RCB ತಂಡದಲ್ಲಿದ್ದಾನೆ ಡೇಂಜರಸ್ ಬ್ಯಾಟರ್; 30 ಪಂದ್ಯ 9 ಶತಕ, 11 ಅರ್ಧಶತಕ! ಈತನೇ ಈ ಸಲ ಇಂಪ್ಯಾಕ್ಟ್ ಆಟಗಾರ?

ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬರೋಡ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದಾರೆ. ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಕೇವಲ 30 ಪಂದ್ಯಗಳಿಂದ 9 ಶತಕ ಮತ್ತು 11 ಅರ್ಧಶತಕಗಳನ್ನು ಬಾರಿಸಿರುವ ಪಡಿಕ್ಕಲ್, ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಲು ಸಜ್ಜಾಗಿದ್ದಾರೆ.

Devdutt Padikkal smashes hundred in Vijay Hazare quarterfinal against Baroda Good News for RCB Fans kvn

ಬೆಂಗಳೂರು: ಟೀಂ ಇಂಡಿಯಾ ಪ್ರತಿಭಾನ್ವಿತ ಯುವ ಬ್ಯಾಟರ್‌ ದೇವದತ್ ಪಡಿಕ್ಕಲ್, ದೇಶಿ ಕ್ರಿಕೆಟ್‌ನಲ್ಲಿ ತಮ್ಮ ರೆಡ್ ಹಾಟ್‌ ಫಾರ್ಮ್‌ ಮುಂದುವರೆಸಿದ್ದು, ರನ್ ಮಳೆಯನ್ನೇ ಸುರಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಈ ಎಡಗೈ ಬ್ಯಾಟರ್‌ ಶತಕಗಳ ಮೇಲೆ ಶತಕ ಸಿಡಿಸುತ್ತಾ ಎದುರಾಳಿ ಪಡೆಯ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.  

ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಕಣಕ್ಕಿಳಿದಿರುವ ದೇವದತ್ ಪಡಿಕ್ಕಲ್, ಬರೋಡ ವಿರುದ್ಧ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಮತ್ತೊಮ್ಮೆ ಅಬ್ಬರಿಸುವ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಅವರ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿನ ಪ್ರದರ್ಶನವನ್ನು ನೋಡಿದರೆ ಎಂತಹವರಿಗಾದರೂ ಒಂದು ಕ್ಷಣ ಅಚ್ಚರಿಯಾಗುತ್ತೆ. 

ವಿಜಯ್ ಹಜಾರೆ ಟೂರ್ನಿ: ಹ್ಯಾಟ್ರಿಕ್ ಸೆಮೀಸ್‌ ಮೇಲೆ ಕಣ್ಣಿಟ್ಟ ಕರ್ನಾಟಕ, ರಾಜ್ಯಕ್ಕೆ ಮಯಾಂಕ್, ದೇವದತ್ ಬಲ

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದೇವದತ್ ಪಡಿಕ್ಕಲ್ ಇದುವರೆಗೂ ಕೇವಲ 30 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇಷ್ಟು ಕಡಿಮೆ ಪಂದ್ಯಗಳಲ್ಲಿಯೇ ಪಡಿಕ್ಕಲ್ ರನ್ ಮಳೆ ಸುರಿಸಿದ್ದಾರೆ. 30 ಪಂದ್ಯಗಳ ಪೈಕಿ ಪಡಿಕ್ಕಲ್ 9 ಪಂದ್ಯಗಳಲ್ಲಿ ಶತಕ ಸಿಡಿಸಿದ್ದರೆ, 11 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ವಡೋದರದಲ್ಲಿ ಬರೋಡ ವಿರುದ್ದ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ 102 ರನ್ ಸಿಡಿಸಿ ಮಿಂಚಿದ್ದಾರೆ. ಅವರ ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡ ಎದುರು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 281 ರನ್ ಕಲೆಹಾಕಿದೆ. ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದ ಅನೀಶ್ ಕೆ ವಿ ಆಕರ್ಷಕ 52 ರನ್ ಸಿಡಿಸಿದರು. 

'ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ'; ಹಿಂದಿ ಹೇರಲು ಹೊರಟವರಿಗೆ ಅಶ್ವಿನ್ ಚಾಟಿ ಏಟು

ಆರ್‌ಸಿಬಿ ಪಾಲಿಗೆ ಗುಡ್‌ ನ್ಯೂಸ್:

ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕರ್ನಾಟಕ ಮೂಲದ ದೇವದತ್ ಪಡಿಕ್ಕಲ್ ಅವರನ್ನು ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಆರ್‌ಸಿಬಿ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದ್ದು, ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಬಳಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

Latest Videos
Follow Us:
Download App:
  • android
  • ios