Australia Open 58ನೇ ಬಾರಿ ಗ್ರ್ಯಾನ್‌ಸ್ಲಾಂ ಕ್ವಾರ್ಟರ್‌ಗೆ ಜೋಕೋವಿಚ್‌ ಲಗ್ಗೆ..!

By Kannadaprabha NewsFirst Published Jan 22, 2024, 11:02 AM IST
Highlights

ಪುರುಷರ ಸಿಂಗಲ್ಸ್ 4ನೇ ಸುತ್ತಿನಲ್ಲಿ 24 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋ ಭಾನುವಾರ ಫ್ರಾನ್ಸ್‌ನ ಆ್ಯಡ್ರಿಯನ್ ಮನ್ನಾರಿನೊ ವಿರುದ್ಧ 6-0, 6-0, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಅವರಿಗೆ 12ನೇ ಶ್ರೇಯಾಂಕಿತ, ಅಮೆರಿಕದ ಟೇಲರ್ ಫ್ರಿಟ್ಜ್ ಸವಾಲು ಎದುರಾಗಲಿದೆ.

ಮೆಲ್ಬರ್ನ್(ಜ.22): ವಿಶ್ವ ನಂ.1 ನೋವಾಕ್ ಜೋಕೋವಿಚ್‌ರ ಗ್ರ್ಯಾನ್‌ಸ್ಲಾಂ ಗೆಲುವಿನ ಓಟ ಮುಂದುವರಿದಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 10 ಬಾರಿ ಚಾಂಪಿಯನ್, ಸರ್ಬಿಯಾದ ಜೋಕೋವಿಚ್ ಭಾನುವಾರ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದು ಜೋಕೋಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ 14ನೇ, ಒಟ್ಟಾರೆ ಗ್ರ್ಯಾನ್‌ಸ್ಲಾಂನಲ್ಲಿ 58ನೇ ಕ್ವಾರ್ಟರ್. ಈ ಮೂಲಕ ಅತಿಹೆಚ್ಚು ಬಾರಿ ಗ್ರ್ಯಾನ್‌ಸ್ಲಾಂ ಕ್ವಾರ್ಟರ್‌ಗೇರಿದ್ದ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ್ದಾರೆ.

ಪುರುಷರ ಸಿಂಗಲ್ಸ್ 4ನೇ ಸುತ್ತಿನಲ್ಲಿ 24 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋ ಭಾನುವಾರ ಫ್ರಾನ್ಸ್‌ನ ಆ್ಯಡ್ರಿಯನ್ ಮನ್ನಾರಿನೊ ವಿರುದ್ಧ 6-0, 6-0, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಅವರಿಗೆ 12ನೇ ಶ್ರೇಯಾಂಕಿತ, ಅಮೆರಿಕದ ಟೇಲರ್ ಫ್ರಿಟ್ಜ್ ಸವಾಲು ಎದುರಾಗಲಿದೆ. ಪ್ರಿಟ್ಜ್ ಪ್ರಿ ಕ್ವಾರ್ಟರ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಸ್ಟೆಫಾನೊಸ್ ಸಿಟ್ಸಿಪಾಸ್ ರನ್ನು ಮಣಿಸಿದರು. ಇದೇ ವೇಳೆ ೪ನೇ ಶ್ರೇಯಾಂಕಿತ, ಇಟಲಿಯ ಜಾನಿಕ್ ಸಿನ್ನರ್, 5ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್ ಕೂಡಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಹಾಸನ ಮೂಲದ ಚಾರ್ವಿಗೆ ವಿಶ್ವ ಚೆಸ್ ಚಾಂಪಿಯನ್ ಗರಿಮೆ

ಸಬಲೆಂಕಾಗೆ ಮುನ್ನಡೆ

ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂ.2 ಅರೈನಾ ಸಬಲೆಂಕಾ ಕ್ವಾರ್ಟರ್ ಫೈನಲ್‌ಗೇರಿದರು. 4ನೇ ಸುತ್ತಿನಲ್ಲಿ ಬೆಲಾರಸ್‌ನ ಸಬಲೆಂಕಾ, ಅಮೆರಿಕದ ಶ್ರೇಯಾಂಕ ರಹಿತ ಅಮಂಡಾ ಅನಿಸಿಮೋವಾ ವಿರುದ್ಧ 6-3, 6-2ರಲ್ಲಿ ಜಯಭೇರಿ ಬಾರಿಸಿದರು. ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ 19ರ ಕೊಕೊ ಗಾಫ್ ಅವರು ಪೋಲೆಂಡ್‌ನ ಮಾಗ್ಡಲೆನಾ ಫ್ರೆಚ್ ವಿರುದ್ಧ 6-1, 6-2ರಲ್ಲಿ ಗೆದ್ದರು. 

3ನೇ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಶೋಯೆಬ್ ಮಲಿಕ್..!

ಮಾಜಿ ಫ್ರೆಂಚ್ ಓಪನ್ ಚಾಂಪಿಯನ್, ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ, ಚೊಚ್ಚಲ ಗ್ರ್ಯಾನ್‌ಸ್ಲಾಂ ನಿರೀಕ್ಷೆಯಲ್ಲಿರುವ ಉಕ್ರೇನ್‌ನ ಮಾರ್ಟಾ ಕೊಸ್‌ಟ್ಯುಕ್ ಕೂಡಾ ಅಂತಿಮ 8ರ ಘಟ್ಟ ತಲುಪಿದ್ದಾರೆ.

ಬೆಂಗಳೂರು ಓಪನ್‌ನಲ್ಲಿ ಡಾರ್ಜಾ ಚಾಂಪಿಯನ್

ಬೆಂಗಳೂರು: ಇಲ್ಲಿ ಭಾನುವಾರ ಕೊನೆಗೊಂಡ ಬೆಂಗಳೂರು ಓಪನ್ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಲಾಟ್ವಿಯಾದ ಡಾರ್ಜಾ ಸೆಮನಿಸ್ಟಜಾ ಚಾಂಪಿ
ಯನ್ ಆಗಿದ್ದಾರೆ. ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಕ್ಯಾರೊಲೆ ಮೊನ್ನೆಟ್ ವಿರುದ್ಧ ಗೆದ್ದರು. 2ನೇ ಸೆಟ್ ನಲ್ಲಿ ಕ್ಯಾರೊಲೆ ಗಾಯ ಗೊಂಡ ನಿವೃತ್ತಿಯಾದ ಕಾರಣ ಡಾರ್ಜಾಗೆ ಪ್ರಶಸ್ತಿ ಲಭಿಸಿತು. ಡಾರ್ಜಾ ₹5 ಲಕ್ಷ ನಗದು ಪಡೆದರು.
 

click me!