ಬಜರಂಗ್ ಪ್ಯಾರಿಸ್ ಒಲಿಂಪಿಕ್ಸ್ ಕನಸು ಭಗ್ನ: ಆಯ್ಕೆ ರೇಸ್‌ನಿಂದ ಔಟ್..!

By Naveen KodaseFirst Published Mar 11, 2024, 11:49 AM IST
Highlights

ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಜರಂಗ್, 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್‌ನಲ್ಲಿ ರೋಹಿತ್ ಕುಮಾರ್ ವಿರುದ್ಧ 1-9ರಲ್ಲಿ ಸೋಲುಂಡರು. ಈ ಟ್ರಯಲ್ಸ್‌ಗೋಸ್ಕರ ಬಜರಂಗ್ ಕಳೆದ ಒಂದು ತಿಂಗಳಿಂದ ರಷ್ಯಾದಲ್ಲಿ ಅಭ್ಯಾಸ ನಡೆಸಿದ್ದರು.

ಸೋನೆಪತ್: ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಹಾಗೂ ರವಿ ದಹಿಯಾ, 2024ರ ಪ್ಯಾರಿಸ್ ಒಲಿಂಪಿಕ್ಸ್ ಆಯ್ಕೆ ರೇಸ್‌ನಿಂದ ಹೊರಬಿದ್ದಿದ್ದಾರೆ. ಭಾನುವಾರ ನಡೆದ ರಾಷ್ಟ್ರೀಯ ಆಯ್ಕೆ ಟ್ರಯಲ್‌ಸ್ನಲ್ಲಿ ಇಬ್ಬರೂ ಸೋಲುಂಡರು. 

ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಜರಂಗ್, 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್‌ನಲ್ಲಿ ರೋಹಿತ್ ಕುಮಾರ್ ವಿರುದ್ಧ 1-9ರಲ್ಲಿ ಸೋಲುಂಡರು. ಈ ಟ್ರಯಲ್ಸ್‌ಗೋಸ್ಕರ ಬಜರಂಗ್ ಕಳೆದ ಒಂದು ತಿಂಗಳಿಂದ ರಷ್ಯಾದಲ್ಲಿ ಅಭ್ಯಾಸ ನಡೆಸಿದ್ದರು. ಕಳೆದ ವಾರ ಡಬ್ಲ್ಯುಎಫ್‌ಐನ ಚುನಾಯಿತ ಸಮಿತಿ ಟ್ರಯಲ್ಸ್ ನಡೆಸಬಾರದು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಬಜರಂಗ್ ಸಲ್ಲಿಸಿದ್ದ ಅರ್ಜಿ ಪುರಸ್ಕಾರಗೊಂಡಿತ್ತು. ಹೈಕೋರ್ಟ್ ಸೂಚನೆಯಂತೆ ಆಡಳಿತ ಸಮಿತಿಯೇ ಟ್ರಯಲ್ಸ್ ಆಯೋಜಿಸಿತ್ತು.

Latest Videos

WPL 2024 : ಡೆಲ್ಲಿ ವಿರುದ್ಧ ಆರ್‌ಸಿಬಿಗೆ 1 ರನ್‌ ವೀರೋಚಿತ ಸೋಲು!

ಟೋಕಿಯೋ ಒಲಿಂಪಿಕ್ಸ್‌ಗೆ ಬಜರಂಗ್‌ಗೆ ನೇರ ಪ್ರವೇಶ ನೀಡಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿ ಸೋಲನುಭವಿಸಿದ್ದ ಸುಜೀತ್ ಕಲಕಲ್, 65 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸೆಣಸಲಿದ್ದಾರೆ. ಸುಜೀತ್ ಫೈನಲ್ ನಲ್ಲಿ ರೋಹಿತ್ ವಿರುದ್ಧ ಗೆದ್ದರು. ಇನ್ನು ರವಿ ದಹಿಯಾ 57 ಕೆ.ಜಿ. ವಿಭಾಗದ ಸೆಮೀಸ್‌ನಲ್ಲಿ ಅಮನ್ ಶೆರಾವತ್ ವಿರುದ್ಧಸೋಲುಂಡರು.

ಫ್ರೆಂಚ್‌ ಓಪನ್‌ ಗೆದ್ದ ಸಾತ್ವಿಕ್‌-ಚಿರಾಗ್‌!

ಪ್ಯಾರಿಸ್‌: ವಿಶ್ವ ನಂ.1 ಜೋಡಿಯಾದ ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಚೈನೀಸ್‌ ತೈಪೆಯ ಯಾಂಗ್‌ ಪೊ-ಲೀ ಹ್ಯುಯಿ ವಿರುದ್ಧ 21-11, 21-17 ನೇರ ಗೇಮ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.

ಇದು ಸಾತ್ವಿಕ್‌-ಚಿರಾಗ್‌ಗೆ 2ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ. 2022ರಲ್ಲೂ ಈ ಜೋಡಿ ಚಾಂಪಿಯನ್‌ ಆಗಿತ್ತು. ಈ ವರ್ಷದ ಮೊದಲ ಪ್ರಶಸ್ತಿ ಗೆದ್ದಿರುವ ಭಾರತೀಯ ಜೋಡಿ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಭರವಸೆ ಮೂಡಿಸಿದೆ.

'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್

ಇದೇ ವೇಳೆ ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ಲಕ್ಷ್ಯ ಸೇನ್‌ ಸೋತು ನಿರಾಸೆ ಅನುಭವಿಸಿದರು. ಥಾಯ್ಲೆಂಡ್‌ನ ವಿಟಿಡ್ಸರ್ನ್‌ ವಿರುದ್ಧ ಲಕ್ಷ್ಯ 22-20, 13-21, 11-21ರಲ್ಲಿ ಸೋಲುಂಡರು. ವಿಟಿಡ್ಸರ್ನ್‌ ಫೈನಲ್‌ನಲ್ಲಿ ಚೀನಾದ ಶೀ ಯೂಕಿ ವಿರುದ್ಧ ಸೋತರು.

ಏಷ್ಯನ್ ಕಿರಿಯರ ಅಥ್ಲೆಟಿಕ್ಸ್‌ ಕೂಟಕ್ಕೆ  ರಾಜ್ಯದ ಮೂವರು

ಲಖನೌ: ಈ ವರ್ಷ ಯುಎಇನಲ್ಲಿ ನಡೆಯಲಿರುವ ಏಷ್ಯನ್ ಕಿರಿಯರ ಅಥ್ಲೆಟಿಕ್ಸ್‌ ಕೂಟಕ್ಕೆ ಕರ್ನಾಟಕದ ಮೂವರು ಆಯ್ಕೆಯಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂಡರ್-20 ಚಾಂಪಿಯನ್‌ಶಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್‌ ಓಟವನ್ನು ರಾಜ್ಯದ ಶ್ರೀಯಾ ರಾಜೇಶ್ 59.30 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. 

ಅಪ್ಪಟ ಕನ್ನಡ ಮಾತಾಡಿದ RCB ಮನೆ ದೇವ್ರು ಎಬಿ ಡಿವಿಲಿಯರ್ಸ್‌..! ವಿಡಿಯೋ ವೈರಲ್

ಉನ್ನತಿ ಬೋಲಂಡ 59.86 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಏಷ್ಯನ್ ಕೂಟಕ್ಕೆ ಅರ್ಹತೆ ಪಡೆಯಲು 1 ನಿಮಿಷ 1.13 ಸೆಕೆಂಡ್ ಸಮಯ ನಿಗದಿಪಡಿಸಲಾಗಿತ್ತು. ಇನ್ನು ಹೆಪ್ಟಥ್ಲಾನ್ (7 ಸ್ಪರ್ಧೆ)ನಲ್ಲಿ 5076 ಅಂಕ ಪಡೆದ ಪಾವನಾ ನಾಗರಾಜ್ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಲ್ಲದೇ ಏಷ್ಯನ್ ಕೂಟಕ್ಕೂ ಅರ್ಹತೆಗಿಟ್ಟಿಸಿದರು.

click me!