ಮಂಗಳವಾರ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸಿಂಧು ವಿರುದ್ಧದ ಪಂದ್ಯದ ವೇಳೆ ಜರ್ಮನಿಯ ಯವೊನ್ನೆ ಲಿ ಗಾಯಗೊಂಡು ಹೊರನಡೆದರು. ಹೀಗಾಗಿ ಸಿಂಧು ಮುತ್ತಿನ ಸುತ್ತಿಗೇರಿದರು. ಪಂದ್ಯದಲ್ಲಿ ಸಿಂಧು ಮೊದಲ ಗೇಮ್(21-10) ಗೆದ್ದಿದ್ದರು.
ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪದಕ ನಿರೀಕ್ಷೆಯಲ್ಲಿದ್ದ ಎಚ್.ಎಸ್.ಪ್ರಣಯ್ ಸೋತು ಹೊರಬಿದ್ದಿದ್ದಾರೆ.
ಮಂಗಳವಾರ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸಿಂಧು ವಿರುದ್ಧದ ಪಂದ್ಯದ ವೇಳೆ ಜರ್ಮನಿಯ ಯವೊನ್ನೆ ಲಿ ಗಾಯಗೊಂಡು ಹೊರನಡೆದರು. ಹೀಗಾಗಿ ಸಿಂಧು ಮುತ್ತಿನ ಸುತ್ತಿಗೇರಿದರು. ಪಂದ್ಯದಲ್ಲಿ ಸಿಂಧು ಮೊದಲ ಗೇಮ್(21-10) ಗೆದ್ದಿದ್ದರು. ಆದರೆ ಆಕರ್ಷಿ ಕಶ್ಯಪ್ ಚೈನೀಸ್ ತೈಪೆಯ ಪೈ ಯು ಪೊ ವಿರುದ್ಧ 16-21, 11-21 ಅಂತರದಲ್ಲಿ ಸೋಲನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಅವರು ಸು ಲಿ ಯಂಗ್ ವಿರುದ್ಧ 21-14, 13-21, 13-21 ಅಂತರದಲ್ಲಿ ಪರಾಭವಗೊಂಡರು.
undefined
ಕ್ವಾರ್ಟರ್ ಫೈನಲ್‌ನಲ್ಲಿ ಸೋತ ನಿಶಾಂತ್ ದೇವ್
ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಭಾರತದ ತಾರಾ ಬಾಕ್ಸರ್ ನಿಶಾಂತ್ ದೇವ್‌ರ ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸುವ ಕನಸು ಭಗ್ನಗೊಂಡಿದೆ.
ಸೋಮವಾರ ರಾತ್ರಿ ಇಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ನಿಶಾಂತ್, 2021ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ, ಅಮೆರಿಕದ ಒಮಾರಿ ಜೋನ್ಸ್ ವಿರುದ್ಧ 1-4 ಅಂತರದಲ್ಲಿ ಸೋತು ಹೊರಬಿದ್ದಿದ್ದಾರೆ. ಸೆಮೀಸ್‌ಗೇರಿದ್ದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದರು.
ಮೊದಲ ಸುತ್ತಿನಲ್ಲಿ ಒಮಾರಿ ಪ್ರಾಬಲ್ಯ ಸಾಧಿಸಿದರೂ, ನಿಶಾಂತ್ ಬಳಿಕ ಪುಟಿದೆದ್ದು ತೀವ್ರ ಪೈಪೋಟಿ ನೀಡಿದರು. ಆದರೆ ಕೊನೆ 60 ಸೆಕೆಂಡ್‌ಗಳಲ್ಲಿ ಪ್ರಬಲ ಪಂಚ್‌ಗಳ ಮೂಲಕ ಒಮಾರಿ ಗೆಲುವನ್ನು ತನ್ನತ್ತ ಒಲಿಸಿಕೊಂಡರು.
ಈ ಸೋಲಿನ ಹೊರತಾಗಿಯೂ ನಿಶಾಂತ್ ಒಲಿಂಪಿಕ್ಸ್ ಆಸೆ ಇನ್ನೂ ಜೀವಂತವಿದೆ. ಮೇ 23ರಿಂದ ಜೂ.3ರ ವರೆಗೆ ಬ್ಯಾಂಕಾಕ್‌ನಲ್ಲಿ 2ನೇ ಅರ್ಹತಾ ಟೂರ್ನಿ ನಡೆಯಲಿದ್ದು, ಅದರಲ್ಲಿ ಗೆದ್ದರೆ ಒಲಿಂಪಿಕ್ಸ್ ಪ್ರವೇಶಿಸಲಿದ್ದಾರೆ.
ಹಾಕಿ ರ್‍ಯಾಂಕಿಂಗ್: 4ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: ಎಫ್‌ಐಎಚ್ ಹಾಕಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ ಪುರುಷರ ತಂಡ 4ನೇ ಸ್ಥಾನಕ್ಕೆ ಕುಸಿದಿದೆ. ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಜರ್ಮನಿ ಭಾರತವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ನೆದರ್‌ಲೆಂಡ್ಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಅರ್ಜೆಂಟೀನಾ, ಸ್ಪೇನ್, ಫ್ರಾನ್ಸ್ ನ್ಯೂಜಿಲೆಂಡ್ ಕ್ರಮವಾಗಿ 5ರಿಂದ 10ನೇ ಸ್ಥಾನಗಳಲ್ಲಿವೆ. ಇನ್ನು, ಮಹಿಳೆಯರ ವಿಭಾಗದಲ್ಲಿ ಭಾರತ 9ನೇ ಸ್ಥಾನದಲ್ಲಿ ಮುಂದುವರಿದಿದೆ. ನೆದರ್‌ಲೆಂಡ್ಸ್, ಅರ್ಜೆಂಟೀನಾ, ಜರ್ಮನಿ ಕ್ರಮವಾಗಿ ಮೊದಲ 3 ಸ್ಥಾನಗಳಲ್ಲಿವೆ.
ನಿಯತ್ತು ಎಲ್ಲಕ್ಕಿಂತ ಮಿಗಿಲು: RCB ಪರ ಕೊಹ್ಲಿ ಪಾದಾರ್ಪಣೆಗೆ 16ರ ಹರೆಯ..! KGF ಟಚ್ ಕೊಟ್ಟ ಬೆಂಗಳೂರು ಫ್ರಾಂಚೈಸಿ
ವಿಶ್ವ ಪ್ಯಾರಾ ಶೂಟಿಂಗ್: 2ನೇ ಚಿನ್ನ ಗೆದ್ದ ಭಾರತ
ನವದೆಹಲಿ: ಇಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 2ನೇ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಮಂಗಳವಾರ ಮಿಶ್ರ 10 ಮೀ. ಏರ್ ಪಿಸ್ತೂಲ್ ಸ್ಟಾಂಡರ್ಸ್(ಎಸ್‌ಎಚ್1) ವಿಭಾಗದಲ್ಲಿ ರುದ್ರಾಂಕ್ಷ್(364), ಆಕಾಶ್(346) ಹಾಗೂ ಸಂದೀಪ್ ಕುಮಾರ್(340) ಒಟ್ಟು 1050 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನಿಯಾದರು. ದಕ್ಷಿಣ ಕೊರಿಯಾ ಬೆಳ್ಳಿ, ಚೀನಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು. ಇದೇ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ರುದ್ರಾಂಕ್ಷ್ ಬೆಳ್ಳಿ ಪಡೆದರು.