Pro Kabaddi League: 9ನೇ ಆವೃತ್ತಿಯ ಪ್ರೊ ಕಬಡ್ಡಿಗೆ ತಂಡಗಳು ಸಿದ್ದ

By Naveen Kodase  |  First Published Aug 7, 2022, 1:31 PM IST

9ನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಕ್ತಾಯ
ಎರಡು ದಿನ ಮುಂಬೈನಲ್ಲಿ ನಡೆದ ಕಬಡ್ಡಿ ಆಟಗಾರರ ಹರಾಜು
2.26 ಕೋಟಿಗೆ ಹರಾಜಾಗುವ ಮೂಲಕ ದುಬಾರಿ ಆಟಗಾರ ಎನಿಸಿಕೊಂಡ ಪವನ್


ಮುಂಬೈ(ಆ.07): 9ನೇ ಆವೃತ್ತಿಯ ಪ್ರೊ ಕಬಡ್ಡಿಯ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹಲವು ಆಟಗಾರರು ವಿವಿಧ ತಂಡಗಳ ಪಾಲಾಗಿದ್ದಾರೆ. ತಾರಾ ಆಟಗಾರರಾದ ರೋಹಿತ್‌ ಕುಮಾರ್‌ ಹಾಗೂ ರಿಶಾಂಕ್‌ ದೇವಾಡಿಗ ಯಾವುದೇ ತಂಡಕ್ಕೆ ಹರಾಜಾಗದೆ ಅಚ್ಚರಿ ಮೂಡಿಸಿದರು. ಅಮೀರ್‌ಹೊಸೈನ್‌ ಬಸ್ಟೋಮಿ 65.10 ಲಕ್ಷ ರು.ಗೆ ಹರಾರ‍ಯಣ ತಂಡಕ್ಕೆ ಬಿಕರಿಯಾಗಿ 2ನೇ ದಿನದ ದುಬಾರಿ ಆಟಗಾರ ಎನಿಸಿಕೊಂಡರು. 

ಡಿಫೆಂಡರ್‌ ರವಿ ಕುಮಾರ್‌ರನ್ನು ದಬಾಂಗ್‌ ಡೆಲ್ಲಿ 64.10 ಲಕ್ಷ ರು. ನೀಡಿ ತನ್ನ ತೆಕ್ಕೆಗೆ ಪಡೆಯಿತು. ನೀರಜ್‌ ನರ್ವಾಲ್‌ 43 ಲಕ್ಷ ರು.ಗೆ ಬೆಂಗಳೂರು ಬುಲ್ಸ್‌ ಪಾಲಾದರೆ, ರಿಂಕು ನರ್ವಾಲ್‌ರನ್ನು ಗುಜರಾತ್‌ ಜೈಂಟ್ಸ್‌ 40 ಲಕ್ಷ ರು. ನೀಡಿ ಖರೀದಿಸಿತು. ಇನ್ನು, ಮೊದಲ ದಿನ ಬರೋಬ್ಬರಿ 2.26 ಕೋಟಿ ರು.ಗೆ ತಮಿಳ್‌ ತಲೈವಾಸ್‌ ತಂಡದ ಪಾಲಾಗಿದ್ದ ಪವನ್ ಶೆರಾವತ್‌ ಪ್ರೊ ಕಬಡ್ಡಿಯ ಈವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ಖ್ಯಾತಿಯನ್ನು ಉಳಿಸಿಕೊಂಡರು.

Tap to resize

Latest Videos

ಕಳೆದ ವರ್ಷ 1.65 ಕೋಟಿ ರು.ಗೆ ಪ್ರದೀಪ್‌ ನರ್ವಾಲ್‌ರನ್ನು ಯು.ಪಿ.ಯೋಧಾ ಖರೀದಿಸಿದ್ದು, ದಾಖಲೆ ಎನಿಸಿತ್ತು. ಶುಕ್ರವಾರ ಬೆಂಗಳೂರು ಬುಲ್ಸ್‌ 1.70 ಕೋಟಿ ರು.ಗೆ ರೈಡರ್‌ ವಿಕಾಸ್‌ ಖಂಡೋಲಾ ಅವರನ್ನು ಖರೀದಿಸಿ ಹೊಸ ದಾಖಲೆ ಬರೆಯಿತು. ಕೆಲವೇ ನಿಮಿಷದಲ್ಲಿ ಪವನ್‌ ಎಲ್ಲರನ್ನೂ ಹಿಂದಿಕ್ಕಿ ಪ್ರೊ ಕಬಡ್ಡಿಯಲ್ಲಿ 2 ಕೋಟಿ ರು. ದಾಟಿದ ಮೊದಲ ಆಟಗಾರ ಎನಿಸಿಕೊಂಡರು.

Fierce. Fiesty. Fearless 🔥

The Bulls are ready to charge, led by their new poster boy- Vikash Kandola 😎

Presenting the red-hot squad of the for Season 9️⃣ pic.twitter.com/Dfn1HBsdtv

— ProKabaddi (@ProKabaddi)

ಉಳಿದಂತೆ ಶುಕ್ರವಾರದ ಅಗ್ರ ಆಟಗಾರರ ಹರಾಜಿನಲ್ಲಿ ಫಜಲ್‌ ಅತ್ರಾಚೆಲಿ 1.38 ಕೋಟಿ ರು.ಗೆ ಪುಣೆ ಸೇರಿದರೆ, ಪ್ರದೀಪ್‌ ನರ್ವಾಲ್‌ 90 ಲಕ್ಷ ರು.ಗೆ ಯು.ಪಿ.ಯೋಧಾ ಪಾಲಾದರು. 87 ಲಕ್ಷಕ್ಕೆ ಇರಾನ್‌ನ ಆಲ್ರೌಂಡರ್‌ ಮೊಹಮದ್‌ ನಬೀಬಕ್‌್ಷರನ್ನು ಪುಣೆ ಖರೀದಿ ಮಾಡಿತು.

ಟಾಪ್‌-5 ದುಬಾರಿ ಆಟಗಾರರು

ಆಟಗಾರ ಮೊತ್ತ(ಕೋಟಿ ರು.ಗಳಲ್ಲಿ) ತಂಡ

ಪವನ್‌ ಶೆರಾವತ್‌ 2.26 ತಲೈವಾಸ್‌

ವಿಕಾಸ್‌ ಖಂಡೋಲಾ 1.70 ಬೆಂಗಳೂರು

ಫಜಲ್‌ ಅತ್ರಾಚೆಲಿ 1.38 ಪುಣೆ

ಪ್ರದೀಪ್‌ ನರ್ವಾಲ್‌ 0.90 ಯು.ಪಿ.ಯೋಧಾ

ನಬೀಬಕ್‌್ಷ 0.87 ಪುಣೆ

ಕಿರಿಯರ ವಿಶ್ವ ಅಥ್ಲೆಟಿಕ್ಸ್‌: ಸೆಲ್ವಾ ತಿರುಮಾರಣ್‌ಗೆ ಟ್ರಿಪಲ್‌ಜಂಪ್‌ ಬೆಳ್ಳಿ

ಕಾಲಿ(ಕೊಲಂಬಿಯಾ): ಭಾರತದ ತಾರಾ ಅಥ್ಲೀಟ್‌ ಸೆಲ್ವಾ ತಿರುಮಾರಣ್‌ ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಟ್ರಿಪಲ್‌ ಜಂಪ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 17 ವರ್ಷದ ಸೆಲ್ವಾ 2ನೇ ಪ್ರಯತ್ನದಲ್ಲಿ 16.15 ಮೀ. ದೂರಕ್ಕೆ ಜಿಗಿದು ರಜತ ಗೆದ್ದರೆ, ಜಮೈಕಾದ ಜೇಡನ್‌ ಹಿಬ್ಬರ್ಚ್‌ 17.27 ಮೀ. ದೂರ ಜಿಗಿದು ಬಂಗಾರ ತಮ್ಮದಾಗಿಸಿಕೊಂಡರು. 

Commonwealth Games 2022 ಲಾನ್‌ಬೌಲ್ಸ್‌ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ

ಇದೇ ವೇಳೆ ಕರ್ನಾಟಕದ ಪ್ರಿಯಾ ಮೋಹನ್‌, ಸಮ್ಮಿ, ರಜಿತಾ ಹಾಗೂ ರೂಪಲ್‌ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ 4*400 ಮೀ. ರಿಲೇ ಸ್ಪರ್ಧೆಯಲ್ಲಿ 3 ನಿಮಿಷ 34.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಫೈನಲ್‌ ಪ್ರವೇಶಿಸಿದೆ.

click me!