ತುಕ್ಕು ಹಿಡಿದ ಮೊಳೆಗಳು ಶತ್ರುಗಳಲ್ಲ: ಟೆಟನಸ್ ಕುರಿತು ತಿಳಿದಿರಬೇಕಾದ ವಿಚಾರಗಳು!

By Suvarna News  |  First Published Sep 9, 2024, 12:08 PM IST

'ಟೆಟನಸ್' ಎಂಬ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ತುಕ್ಕು ಹಿಡಿದ ಮೊಳೆಯ ಚಿತ್ರ ಬರುತ್ತದೆಯೇ? ಹಾಗಾದರೆ, ಈ ಯೋಚನೆ ಕೊಂಚ ಹಳೆಯದಾಯಿತು ಎನ್ನಬಹುದು. ಯಾಕೆಂದರೆ, ಟೆಟನಸ್ ತುಕ್ಕಿನಿಂದ ಉಂಟಾಗುವ ಸಮಸ್ಯೆಯಲ್ಲ.


ಗಿರೀಶ್ ಲಿಂಗಣ್ಣ
(ವಿಜ್ಞಾನ ವಿಶ್ಲೇಷಕರು)

'ಟೆಟನಸ್' ಎಂಬ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ತುಕ್ಕು ಹಿಡಿದ ಮೊಳೆಯ ಚಿತ್ರ ಬರುತ್ತದೆಯೇ? ಹಾಗಾದರೆ, ಈ ಯೋಚನೆ ಕೊಂಚ ಹಳೆಯದಾಯಿತು ಎನ್ನಬಹುದು. ಯಾಕೆಂದರೆ, ಟೆಟನಸ್ ತುಕ್ಕಿನಿಂದ ಉಂಟಾಗುವ ಸಮಸ್ಯೆಯಲ್ಲ.

Latest Videos

ಟೆಟನಸ್ ಒಂದು ಅಪಾಯಕಾರಿ ಸೋಂಕಾಗಿದ್ದು, ಕ್ಲಾಸ್ಟ್ರೀಡಿಯಂ ಟೆಟನಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಮಣ್ಣು, ಧೂಳು, ಮತ್ತು ಮಾನವ ಮತ್ತು ಪ್ರಾಣಿ ತ್ಯಾಜ್ಯಗಳು ಸೇರಿದಂತೆ ವಾತಾವರಣದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಟೆಟನಸ್ ಸೂಕ್ಷ್ಮಾಣು ಜೀವಿ ದೇಹದಲ್ಲಿ ಇರುವ ತೆರೆದ ಗಾಯಗಳ ಮೂಲಕ ದೇಹದೊಳಗೆ ಪ್ರವೇಶಿಸಬಲ್ಲದು ಎಂದು ವಾಂಡರ್ಬಿಲ್ಟ್ ವಿಶ್ವವಿದ್ಯಾಲಯದ ಸೋಂಕು ರೋಗಗಳ ತಜ್ಞರಾದ ಡಾ. ವಿಲಿಯಂ ಶಾಫ್ನರ್ ವಿವರಿಸಿದ್ದಾರೆ.

ಶತ್ರು ವಿನಾಶಕ: ಭಾರತೀಯ ನೌಕಾಪಡೆಯ ಸಾಮರ್ಥ್ಯ ವರ್ಧಿಸಲಿದೆ ಐಎನ್ಎಸ್ ಅರಿಘಾತ್

ಮೂಲತಃ ಟೆಟನಸ್ ಅಪಾಯ ದೇಹದಲ್ಲಿರುವ ಗಾಯದ ವಿಧದಿಂದಲೇ ಉಂಟಾಗುತ್ತದೆ. ಈ ಸೂಕ್ಷ್ಮಾಣು ಜೀವಿಯನ್ನು ಹೊಂದಿರುವ, ತುಕ್ಕು ಹಿಡಿದಿರುವ ಅಥವಾ ಹಿಡಿಯದಿರುವ ಯಾವುದೇ ವಸ್ತು ಚರ್ಮವನ್ನು ದಾಟಿ ದೇಹದೊಳಗೆ ಪ್ರವೇಶಿಸಿದಾಗ ಸೂಕ್ಷ್ಮಾಣು ಜೀವಿ ದೇಹದೊಳಗೆ ಪ್ರವೇಶಿಸಿ, ಟೆಟನಸ್ ಉಂಟುಮಾಡುತ್ತದೆ.

ಜನರೇಕೆ ಟೆಟನಸ್ ಮತ್ತು ತುಕ್ಕು ಹಿಡಿದ ಮೊಳೆಯ ಮಧ್ಯೆ ಸಂಬಂಧ ಕಲ್ಪಿಸಿದ್ದಾರೆ?

ಶಾಫ್ನರ್ ಅವರ ಪ್ರಕಾರ, ಹಲವಾರು ವರ್ಷಗಳಿಂದ ಜನರಲ್ಲಿ ತುಕ್ಕು ಹಿಡಿದ ಮೊಳೆಯನ್ನು ತುಳಿಯುವುದರಿಂದ ಟೆಟನಸ್ ಬರುತ್ತದೆ ಎಂಬ ಆಲೋಚನೆ ಮನೆ ಮಾಡಿದೆ.

ಸಾಮಾನ್ಯವಾಗಿ, ತುಕ್ಕು ಹಿಡಿದ ಮೊಳೆಗಳು ಸೂಕ್ಷ್ಮಾಣು ಜೀವಿಗಳಿರುವಂತಹ ಕೊಳಕು ಸ್ಥಳಗಳಲ್ಲೇ ಕಂಡುಬರುವ ಸಾಧ್ಯತೆಗಳಿರುವುದರಿಂದ, ಜನರು ತುಕ್ಕು ಹಿಡಿದ ಮೊಳೆ ಮತ್ತು ಟೆಟನಸ್ ನಡುವೆ ಸಂಬಂಧ ಕಲ್ಪಿಸಿದ್ದಾರೆ. ಆದರೆ, ಕಾಲ ಕ್ರಮೇಣ ಜನರು ಈ ನಂಬಿಕೆಯನ್ನು ಹೆಚ್ಚು ಹೆಚ್ಚು ನಂಬಿ, ಪ್ರಚುರಪಡಿಸಿದರು.

ಆದರೆ ಟೆಟನಸ್ ಬರಬೇಕಾದರೆ ಆ ಪ್ರದೇಶ ಕೊಳಕಾಗಿ ಕಾಣಬೇಕಾದ ಅಗತ್ಯವಿಲ್ಲ ಎಂದು ಶಾಫ್ನರ್ ವಿವರಿಸುತ್ತಾರೆ. ಸಾಕಷ್ಟು ಬಾರಿ ಜನರಿಗೆ ಅಡುಗೆ ಮನೆಯ ಚಾಕುವಿನಿಂದ ಕೈಗೆ ಗಾಯವಾದಾಗಲೂ ಟೆಟನಸ್ ಸಮಸ್ಯೆ ಉಂಟಾದ ಉದಾಹರಣೆಗಳಿವೆ.

ವಾತಾವರಣದಲ್ಲಿ ಕ್ಲಾಸ್ಟ್ರೀಡಿಯಂ ಟೆಟನಿ ಬೀಜಕದ ರೂಪದಲ್ಲಿ (ಬ್ಯಾಕ್ಟೀರಿಯಾ ಉಳಿಯಲು ಅನುಕೂಲ ಕಲ್ಪಿಸುವ ವ್ಯವಸ್ಥೆ) ನಿಷ್ಕ್ರಿಯವಾಗಿರುತ್ತದೆ. ಇದು ಆಮ್ಲಜನಕ ಇರುವಷ್ಟೂ ಸಮಯ ಸಂಕೀರ್ಣ ಪರಿಸ್ಥಿತಿಗಳಲ್ಲೂ ಉಳಿಯಲು ಬ್ಯಾಕ್ಟೀರಿಯಾಗೆ ಅವಕಾಶ ಕಲ್ಪಿಸುತ್ತದೆ.

ಆದರೆ, ಈ ಸ್ಪೋರ್ಸ್ ಮಾನವ ದೇಹದೊಳಗೆ ಪ್ರವೇಶಿಸಿದಾಗ, ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳುತ್ತದೆ.

ಆಮ್ಲಜನಕದ ಲಭ್ಯತೆ ಇಲ್ಲವಾದಾಗ ಸೂಕ್ಷ್ಮಾಣು ಜೀವಿಯನ್ನು ಮರು ಚಾಲ್ತಿಗೊಳಿಸಿ, ಮರುಜೀವಗೊಳಿಸುತ್ತದೆ. ದೇಹದಲ್ಲಿ ಒಂದು ಬಾರಿ ಸಕ್ರಿಯಗೊಂಡ ಈ ಸೂಕ್ಷ್ಮಾಣು ಜೀವಿ ಹಲವು ಪಟ್ಟು ಹೆಚ್ಚಳ ಕಂಡು, ರಕ್ತನಾಳದ ಮೂಲಕ ಹರಡುವ ಅಪಾಯಕಾರಿ ವಿಷವಸ್ತುವನ್ನು ಹರಡುತ್ತದೆ. ಟೆಟನಸ್ ಸಮಸ್ಯೆಗೆ ಈ ವಿಷ ವಸ್ತು ಕಾರಣವಾಗುತ್ತದೆಯೇ ಹೊರತು, ಬ್ಯಾಕ್ಟೀರಿಯಾ ಅಲ್ಲ.

 

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ಹಾಕಿಸುವುದರಿಂದ ಟೆಟನಸ್ ಉಂಟಾಗದಂತೆ ತಡೆಯಲು ಸಾಧ್ಯ. ಮಕ್ಕಳಿಗೆ ಬ್ಯಾಕ್ಟೀರಿಯಾದಿಂದ ರಕ್ಷಣೆಗೆ ಹಲವು ಸರಣಿ ಲಸಿಕೆಗಳ ಅವಶ್ಯಕತೆ ಇದ್ದರೆ, ವಯಸ್ಕರು ಪ್ರತಿ ಹತ್ತು ವರ್ಷಗಳಿಗೊಮ್ಮೆ ಬೂಸ್ಟರ್ ಲಸಿಕೆ ಪಡೆಯಬೇಕು.

ಒಂದು ವೇಳೆ ಲೋಹದ ವಸ್ತು ತಾಗಿ, ಆಳವಾದ ಗಾಯ ಉಂಟಾದರೆ, ನೀವು ಕೊನೆಯ ಬಾರಿ ಲಸಿಕೆ ಪಡೆದು ಐದು ವರ್ಷಗಳಿಗೂ ಹೆಚ್ಚು ಸಮಯವಾಗಿದ್ದರೆ, ವೈದ್ಯರು ಬೂಸ್ಟರ್ ಲಸಿಕೆ ಪಡೆದುಕೊಳ್ಳುವಂತೆ ನಿಮಗೆ ಸಲಹೆ ನೀಡಬಹುದು.

click me!