ಇಂದಿ​ನಿಂದ ಬ್ಯಾಡ್ಮಿಂಟ​ನ್‌ ಏಷ್ಯಾ ಚಾಂಪಿ​ಯ​ನ್‌​ಶಿ​ಪ್‌

By Naveen Kodase  |  First Published Feb 14, 2023, 10:39 AM IST

ಇಂದಿನಿಂದ ಬ್ಯಾಡ್ಮಿಂಟನ್‌ ಏಷ್ಯಾ ಮಿಶ್ರ ತಂಡ ಚಾಂಪಿ​ಯ​ನ್‌​ಶಿಪ್‌ ಆರಂಭ
ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಟೂರ್ನಿ
ಭಾರ​ತ ಮೊದಲ ಪಂದ್ಯ​ದಲ್ಲಿ ಕಜ​ಕ​ಸ್ತಾನ ವಿರುದ್ಧ ಸೆಣ​ಸಾಟ


ದುಬೈ(ಫೆ.14): ಬ್ಯಾಡ್ಮಿಂಟನ್‌ ಏಷ್ಯಾ ಮಿಶ್ರ ತಂಡ ಚಾಂಪಿ​ಯ​ನ್‌​ಶಿಪ್‌ ಮಂಗ​ಳ​ವಾರ ದುಬೈ​ನಲ್ಲಿ ಆರಂಭ​ವಾಗ​ಲಿ​ದ್ದು, ಭಾರ​ತದ ಸವಾ​ಲನ್ನು ಪಿ.ವಿ.​ಸಿಂಧು ಹಾಗೂ ಲಕ್ಷ್ಯ ಸೇನ್‌ ಮುನ್ನ​ಡೆ​ಸ​ಲಿ​ದ್ದಾರೆ. ಮಂಗ​ಳ​ವಾರ ಭಾರ​ತ ಮೊದಲ ಪಂದ್ಯ​ದಲ್ಲಿ ಕಜ​ಕ​ಸ್ತಾನ ವಿರುದ್ಧ ಸೆಣ​ಸ​ಲಿ​ದೆ. 

ಮಹಿಳಾ ಸಿಂಗ​ಲ್ಸ್‌​ನಲ್ಲಿ ​ಸಿಂಧು ಜೊತೆ ಆಕರ್ಷಿ ಕಶ್ಯಪ್‌ ಇದ್ದು, ಸೇನ್‌, ಎಚ್‌.​ಎ​ಸ್‌.​ಪ್ರ​ಣಯ್‌ ಪುರು​ಷರ ಸಿಂಗ​ಲ್ಸ್‌​ನಲ್ಲಿ ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ಪುರು​ಷರ ಡಬ​ಲ್ಸ್‌​ನಲ್ಲಿ ಸಾತ್ವಿಕ್‌ ಅನು​ಪ​ಸ್ಥಿ​ತಿ​ಯಲ್ಲಿ ಚಿರಾಗ್‌ ಶೆಟ್ಟಿ, ಧ್ರುವ್‌ ಕಪಿಲ್‌ ಜೊತೆ ಆಡ​ಲಿ​ದ್ದಾರೆ. ‘ಬಿ​’ ಗುಂಪಿನಲ್ಲಿ ಭಾರತದ ಜೊತೆ ಬಲಿಷ್ಠ ಮಲೇಷ್ಯಾ, ಯುಎಇ ಕೂಡಾ ಸ್ಥಾನ ಪಡೆ​ದಿವೆ. 17 ತಂಡ​ಗಳು ಕೂಟ​ದಲ್ಲಿ ಪಾಲ್ಗೊ​ಳ್ಳ​ಲಿದ್ದು, 4 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಪ್ರತಿ ಗುಂಪಿನ ಅಗ್ರ 2 ತಂಡ​ಗಳು ಕ್ವಾರ್ಟರ್‌ ಫೈನ​ಲ್‌​ಗೇ​ರ​ಲಿ​ವೆ.

Tap to resize

Latest Videos

undefined

ಫುಟ್ಬಾಲ್‌: ಕರ್ನಾ​ಟ​ಕ, ಗೋವಾ ಪಂದ್ಯ ಇಂದು

ಭುವ​ನೇ​ಶ್ವ​ರ: ಸಂತೋಷ್‌ ಟ್ರೋಫಿ ರಾಷ್ಟ್ರೀ​ಯ ಫುಟ್ಬಾಲ್‌ ಟೂರ್ನಿ​ಯ ಸೆಮಿ​ಫೈ​ನಲ್‌ ರೇಸ್‌​ನಲ್ಲಿ ಉಳಿ​ಯುವ ನಿರೀ​ಕ್ಷೆ​ಯ​ಲ್ಲಿ​ರುವ ಕರ್ನಾ​ಟಕ ತಂಡ ನಿರ್ಣಾ​ಯಕ ಪಂದ್ಯ​ದಲ್ಲಿ ಮಂಗ​ಳ​ವಾರ ಗೋವಾ ವಿರುದ್ಧ ಸೆಣ​ಸಲಿದೆ. 

ಪ್ರಧಾನಿ ಮೋದಿ ಜತೆ ಭೋಜನಾಕೂಟದಲ್ಲಿ ಪಾಲ್ಗೊಂಡ ಕನ್ನಡದ ದಿಗ್ಗಜ ಕ್ರಿಕೆಟಿಗರು..!

ಆರಂಭಿಕ ಪಂದ್ಯ​ದಲ್ಲಿ ಪಂಜಾಬ್‌ ವಿರುದ್ಧ 2-2 ಗೋಲು​ಗ​ಳಿಂದ ಡ್ರಾ ಸಾಧಿ​ಸಿದ್ದ ಕರ್ನಾ​ಟಕ, 2ನೇ ಪಂದ್ಯ​ದಲ್ಲಿ ಹಾಲಿ ಚಾಂಪಿ​ಯನ್‌ ಕೇರ​ಳ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯಿಸಿತ್ತು. ಸದ್ಯ ತಂಡ 4 ಅಂಕ​ಗ​ಳನ್ನು ಹೊಂದಿದ್ದು, ‘ಎ’ ಗುಂಪಿ​ನಲ್ಲಿ 3ನೇ ಸ್ಥಾನ​ದ​ಲ್ಲಿದೆ. ಗುಂಪಿ​ನಲ್ಲಿ ಅಗ್ರ 2 ಸ್ಥಾನ ಪಡೆದ ತಂಡ​ಗಳು ಸೆಮೀ​ಸ್‌ಗೇರಲಿ​ವೆ.

ಪಂದ್ಯ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಫ್ಯಾನ್‌ಕೋಡ್‌

click me!