ಆಸ್ಟ್ರೇಲಿಯನ್ ಓಪನ್: ಜೋಕೋವಿಚ್‌ಗೆ 25ನೇ ಗ್ರ್ಯಾನ್‌ಸ್ಲಾಂ ಕನಸು

By Naveen Kodase  |  First Published Jan 12, 2025, 8:31 AM IST

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಶನಿವಾರ ಆರಂಭವಾಗಲಿದ್ದು, ಜೋಕೋವಿಚ್ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಸಿನ್ನರ್, ಸಬಲೆಂಕಾ ಸೇರಿದಂತೆ ಹಾಲಿ ಚಾಂಪಿಯನ್‌ಗಳು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯಲ್ಲಿದ್ದಾರೆ. ಭಾರತದ ರೋಹನ್ ಬೋಪಣ್ಣ ಸತತ 2ನೇ ಡಬಲ್ಸ್ ಪ್ರಶಸ್ತಿಗಾಗಿ ಕಣಕ್ಕಿಳಿಯಲಿದ್ದಾರೆ.


ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯನ್ ಓಪನ್ ಶನಿವಾರ ಆರಂಭಗೊಳ್ಳಲಿದೆ. 10 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್, ಹಾಲಿ ಚಾಂಪಿಯನ್‌ಗಳಾದ ಯಾನಿಕ್ ಸಿನ್ನರ್, ಅರೈನಾ ಸಬಲೆಂಕಾ, ಯುವ ಸೂಪರ್‌ಸ್ಟಾ‌ರ್‌ ಕಾರ್ಲೊಸ್ ಆಲ್ಕರಜ್ ಸೇರಿ ಘಟಾನುಘಟಿ ಟೆನಿಸಿಗರು ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಕುಸಿದಿರುವ ಸರ್ಬಿಯಾದ ಜೋಕೋ, ಆರಂಭಿಕ ಸುತ್ತಿನಲ್ಲಿ ಭಾರತ ಮೂಲದ ನಿಶೇಶ್ ಬಸವರೆಡ್ಡಿ ವಿರುದ್ಧ ಸೆಣಸಾಡಲಿದ್ದಾರೆ. ಸತತ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಇಟಲಿಯ ಸಿನ್ನರ್ ಗೆ ಚಿಲಿಯ ನಿಕೋಲಸ್ ಜಾರಿ ಸವಾಲು ಎದುರಾಗಲಿದೆ. 4 ಗ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಸ್ಪೇನ್‌ನ ಅಲ್ಕರಜ್, ಕಜಕಸ್ತಾನದ ಅಲೆಕ್ಸಾಂಡರ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಈ ಮೂವರು ಈ ಸೋಮವಾರ ಕಣಕ್ಕಿಳಿಯಲಿದ್ದಾರೆ. ಆಲ್ಕರಜ್ ಹಾಗೂ ಸಿನ್ನರ್ ಕಳೆದ ವರ್ಷ ತಲಾ 2 ಗ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದು, ಈ ಬಾರಿ ಮತ್ತಷ್ಟು ಪೈಪೋಟಿ ಎದುರಾಗಬಹುದು.

Tap to resize

Latest Videos

RCB ತಂಡದಲ್ಲಿದ್ದಾನೆ ಡೇಂಜರಸ್ ಬ್ಯಾಟರ್; 30 ಪಂದ್ಯ 9 ಶತಕ, 11 ಅರ್ಧಶತಕ! ಈತನೇ ಈ ಸಲ ಇಂಪ್ಯಾಕ್ಟ್ ಆಟಗಾರ?

ನನಸಾಗುತ್ತಾ ಜೋಕೋ 25 ಗ್ಯಾನ್‌ಸ್ಲಾಂ ಕನಸು?

ಮಾಜಿ ವಿಶ್ವ ನಂ.1 ಜೋಕೋ 2023ರ ಅಂತ್ಯಕ್ಕೆ 24 ಗ್ಯಾನ್‌ಸ್ಲಾಂ ಪ್ರಶಸ್ತಿ ವೀರ ಎನಿಸಿಕೊಂಡಿದ್ದರು. ಕಳೆದ ವರ್ಷ 4 ಗ್ರ್ಯಾನ್‌ಸ್ಲಾಂ ಪೈಕಿ ಒಂದರಲ್ಲೂ ಗೆದ್ದಿಲ್ಲ. ದಾಖಲೆಯ 25 ಗ್ರ್ಯಾನ್‌ಸ್ಲಾಂ ಕಿರೀಟದ ಕನಸನ್ನು ಆಸ್ಟ್ರೇಲಿಯಾದಲ್ಲಿ ಈಡೇರಿಸುವ ತವಕದಲ್ಲಿದ್ದಾರೆ.

ಸಬಲೆಂಕಾಗೆ ಹ್ಯಾಟ್ರಿಕ್ ಕನಸು: ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಸಬಲೆಂಕಾ ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ನಂ.2 ಇಗಾ ಸ್ವಿಯಾಟೆಕ್ 6ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿದ್ದಾರೆ. 3ನೇ ಶ್ರೇಯಾಂಕಿತ ಕೊಕೊ ಗಾಫ್, ಕಳೆದ ಬಾರಿ ರನ್ನರ್‌ ಅಪ್ ಜೆಸ್ಸಿಕಾ ಪೆಗುಲಾ ಕೂಡಾ ಕಣದಲ್ಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ; ಸ್ಟಾರ್ ಕ್ರಿಕೆಟಿಗ ದಿಢೀರ್ ನಿವೃತ್ತಿ!

ಬೋಪಣ್ಣಗೆ 2ನೇ ಟ್ರೋಫಿ ಗುರಿ: ನಗಾಲ್, ಶ್ರೀರಾಂ ಕಣಕ್ಕೆ

ಟೂರ್ನಿಯಲ್ಲಿ ಭಾರತದ ಹಲವು ಟೆನಿಸಗರು ಸ್ಪರ್ಧಿಸಲಿದ್ದಾರೆ. ಕರ್ನಾಟಕದ ರೋಹನ್ ಬೋಪಣ್ಣ ಕಳೆದ ಬಾರಿ ಮ್ಯಾಥ್ಯೂ ಎಬ್ಡೇನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಗೆದ್ದಿದ್ದರು. ಅವರು ಸತತ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಶ್ರೀರಾಮ್ ಬಾಲಾಜಿ, ಯೂಕಿ ಭಾಂಬ್ರಿ, ರಿತ್ವಿಕ್ ಚೌಧರಿ ಕೂಡಾ ಪುರುಷರ ಡಬಲ್ಸ್‌ನಲ್ಲಿ ಬೇರೆ ಬೇರೆ ದೇಶಗಳ ಟೆನಿಸಿಗರ ಜೊತೆಗೂಡಿ ಆಡಲಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.

click me!