ಕಿರಿಯರ ವಿಶ್ವ ಚೆಸ್ ಕೂಟ: ಬೆಂಗಳೂರಿನ ಚಾರ್ವಿ ವಿಶ್ವ ಚಾಂಪಿಯನ್‌

By Kannadaprabha News  |  First Published Sep 29, 2022, 10:11 AM IST

ಫಿಡೆ ವಿಶ್ವ ಕಿರಿಯರ ಚೆಸ್‌ ಚಾಂಪಿಯನ್‌ಶಿಪ್‌ನ ಅಂಡರ್‌-8 ವಿಭಾಗದಲ್ಲಿ ಚಾರ್ವಿ ಚಾಂಪಿಯನ್‌
ಬೆಂಗಳೂರು ಮೂಲದ 8 ವರ್ಷದ ಚಾರ್ವಿ ಕಿರಿಯರ ವಿಶ್ವ ಚಾಂಪಿಯನ್
2022ರಲ್ಲಿ ರಾಷ್ಟ್ರೀಯ ಅಂಡರ್‌-8 ಹಾಗೂ ಅಂಡರ್‌-10 ವಿಭಾಗಗಳಲ್ಲಿ ಚಾಂಪಿಯನ್‌ ಆಗಿದ್ದ ಚಾರ್ವಿ


ಬಟುಮಿ(ಸೆ.29): ಭಾರತದ ಎ. ಚಾರ್ವಿ ಫಿಡೆ ವಿಶ್ವ ಕಿರಿಯರ ಚೆಸ್‌ ಚಾಂಪಿಯನ್‌ಶಿಪ್‌ನ ಅಂಡರ್‌-8 ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಬೆಂಗಳೂರಿನ ಚಾರ್ವಿ 11 ಸುತ್ತುಗಳ ಸ್ಪರ್ಧೆಯ ಬಳಿಕ ಒಟ್ಟು 9.5 ಅಂಕಗಳೊಂದಿಗೆ ಇಂಗ್ಲೆಂಡ್‌ನ ಬೋಧನಾ ಶಿವಾನಂದನ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.

2022ರಲ್ಲಿ ರಾಷ್ಟ್ರೀಯ ಅಂಡರ್‌-8 ಹಾಗೂ ಅಂಡರ್‌-10 ವಿಭಾಗಗಳಲ್ಲಿ ಚಾಂಪಿಯನ್‌ ಆಗಿದ್ದ ಚಾರ್ವಿ, 7ನೇ ಸುತ್ತಿನಲ್ಲಿ ಸೋತು ಆತಂಕಕ್ಕೀಡಾಗಿದ್ದರು. ಆದರೆ ಆಘಾತದಿಂದ ಚೇತರಿಸಿಕೊಂಡು ಉತ್ತಮ ಟೈ-ಬ್ರೇಕ್‌ ಸ್ಕೋರ್‌ನ ನೆರವಿನಿಂದ ಬೋಧನಾ ವಿರುದ್ಧ ಮೇಲುಗೈ ಸಾಧಿಸಿದರು.

Little Charvi makes the country proud by winning gold at the World under-8 girls championship 2022. Experience the goosebumps as the Indian national anthem plays in Batumi, Georgia! pic.twitter.com/iBFerHgVwX

— ChessBase India (@ChessbaseIndia)

Tap to resize

Latest Videos

4ನೇ ವಯಸ್ಸಿನಲ್ಲೇ ಚೆಸ್‌ ಕಡೆ ಒಲವು!

ಚಾರ್ವಿಯನ್ನು 4ನೇ ವಯಸ್ಸಿನಲ್ಲಿ ಆಕೆಯ ಪೋಷಕರಾದ ಹಾಸನ ಮೂಲದ ಅನಿಲ್‌ ಕುಮಾರ್‌ ಹಾಗೂ ಅಖಿಲಾ ಡೇ ಕೇರ್‌ ಸೆಂಟರ್‌ಗೆ ಸೇರಿಸಿದರು. ಅಲ್ಲಿ ಆಕೆಗಿಂತ ದೊಡ್ಡ ಮಕ್ಕಳು ಚೆಸ್‌ ಆಡುವುದನ್ನು ನೋಡಿ ಕ್ರೀಡೆಯತ್ತ ಆಕರ್ಷಿತರಾದ ಚಾರ್ವಿಯನ್ನು ಅಂತಾರಾಷ್ಟ್ರೀಯ ಮಾಸ್ಟರ್‌ ಬಿ.ಎಸ್‌.ಶಿವಾನಂದ ಅವರ ಕರ್ನಾಟಕ ಚೆಸ್‌ ಅಕಾಡೆಮಿಗೆ ಕೋಚಿಂಗ್‌ಗೆ ಸೇರಿಸಿದರು. 

2019ರ ಕರ್ನಾಟಕ ರಾಜ್ಯ ಶಾಲಾ ಚೆಸ್‌ ಟೂರ್ನಿಯಲ್ಲಿ ಚಾರ್ವಿ ಅಂಡರ್‌-6 ವಿಭಾಗದಲ್ಲಿ 2ನೇ ಸ್ಥಾನ ಪಡೆದರು. ಕಳೆದ ವರ್ಷ ರಾಷ್ಟ್ರೀಯ ಶಾಲಾ ಆನ್‌ಲೈನ್‌ ಕೂಟದ ಅಂಡರ್‌-7 ವಿಭಾಗದಲ್ಲಿ ಚಿನ್ನ, ಪಶ್ಚಿಮ ಏಷ್ಯಾ ಆನ್‌ಲೈನ್‌ ಟೂರ್ನಿಯ ಅಂಡರ್‌-8 ಕೂಟದಲ್ಲಿ ಬೆಳ್ಳಿ ಗೆದ್ದಿದ್ದರು. ಸದ್ಯ ಅವರು ಮಹಿಳಾ ಗ್ರ್ಯಾಂಡ್‌ ಮಾಸ್ಟರ್‌ ಚೆನ್ನೈನ ಆರತಿ ರಾಮಸ್ವಾಮಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಅಂಚೆ ವಾಲಿಬಾಲ್‌: ಸತತ 2ನೇ ಜಯ ಕಂಡ ರಾಜ್ಯ

ಬೆಂಗಳೂರು: 35ನೇ ಅಖಿಲ ಭಾರತ ಅಂಚೆ ವಾಲಿಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 2ನೇ ಗೆಲುವು ದಾಖಲಿಸಿದೆ. ಬುಧವಾರ ನಡೆದ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ದೆಹಲಿ ವಿರುದ್ಧ 3-0(25-9, 25-17, 25-4) ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. 

National Games 2022: ಇಂದಿನಿಂದ ರಾಷ್ಟ್ರೀಯ ಗೇಮ್ಸ್ ಆರಂಭ; ಗುಜರಾತ್ ಆತಿಥ್ಯ

ಇದರೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದೆ. ಹರ್ಯಾಣ ವಿರುದ್ಧ ಮಧ್ಯಪ್ರದೇಶ, ಪಂಜಾಬ್‌ ವಿರುದ್ಧ ಕೇರಳ, ತೆಲಂಗಾಣ ವಿರುದ್ಧ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ವಿರುದ್ಧ ರಾಜಸ್ಥಾನ, ತಮಿಳುನಾಡು ವಿರುದ್ಧ ಆಂಧ್ರಪ್ರದೇಶ ತಂಡಗಳು ಜಯ ಸಾಧಿಸಿದವು.

ಫಿಫಾದಿಂದ ಚೆಟ್ರಿ ಫುಟ್ಬಾಲ್‌ ಬದುಕಿನ ಡಾಕ್ಯುಮೆಂಟ್ರಿ

ನವದೆಹಲಿ: ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌(ಫಿಫಾ), ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿಗೆ ವಿಶೇಷ ಗೌರವ ಸಲ್ಲಿಸಿದೆ. ಚೆಟ್ರಿ ಫುಟ್ಬಾಲ್‌ ಬದುಕಿನ ಬಗ್ಗೆ ಸಾಕ್ಷ್ಯಚಿತ್ರ(ಡಾಕ್ಯುಮೆಂಟ್ರಿ) ಒಂದನ್ನು ಸಿದ್ಧಪಡಿಸಿದೆ. ‘ಕ್ಯಾಪ್ಟನ್‌ ಫೆಂಟಾಸ್ಟಿಕ್‌’ ಹೆಸರಿನ, 3 ಕಂತುಗಳ ಡಾಕ್ಯುಮೆಂಟ್ರಿಯನ್ನು ಫಿಫಾ ತನ್ನ ಆನ್‌ಲೈನ್‌ ವೇದಿಕೆ ಫಿಫಾ+ನಲ್ಲಿ ಬಿಡುಗಡೆ ಮಾಡಿದೆ. 

38 ವರ್ಷದ ಚೆಟ್ರಿ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ 117 ಗೋಲು, ಲಿಯೋನೆಲ್‌ ಮೆಸ್ಸಿ 90 ಗೋಲು ಗಳಿಸಿದ್ದಾರೆ. ಚೆಟ್ರಿ 84 ಗೋಲು ಬಾರಿಸಿದ್ದಾರೆ.

click me!