ಹಾಸನ ಮೂಲದ ಚಾರ್ವಿಗೆ ವಿಶ್ವ ಚೆಸ್ ಚಾಂಪಿಯನ್ ಗರಿಮೆ

ಕು. ಚಾರ್ವಿ ಎ. ಅವರು , ಈ ಹಿಂದೆ, ಶ್ರೀಲಂಕಾದಲ್ಲಿ ನಡೆದ 2022 ರ ಚಾಂಪಿಯನ್‌ಶಿಪ್ನಲ್ಲಿ ಅವರು ಅಂಡರ್-8 ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿಯನ್ನು ಗೆದ್ದಿದ್ದಾರೆ.

Charvi Anilkumar Clinch Under 8 World Chess Championship kvn

-  ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ(ಜ.21): ಇಲ್ಲಿನ ಕುಮಾರಿ ಚಾರ್ವಿ ಎ. ಅವರು 8 ವರ್ಷದೊಳಗಿನವರ ವಿಶ್ವ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ  “ವಿಶ್ವ ಚೆಸ್ ಚಾಂಪಿಯನ್” ಪದಕ ಗೆದ್ದಿದ್ದಾರೆ. ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪ್ರತಿಷ್ಠಿತ “2022 ಚಾಂಪಿಯನ್ ಶಿಪ್” ನಲ್ಲಿ ಮೊದಲ ಸ್ಥಾನದಲ್ಲಿ ಗೆದ್ದು  ಜಾಗತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. 

ಕು. ಚಾರ್ವಿ ಎ. ಅವರು , ಈ ಹಿಂದೆ, ಶ್ರೀಲಂಕಾದಲ್ಲಿ ನಡೆದ 2022 ರ ಚಾಂಪಿಯನ್‌ಶಿಪ್ನಲ್ಲಿ ಅವರು ಅಂಡರ್-8 ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿಯನ್ನು ಗೆದ್ದಿದ್ದಾರೆ.

2021 ಮತ್ತು 2022 ರಲ್ಲಿ ನಡೆದ ವಿವಿಧ ಚಾಂಪಿಯನ್ಶಿಪ್ಗಳಲ್ಲಿನ ಅಂಡರ್-7, ಅಂಡರ್-8, ಮತ್ತು ಅಂಡರ್-10 ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ಅವರು ಹೊರಹೊಮ್ಮಿದ್ದಲ್ಲದೆ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರಾಬಲ್ಯವನ್ನು ಸಣ್ಣ ಪ್ರಾಯದಲ್ಲೇ ಸಾಬೀತುಪಡಿಸಿದ್ದಾರೆ.

Australian Open 2024: ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

ಅವರು ಪ್ರಸ್ತುತ ಒಟ್ಟು ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಇದು ಗಮನಾರ್ಹ ಸಾಧನೆಯಾಗಿದೆ. 2022 ರಲ್ಲಿ, ಅವರು ಆರು ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ, ಕ್ರೀಡಾ ಜಗತ್ತಿನಲ್ಲಿ ದಾಖಲೆಯನ್ನು ಸ್ಥಾಪಿಸಿದರು. ಇದಲ್ಲದೆ, ಅವರು ಪ್ರಸ್ತುತ ಅಂಡರ್-8 ಮತ್ತು ಅಂಡರ್-10 ನ ಬಾಲಕಿಯರ ವಿಭಾಗದಲ್ಲಿ ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿಯಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಚಾರ್ವಿ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
 
Latest Videos
Follow Us:
Download App:
  • android
  • ios