ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಅಂತಿ ಘಟ್ಟ ತಲುಪಿದೆ. ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದು, ಇತ್ತ ಜಪಾನ್ ಆಟಗಾರ್ತಿ ಒಸಾಕ ಇತಿಹಾಸ ರಚಿಸಲು ಸಜ್ಜಾಗಿದ್ದಾರೆ. ಇಲ್ಲಿದೆ ಆಸ್ಟ್ರೇಲಿಯನ್ ಒಪನ್ ಹೈಲೈಟ್ಸ್.
ಮೆಲ್ಬರ್ನ್(ಜ.25): ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಂ ,ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮತ್ತು ಜಪಾನ್‌ನ ನವೋಮಿ ಒಸಾಕ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಈ ಇಬ್ಬರು ಹೋರಾಟ ಮಾಡಲಿದ್ದು, 2019ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕಿರೀಟ ಯಾರ ಮುಡಿಗೇರಲಿದೆ ಅನ್ನೋದು ನಿರ್ಧಾರವಾಗಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್: ಸೆರೆನಾ ಔಟ್
21 ವರ್ಷದ ಒಸಾಕ, 2ನೇ ಬಾರಿ ಗ್ರ್ಯಾಂಡ್ ಸ್ಲಾಂ ಫೈನಲ್‌ಗೇರಿದ್ದಾರೆ. ಹಾಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಜಪಾನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಂ ಫೈನಲ್‌ಗೇರಿದ್ದ ಒಸಾಕ, ಸೆರೆನಾ ವಿರುದ್ಧ ಗೆದ್ದು ಚಾಂಪಿಯನ್ ಆಗಿದ್ದರು. ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಒಸಾಕ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಫ್ಲಿಸ್ಕೋವಾ ಎದುರು 6-2, 4-6, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: 2019ರ ವಿಶ್ವಕಪ್ ಟೂರ್ನಿಗೆ ಆರ್.ಅಶ್ವಿನ್ ಪರಿಗಣಿಸಬೇಕು: ಗಂಭೀರ್
ಕ್ವಿಟೋವಾಗೆ ಜಯ: 2 ಬಾರಿ ವಿಂಬಲ್ಡನ್ ಚಾಂಪಿಯನ್ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮತ್ತೊಂದು ಸೆಮೀಶ್‌ನಲ್ಲಿ ಶ್ರೇಯಾಂಕ ರಹಿತ ಅಮೆರಿಕಾದ ಡಾನಿಲ್ಲೆ ಕೊಲ್ಲಿನ್ಸ್ ಎದುರು 7-6(7-2), 6-0 ಸೆಟ್‍ಗಳಲ್ಲಿ ಗೆಲುುವು ಸಾಧಿಸಿದರು.
ಫೈನಲ್‌ಗೆ ನಡಾಲ್: ಸ್ಪೇನ್‌ನ ರಾಫೆಲ್ ನಡಾಲ್, ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಂ ಟೆನಿಸ್‌ನಲ್ಲಿ ಪೈನಲ್ ಪ್ರವೇಶಿಸಿದ್ದಾರೆ. ಇದು ಸೇರಿದಂತೆ 5ನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್ ಫೈನಲ್ ಗೇರಿದ್ದಾರೆ. ಒಟ್ಟಾರೆ ಗ್ರ್ಯಾಂಡ್ ಸ್ಲಾಂನಲ್ಲಿ ನಡಾಲ್‌ಗೆ ಇದು 25ನೇ ಫೈನಲ್ ಪಂದ್ಯವಾಗಿದೆ.