Wrestlers Protest: ಬೇಡಿ​ಕೆ ಈಡೇ​ರಿದೆ, ತನಿ​ಖೆಗೆ ಸಹ​ಕ​ರಿಸಿ: ಸಚಿವ ಅನು​ರಾಗ್‌ ಠಾಕೂರ್ ಮನ​ವಿ

By Kannadaprabha News  |  First Published May 6, 2023, 9:53 AM IST

ಬ್ರಿಜ್‌​ಭೂ​ಷಣ್‌ ವಿರುದ್ಧ ಕುಸ್ತಿ​ಪ​ಟು​ಗಳು ನಡೆ​ಸು​ತ್ತಿ​ರುವ ಪ್ರತಿ​ಭ​ಟ​ನೆ
ಕುಸ್ತಿ​ಪ​ಟು​ಗಳ ಎಲ್ಲಾ ಬೇಡಿ​ಕೆ​ಗ​ಳನ್ನು ಈಡೇ​ರಿ​ಸ​ಲಾ​ಗಿದೆ
ಕುಸ್ತಿ​ಪ​ಟು​ಗಳು ಸಹ​ಕ​ರಿ​ಸು​ವುದು ಅಗ​ತ್ಯವೆಂದ ಅನುರಾಗ್ ಠಾಕೂರ್


ನವ​ದೆ​ಹ​ಲಿ(ಮೇ.06): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ವಿರುದ್ಧ ಕುಸ್ತಿ​ಪ​ಟು​ಗಳು ನಡೆ​ಸು​ತ್ತಿ​ರುವ ಪ್ರತಿ​ಭ​ಟ​ನೆ ಬಗ್ಗೆ ಕೇಂದ್ರ ಕ್ರೀಡಾ ಸಚಿ​ವ ಅನು​ರಾಗ್‌ ಠಾಕೂರ್‌ ಮೌನ ಮುರಿ​ದಿದ್ದು, ಕುಸ್ತಿ​ಪ​ಟು​ಗಳ ಎಲ್ಲಾ ಬೇಡಿ​ಕೆ​ಗ​ಳನ್ನು ಈಡೇ​ರಿ​ಸ​ಲಾ​ಗಿದೆ. ಈಗ ಅವರು ಪೊಲೀಸ್‌ ತನಿ​ಖೆಗೆ ಸಹ​ಕ​ರಿ​ಸ​ಬೇಕು ಎಂದು ಕೋರಿ​ದ್ದಾ​ರೆ.

ಈ ಬಗ್ಗೆ ಲಖ​ನೌ​ದಲ್ಲಿ ಮಾಧ್ಯ​ಮ​ಗಳ ಜೊತೆ ಮಾತ​ನಾ​ಡಿದ ಅವರು, ‘ಕು​ಸ್ತಿ​ಪ​ಟು​ಗಳ ಬೇಡಿ​ಕೆ​ಯಂತೆ ಪ್ರಕ​ರ​ಣದ ತನಿ​ಖೆಗೆ ಸಮಿತಿ ರಚಿ​ಸ​ಲಾ​ಗಿದೆ. ಬ್ರಿಜ್‌ ವಿರುದ್ಧ ದೆಹಲಿ ಪೊಲೀ​ಸರು ಎಫ್‌​ಐ​ಆರ್‌ ಕೂಡಾ ದಾಖ​ಲಿ​ಸಿ​ದ್ದಾರೆ. ಸುಪ್ರೀಂಕೋರ್ಟ್‌ ಕೂಡಾ ತನ್ನ ಆದೇಶ ಪ್ರಕ​ಟಿ​ಸಿದೆ. ಪೊಲೀ​ಸರು ತನಿಖೆ ನಡೆಸಿ ಕಾನೂನು ಪ್ರಕಾರ ಸೂಕ್ತ ಕಠಿಣ ಕ್ರಮ​ಕೈ​ಗೊ​ಳ್ಳ​ಲಿ​ದ್ದಾರೆ. ಅದಕ್ಕೆ ಕುಸ್ತಿ​ಪ​ಟು​ಗಳು ಸಹ​ಕ​ರಿ​ಸು​ವುದು ಅಗ​ತ್ಯ’ ಎಂದು ಹೇಳಿ​ದ್ದಾರೆ.

Tap to resize

Latest Videos

ಇನ್ನು, ಪ್ರಕ​ರ​ಣದ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ‘ಕಾ​ನೂನು ತಂಡದ ಜೊತೆ ಮಾತು​ಕತೆ ನಡೆ​ಸು​ತ್ತಿ​ದ್ದೇವೆ. ಮುಂದಿನ ನಡೆ ಬಗ್ಗೆ ಶೀಘ್ರ​ದಲ್ಲೇ ಮಾಹಿತಿ ನೀಡು​ತ್ತೇ​ವೆ’ ಎಂದಿ​ದ್ದಾರೆ. ಪೊಲೀ​ಸರ ತನಿ​ಖೆಯ ಬಗ್ಗೆ ತೃಪ್ತಿ ಇಲ್ಲ​ದಿ​ದ್ದರೆ ಕುಸ್ತಿ​ಪ​ಟು​ಗಳು ಕೆಳ ನ್ಯಾಯಾ​ಲಯ ಅಥವಾ ದೆಹಲಿ ಹೈಕೋರ್ಚ್‌ ಮೊರೆ ಹೋಗುವ ಸಾಧ್ಯತೆ ಇದೆ.

ಮಹಾ​ವೀರ್‌ ಬೆಂಬ​ಲ: ಕುಸ್ತಿಪಟುಗಳ ಪ್ರತಿಭಟನೆಗೆ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್‌ ಮಹಾವೀರ್‌ ಫೋಗಾಟ್‌ ಕೂಡಾ ಬೆಂಬಲ ಸೂಚಿ​ಸಿ​ದ್ದು, ಬ್ರಿಜ್‌ಭೂಷಣ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲ​ದಿ​ದ್ದರೆ ತಮ್ಮ ವಾಪಸ್‌ ನೀಡು​ವು​ದಾಗಿ ಬೆದರಿಕೆ ಹಾಕಿ​ದ್ದಾರೆ.

ಏಷ್ಯನ್‌ ವೇಟ್‌​ಲಿ​ಫ್ಟಿಂಗ್‌: ಮೀರಾಬಾಯಿ ಚಾನುಗೆ 5ನೇ ಸ್ಥಾನ

ಜಿಂಜು​(​ಕೊ​ರಿ​ಯಾ​): ಇಲ್ಲಿ ಆರಂಭ​ಗೊಂಡ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ತಾರಾ ಅಥ್ಲೀಟ್‌, ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು 5ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡಿದ್ದು, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಈ ಕೂಟದಲ್ಲೇ ಅರ್ಹತೆ ಪಡೆಯಲು ವಿಫಲರಾಗಿ​ದ್ದಾರೆ. ಅವರು ಒಟ್ಟು 194 ಕೆ.ಜಿ.(ಸ್ನ್ಯಾಚ್‌ನಲ್ಲಿ 85 ಕೆ.ಜಿ.+ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 109 ಕೆ.ಜಿ.) ತೂಕ ಎತ್ತಿದರು. 

Doha Diamond League: ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಇದು ಅವರ ವೈಯ​ಕ್ತಿಕ ಶ್ರೇಷ್ಠ​(207 ಕೆ.ಜಿ.) ಪ್ರದ​ರ್ಶ​ನ​ಕ್ಕಿಂತ 13 ಕೆ.ಜಿ. ಕಡಿಮೆ. 2021ರಲ್ಲಿ ಕ್ಲೀನ್‌ ಆಂಡ್‌ ಜರ್ಕ್​ನಲ್ಲಿ 119 ಕೆ.ಜಿ. ತೂಕ ಎತ್ತಿ ವಿಶ್ವ ದಾಖಲೆ ಬರೆ​ದಿದ್ದ ಚಾನು ಈ ಬಾರಿ ನಿರಾಸೆ ಅನು​ಭ​ವಿ​ಸಿ​ದರು. ಇದು ಅವರು 6 ವರ್ಷ​ದಲ್ಲೇ ಎತ್ತಿದ ಕನಿಷ್ಠ ಭಾರ ಎನಿ​ಸಿ​ಕೊಂಡಿದೆ.

ಬಾಕ್ಸಿಂಗ್‌ ವಿಶ್ವ​ಕಪ್‌: ಪ್ರಿ ಕ್ವಾರ್ಟ​ರ್‌ಗೆ ಹುಸ್ಮು​ದ್ದೀ​ನ್‌

ತಾಷ್ಕೆಂಟ್‌: ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ತಾರಾ ಬಾಕ್ಸರ್‌ ಮಹ​ಮದ್‌ ಹುಸ್ಮು​ದ್ದೀನ್‌ ಪ್ರಿ ಕ್ವಾರ್ಟ​ರ್‌ಗೆ ಲಗ್ಗೆ ಇಟ್ಟಿ​ದ್ದಾರೆ. ಶುಕ್ರ​ವಾರ 57 ಕೆ.ಜಿ. ವಿಭಾ​ಗದ ಸ್ಪರ್ಧೆ​ಯಲ್ಲಿ ಕಳೆದ ಬಾರಿಯ ಕಂಚಿನ ಪದಕ ವಿಜೇತ ಹುಸ್ಮು​ದ್ದೀನ್‌ ಚೀನಾದ ಲ್ಯು ಪಿಂಗ್‌ ವಿರು​ದ್ಧ 5-0 ಅಂತ​ರ​ದಲ್ಲಿ ಗೆಲುವು ಸಾಧಿಸಿದರು. 

ಅಂತಿಮ 16ರ ಸುತ್ತಿನಲ್ಲಿ ಭಾನು​ವಾರ ರಷ್ಯಾದ ಸ್ಯಾವಿನ್‌ ಎಡ್ವರ್ಡ್‌ ವಿರು​ದ್ಧ ಸೆಣ​ಸ​ಲಿ​ದ್ದಾರೆ. ಆದರೆ 80 ಕೆ.ಜಿ. ವಿಭಾಗದ 2ನೇ ಸುತ್ತಿನಲ್ಲಿ ಆಶಿಶ್‌ ಚೌಧರಿ ಕ್ಯೂಬಾದ ಆರ್ಲೆನ್‌ ವಿರುದ್ಧ 2-5 ಅಂತ​ರ​ದಲ್ಲಿ ಸೋತು ನಿರಾಸೆ ಅನು​ಭ​ವಿ​ಸಿ​ದ​ರು. ಶನಿ​ವಾರ 2ನೇ ಸುತ್ತಿ​ನಲ್ಲಿ 67 ಕೆ.ಜಿ. ವಿಭಾ​ಗ​ದಲ್ಲಿ ಆಕಾಶ್‌, 71 ಕೆ.ಜಿ. ವಿಭಾ​ಗ​ದಲ್ಲಿ ನಿಶಾಂತ್‌ ದೇವ್‌ ಕಣ​ಕ್ಕಿ​ಳಿ​ಯ​ಲಿ​ದ್ದಾರೆ.

ಮ್ಯಾಡ್ರಿಡ್‌ ಓಪನ್‌ ಟೆನಿ​ಸ್‌: ಬೋಪಣ್ಣ ಫೈನ​ಲ್‌ಗೆ ಲಗ್ಗೆ

ಮ್ಯಾಡ್ರಿ​ಡ್‌: ಭಾರ​ತದ ತಾರಾ ಟೆನಿ​ಸಿಗ ರೋಹನ್‌ ಬೋಪಣ್ಣ ಹಾಗೂ ಆಸ್ಪ್ರೇ​ಲಿ​ಯಾದ ಮ್ಯಾಥ್ಯೂ ಎಬ್ಡೆನ್‌ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿ​ಯ ಪುರು​ಷರ ಡಬ​ಲ್ಸ್‌​ನಲ್ಲಿ ಫೈನಲ್‌ ಪ್ರವೇ​ಶಿ​ಸಿ​ದ್ದು, ಈ ಆವೃ​ತ್ತಿಯ 3ನೇ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ದ್ದಾರೆ. ಮಾರ್ಚ್‌​ನಲ್ಲಿ ಎಬ್ಡೆನ್‌ ಜೊತೆ​ಗೂಡಿ ಬಿಎ​ನ್‌ಪಿ ಪರಿ​ಬಾಸ್‌ ಓಪನ್‌ ಗೆದ್ದಿದ್ದ ಬೋಪಣ್ಣ, ಎಟಿಪಿ ಮಾಸ್ಟ​ರ್ಸ್‌ 1000 ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಅತಿ​ಹಿರಿಯ ಆಟ​ಗಾರ ಎನಿ​ಸಿ​ಕೊಂಡಿ​ದ್ದರು. 

ಶುಕ್ರ​ವಾರ ಸೆಮಿ​ಫೈ​ನ​ಲ್‌​ನಲ್ಲಿ 7ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ ಮೆಕ್ಸಿ​ಕೋದ ಸಾಂಟ್ಯಾಗೊ ಗೊಂಜಾ​ಲೆ​ಜ್‌-ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವಿರುದ್ಧ 5-7, 7-6(3), 10-4 ಅಂತ​ರ​ದಲ್ಲಿ ಗೆಲುವು ಸಾಧಿಸಿತು. ಫೈನ​ಲ್‌​ನಲ್ಲಿ ಇವ​ರಿಗೆ ಶ್ರೇಯಾಂಕ ರಹಿತ ರಷ್ಯಾ ಜೋಡಿ ಕರೇನ್‌ ಕಚ​ನೋ​ವ್‌-ಆ್ಯಂಡ್ರೆ ರುಬ್ಲೆವ್‌ ಸವಾಲು ಎದು​ರಾ​ಗ​ಲಿದೆ.

ಆರ್ಚರಿ ಏಷ್ಯಾ​ಕ​ಪ್‌: 14 ಪದಕ ಗೆದ್ದ ಭಾರ​ತೀ​ಯ​ರು!

ತಾಷ್ಕೆಂಟ್‌: ಆರ್ಚರಿ ಏಷ್ಯಾಕಪ್‌ 2ನೇ ಹಂತದಲ್ಲಿ ಭಾರ​ತೀ​ಯರು ಕಾಂಪೌಂಡ್‌ ವಿಭಾ​ಗ​ದಲ್ಲಿ ಕ್ಲೀನ್‌ಸ್ವೀಪ್‌ ಸೇರಿ​ದಂತೆ ಒಟ್ಟು 7 ಚಿನ್ನ, 5 ಬೆಳ್ಳಿ ಹಾಗೂ 2 ಕಂಚು ಸೇರಿ 14 ಪದ​ಕ​ಗ​ಳನ್ನು ಬಾಚಿ​ಕೊಂಡಿ​ದ್ದು, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. ಪ್ರಗತಿ, ಪರ್‌​ನೀತ್‌, ರಜನೀ ಅವ​ರಿದ್ದ ಕಾಂಪೌಂಡ್‌ ಮಹಿಳಾ ತಂಡ, ಕುಶಾಲ್‌, ಅಭಿ​ಷೇಕ್‌, ಅಮಿತ್‌ ಅವ​ರ​ನ್ನೊ​ಳ​ಗೊಂಡ ಪುರು​ಷರ ತಂಡ ಹಾಗೂ ಮಿಶ್ರ ವಿಭಾ​ಗ​ದಲ್ಲಿ ಪರ್‌​ನೀ​ತ್‌-ಅಭಿ​ಷೇ​ಕ್‌ ಚಿನ್ನ ತಮ್ಮ​ದಾ​ಗಿ​ಸಿ​ಕೊಂಡರು. 

ಕಾಂಪೌಂಡ್‌ ಪುರು​ಷರ ವೈಯ​ಕ್ತಿಕ ವಿಭಾ​ಗ​ದಲ್ಲಿ ಅಭಿ​ಷೇಕ್‌, ಮಹಿ​ಳೆ​ಯ​ರ ವೈಯ​ಕ್ತಿಕ ವಿಭಾ​ಗ​ದಲ್ಲಿ ರಜನೀ ಬಂಗಾ​ರ​ದ ಸಾಧನೆ ಮಾಡಿ​ದರು. ರೀಕರ್ವ್‌ ಪುರು​ಷರ ತಂಡ ವಿಭಾ​ಗ​ದಲ್ಲಿ ಜಯಂತ್‌, ಮೃನಾಲ್‌, ತುಷಾರ್‌, ಮಿಶ್ರ ತಂಡ ವಿಭಾ​ಗದಲ್ಲಿ ಸಂಗೀತಾ ಹಾಗೂ ಮೃನಾ​ಲ್‌ಗೆ ಚಿನ್ನದ ಪದಕ ಲಭಿ​ಸಿತು.

click me!