೈ 26ಕ್ಕೆ ಆರಂಭಗೊಳ್ಳಲಿದ್ದು, ಆಗಸ್ಟ್‌ 1ರಿಂದ ಅಥ್ಲೆಟಿಕ್ಸ್‌ ಶುರುವಾಗಲಿದೆ.

ಡೈಮಂಡ್‌ ಲೀಗ್‌ನಲ್ಲಿ ಸಾಬ್ಳೆ ಹೊಸ ರಾಷ್ಟ್ರೀಯ ದಾಖಲೆ

ಪ್ಯಾರಿಸ್‌: ಭಾನುವಾರ ಇಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಭಾರತದ ಅವಿನಾಶ್‌ ಸಾಬ್ಳೆ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಆದರೆ ಜಾವೆಲಿನ್‌ ಎಸೆತದಲ್ಲಿ ಕಿಶೋರ್‌ ಜೆನಾ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಒಲಿಂಪಿಕ್ಸ್‌ಗೆ ಅಂತಿಮ ಹಂತದ ಸಿದ್ಧತೆ ನಡೆಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಅವಿನಾಶ್‌ 8ನೇ ಸ್ಥಾನ ಪಡೆದರು. ಆದರೆ ಸ್ಪರ್ಧೆಯಲ್ಲಿ 8 ನಿಮಿಷ 9.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆ(8 ನಿಮಿಷ 11.20 ಸೆಕೆಂಡ್‌)ಯನ್ನು ಉತ್ತಮಪಡಿಸಿಕೊಂಡರು. ಅವರು 2022ರಲ್ಲಿ ಈ ದಾಖಲೆ ಬರೆದಿದ್ದರು.

ಇನ್ನು, ಪುರುಷರ ಜಾವೆಲಿನ್‌ ಎಸೆತದಲ್ಲಿ ಕಿಶೋರ್‌ ಮೊದಲ ಎಸೆತದಲ್ಲಿ 78.10 ಮೀ. ದೂರ ದಾಖಲಿಸಿದರು. ಆ ಬಳಿಕ ಯಾವುದೇ ಪ್ರಯತ್ನದಲ್ಲೂ ಅವರಿಗೆ 80 ಮೀ. ದೂರ ದಾಖಲಿಸಲಾಗಲಿಲ್ಲ. ಜರ್ಮನಿಯ ವೆಬರ್‌ ಜೂಲಿಯನ್ 85.91 ಮೀ. ದೂರದೊಂದಿಗೆ ಅಗ್ರಸ್ಥಾನಿಯಾದರೆ, ಗ್ರೆನಡಾದ ಪೀಟರ್ಸ್ ಆ್ಯಂಡರ್‌ಸನ್‌(85.19 ಮೀ.) ದ್ವಿತೀಯ, ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಚ್‌(85.04) 3ನೇ ಸ್ಥಾನ ಪಡೆದರು.
 

click me!