ಇವತ್ತು ಕಾಣಲಿರೋ ಮೂನ್ ಸೂಪರ್ರೋ ಸೂಪರ್: ಚಂದ್ರನ ನೋಡೋದು ಮಿಸ್‌ ಮಾಡ್ಲೇಬೇಡಿ..!

Published : Aug 31, 2023, 11:56 AM IST
ಇವತ್ತು ಕಾಣಲಿರೋ ಮೂನ್ ಸೂಪರ್ರೋ ಸೂಪರ್: ಚಂದ್ರನ ನೋಡೋದು ಮಿಸ್‌ ಮಾಡ್ಲೇಬೇಡಿ..!

ಸಾರಾಂಶ

ಆಗಸ್ಟ್ 31, ಹಾಗೂ ಸಪ್ಟಂಬರ್ 29 ಎಲ್ಲಾ ಹಣ್ಣಿಮೆಗಳೂ ಸೂಪರ್‌ ಮೂನ್ ಇರಲಿದೆ. ಸೂಪರ್‌ ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಈ ವಿಶೇಷ ಅನುಭವವನ್ನು ಎಲ್ಲರೂ ಪಡೆದುಕೊಳ್ಳಬಹುದು 

ಉಡುಪಿ(ಆ.31): ಈ ವರ್ಷದ ನಾಲ್ಕು ಸೂಪರ್‌ ಮೂನ್‌ಗಳು ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸಪ್ಟೆಂಬರ್ 29ರಲ್ಲಿ ಗೋಚರಿಸುತ್ತದೆ. ಇವುಗಳಲ್ಲಿ ಶ್ರಾವಣದ ಈ ಹುಣ್ಣಿಮೆಯ ಚಂದ್ರನ ಸೂಪರ್ ಮೂನ್ ಹೆಚ್ಚಿನ ಪ್ರಭೆಯಿಂದ ಕೂಡಿರುತ್ತದೆ. ಕಾರಣ ಈ ನಾಲ್ಕರಲ್ಲಿ ಇದು ಭೂಮಿಗಿಂತ ಹೆಚ್ಚು ಸಮೀಪವಾಗಿರುತ್ತದೆ. ಆದುದರಿಂದ ಈ ಹುಣ್ಣಿಮೆ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆಯಂದ ಕೂಡಿರುತ್ತದೆ ಎಂದು ಖಗೋಳತಜ್ಞ ಡಾ.ಎ.ಪಿ.ಭಟ್ ಹೇಳಿದ್ದಾರೆ.

ಇನ್ನೊಂದು ವಿಶೇಷ ಅಂದರೆ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು ಬರುತ್ತಿದ್ದು, ಅದರಲ್ಲೂ ಸೂಪರ್‌ಮೂನ್ ಆಗಿದೆ. ಇವೆರಡೂ ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 31, ಹಾಗೂ ಸಪ್ಟಂಬರ್ 29 ಎಲ್ಲಾ ಹಣ್ಣಿಮೆಗಳೂ ಸೂಪರ್‌ ಮೂನ್ ಇರಲಿದೆ. ಸೂಪರ್‌ ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಈ ವಿಶೇಷ ಅನುಭವವನ್ನು ಎಲ್ಲರೂ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಚಂದ್ರನ ಮೇಲೆ ಓಡಾಡಿದ ರೋವರ್‌: ಐತಿಹಾಸಿಕ ಹೆಜ್ಜೆ!

ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಸೂಪರ್‌ ಮೂನ್‌ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ ಮೈಕ್ರೊ ಮೂನ್‌ಗಳಲ್ಲಿ ಚಿಕ್ಕದಾಗಿ ಕಾಣುತ್ತದೆ. ಇದಕ್ಕೆ ಕಾರಣ ಚಂದ್ರ ಭೂಮಿಯಿಂದ ಯಾವಾಗಲೂ ಒಂದೇ ಸಮಾನವಾದ ದೂರದಲ್ಲಿರುವುದಿಲ್ಲ ಎಂದು ಹೇಳಿದ್ದಾರೆ.

ಚಂದ್ರ ಭೂಮಿಯ ಸುತ್ತ ಸುತ್ತುವ ಪಥ ದೀರ್ಘವೃತ್ತವಾಗಿರುವುದರಿಂದ ಒಂದು ಸುತ್ತು ಸುತ್ತುವಾಗ ಒಮ್ಮೆ ಅತೀ ದೂರ (ಅಪೊಜಿ) ಅಪಭೂದಲ್ಲಿದ್ದರೆ ಒಮ್ಮೆ ಅತೀ ಸಮೀಪ (ಪೆರಿಜಿ ) ಪರಭೂದಲ್ಲಿರುತ್ತದೆ. ಚಂದ್ರ ಭೂಮಿಗಳ ಸರಾಸರಿ ದೂರ 3, 84,400 ಕಿಮೀ ಆದರೆ, ಸಮೀಪ ದೂರ 3, 56,000 ಕಿಮೀ ಹಾಗೂ ದೂರದ ದೂರ 4,06,000 ಕಿಮೀ. 

1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

ಹತ್ತಿರಬಂದಾಗ ವಸ್ತು ದೊಡ್ಡದಾಗಿ ಕಾಣುವುದು. ದೂರಹೊದಂತೆ ಚಿಕ್ಕದಾಗಿ ಕಾಣುವುದು ಪ್ರಕೃತಿವಿಯಮ. ಹಾಗಾಗಿ ಸೂಪರ್ ಮೂನಿನ ದಿನ ಚಂದ್ರ ಸುಮಾರು 30 ಸಾವಿರ ಕಿಮೀ ಹತ್ತಿರ ಬರುವುದರಿಂದ ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24 ಅಂಶದಷ್ಟು ಚಂದ್ರಪ್ರಭೆ ಹೆಚ್ಚಿರುತ್ತದೆ.

ಜುಲೈ 3 ರಂದು ಚಂದ್ರ ಭೂಮಿಯಿಂದ 3,61800 ಕಿಮೀ, ಆಗಸ್ಟ್ 1 ರಂದು 3,57,530  ಕಿಮೀ ,ಆಗಸ್ಟ್ 31 ರಂದು 3,57,344 ಕಿಮೀ ಹಾಗೂ ಸಪ್ಟಂಬರ್ 29 ರಂದು 3,61,552 ಕಿಮೀ ಇರಲಿದೆ. 
ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆಯೂ ಕಾರಣ. ಹಾಗಾಗಿ ಸೂಪರ್ ಮೂನ್‌ಗಳಲ್ಲಿ ಸಮುದ್ರದ ತರೆಗಳ ಅಬ್ಬರ ಹೆಚ್ಚಿರುತ್ತದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ