ನಿಗದಿತ ಗುರಿ ಮುಟ್ಟಿದ ಎಕ್ಸ್‌ಪೋಸ್ಯಾಟ್‌, ಚಿತ್ರ ರಿಲೀಸ್‌ ಮಾಡಿದ ಇಸ್ರೋ!

By Santosh Naik  |  First Published Jan 1, 2024, 4:10 PM IST

ಹೊಸ ವರ್ಷದ ಮೊದಲ ದಿನವೇ ಇಸ್ರೋ ಸ್ಮರಣೀಯವಾಗಿಸಿಕೊಂಡಿದೆ. ಸೂರ್ಯ,ಚಂದ್ರರ ಕುರಿತಾಗಿನ ತನ್ನ ಯಶಸ್ವಿ ಯೋಜನೆಗಳ ಬಳಿಕ ಬಾಹ್ಯಾಕಾಶದ ಕಪ್ಪುಕುಳಿಗಳ ಸಂಶೋಧನೆಗಾಗಿ ಇಸ್ರೋ ಸೋಮವಾರ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಯಶಸ್ವಿಯಾಗಿ ಹಾರಿಸಿದೆ.


ಬೆಂಗಳೂರು (ಜ.1): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತನ್ನ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಸಿ-58 ತನ್ನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ. ಇದರ ಬೆನ್ನಲ್ಲಿಯೇ ಪಿಎಸ್‌ಎಲ್‌ವಿ-ಸಿ58 ಉಡಾವಣಾ ವಾಹನದಲ್ಲಿದ್ದ ಕ್ಯಾಮೆರಾಗಳು ಎಕ್ಸಪೋಸ್ಯಾಟ್‌ ಉಪಗ್ರಹ ಬಾಹ್ಯಾಕಾಶದಲ್ಲಿ ಬೇರ್ಪಡುವ ವಿಡಿಯೋವನ್ನು ಸೆರೆಹಿಡಿದ್ದು, ಇಸ್ರೋ ಇದನ್ನು ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪ್ರಕಟಿಸುವ ಮೂಲಕ ಸ್ಯಾಟಲೈಟ್‌ ಈಗ ನಿಗದಿತ ಗುರಿ ಮುಟ್ಟಿದೆ ಎಂದು ಹೇಳಿದೆ. ಇಸ್ರೋ ವಿಶ್ವದ ಎರಡನೇ ಮತ್ತು ದೇಶದ ಮೊದಲ ಇಂಥ ಉಪಗ್ರಹವನ್ನು ಉಡಾವಣೆ ಮಾಡಿದೆ, ಇದು ಪಲ್ಸರ್‌ಗಳು, ಕಪ್ಪು ಕುಳಿಗಳು, ಗೆಲಾಕ್ಸಿಗಳು ಮತ್ತು ವಿಕಿರಣ ಇತ್ಯಾದಿಗಳನ್ನು ಅಧ್ಯಯನ ಮಾಡುತ್ತದೆ. ಇದರ ಹೆಸರು ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat). ಇದರೊಂದಿಗೆ ಇತರ 10 ಪೇಲೋಡ್‌ಗಳನ್ನು ಸಹ ಕಳುಹಿಸಿಕೊಟ್ಟಿದೆ.

ಈ ಉಪಗ್ರಹದ ಜೀವಿತಾವಧಿ ಐದು ವರ್ಷಗಳು. PSLV-C58 ಅನ್ನು ಇಂದು ಬೆಳಗ್ಗೆ 9:10 ಕ್ಕೆ ಉಡಾವಣೆ ಮಾಡಲಾಯಿತು. ಇದು ಪಿಎಸ್ ಎಲ್ ವಿ ರಾಕೆಟ್ ಸರಣಿಯ 60ನೇ ಉಡಾವಣೆಯಾಗಿದೆ. XPoSat ಉಡಾವಣೆಗೆ ಒಂದು ದಿನ ಮೊದಲು, ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ್ದರು.

PSLV-C58 on board camera views. pic.twitter.com/vOtaLvGqAj

— ISRO (@isro)

ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಸಂಭವಿಸುವ ವಿಕಿರಣವನ್ನು ಅಧ್ಯಯನ ಮಾಡುತ್ತದೆ. ಅವುಗಳ ಮೂಲಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಅಳವಡಿಸಲಾಗಿರುವ ದೂರದರ್ಶಕವನ್ನು ರಾಮನ್ ಸಂಶೋಧನಾ ಸಂಸ್ಥೆ ತಯಾರಿಸಿದೆ. ಈ ಉಪಗ್ರಹವು ಬ್ರಹ್ಮಾಂಡದ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುತ್ತದೆ. ಹಾಗೆ- ಪಲ್ಸರ್, ಬ್ಲ್ಯಾಕ್ ಹೋಲ್ ಎಕ್ಸ್-ರೇ ಬೈನರಿ, ಆಕ್ಟಿವ್ ಗ್ಯಾಲಕ್ಟಿಕ್ ನ್ಯೂಕ್ಲಿಯಸ್, ನಾನ್ ಥರ್ಮಲ್ ಸೂಪರ್ನೋವಾ. ಉಪಗ್ರಹವನ್ನು 650 ಕಿ.ಮೀ ಎತ್ತರದಲ್ಲಿ ನಿಯೋಜಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.
7 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಯೋಜನೆ:   ಈ ಮಿಷನ್ ಅನ್ನು 2017 ರಲ್ಲಿ ಇಸ್ರೋ ಪ್ರಾರಂಭಿಸಿತ್ತು.. ಈ ಮಿಷನ್‌ನ ವೆಚ್ಚ 9.50 ಕೋಟಿ ರೂಪಾಇ. ಉಡಾವಣೆಯಾದ ಸುಮಾರು 22 ನಿಮಿಷಗಳ ನಂತರ, ಎಕ್ಸೋಪಾಸ್ಯಾಟ್ ಉಪಗ್ರಹವನ್ನು ಅದರ ಗೊತ್ತುಪಡಿಸಿದ ಕಕ್ಷೆಯಲ್ಲಿ ನಿಯೋಜಿಸಲಾಗಿದೆ. ಈ ಉಪಗ್ರಹವು ಎರಡು ಪೇಲೋಡ್‌ಗಳನ್ನು ಹೊಂದಿದೆ. ಮೊದಲನೆಯದು POLIX ಮತ್ತು ಎರಡನೇ - XSPECT.

Tap to resize

Latest Videos

undefined

ಜ.1ಕ್ಕೆ ಇಸ್ರೋ ಮೈಲಿಗಲ್ಲು, ನ್ಯೂಟ್ರಾನ್ ನಕ್ಷತ್ರ, ಕಪ್ಪು ಕುಳಿ ಅಧ್ಯಯನಕ್ಕೆ XPoSAT ಉಪಗ್ರಹ ಉಡಾವಣೆ!

ಏನಿದು ಪೊಲಿಕ್ಸ್‌ ಪೇಲೋಡ್‌: ಪೋಲಿಕ್ಸ್ ಈ ಉಪಗ್ರಹದ ಮುಖ್ಯ ಪೇಲೋಡ್. ಇದನ್ನು ರಾಮನ್ ಸಂಶೋಧನಾ ಸಂಸ್ಥೆ ಮತ್ತು ಯುಆರ್ ರಾವ್ ಉಪಗ್ರಹ ಕೇಂದ್ರ ಜಂಟಿಯಾಗಿ ರಚಿಸಿದೆ. 126 ಕೆಜಿ ತೂಕದ ಈ ಉಪಕರಣವು ಬಾಹ್ಯಾಕಾಶದಲ್ಲಿನ ಮೂಲಗಳ ಕಾಂತಕ್ಷೇತ್ರ, ವಿಕಿರಣ, ಎಲೆಕ್ಟ್ರಾನ್‌ಗಳು ಇತ್ಯಾದಿಗಳನ್ನು ಅಧ್ಯಯನ ಮಾಡುತ್ತದೆ. ಇದು 8-30 ಕೆವಿ ಶ್ರೇಣಿಯ ಶಕ್ತಿಯ ಬ್ಯಾಂಡ್ ಅನ್ನು ಅಧ್ಯಯನ ಮಾಡುತ್ತದೆ. ಪೋಲಿಕ್ಸ್ ಬಾಹ್ಯಾಕಾಶದಲ್ಲಿನ 50 ಪ್ರಕಾಶಮಾನವಾದ ವಸ್ತುಗಳಲ್ಲಿ 40 ಅನ್ನು ಅಧ್ಯಯನ ಮಾಡುತ್ತದೆ.

ಜನವರಿ 6ಕ್ಕೆ ಎಲ್‌1 ಪಾಯಿಂಟ್‌ ತಲುಪಲಿದೆ ಆದಿತ್ಯ, ಬಾಹ್ಯಾಕಾಶ ನಿಲ್ದಾಣದ ಹೆಸರು ಘೋಷಿಸಿದ ಇಸ್ರೋ!

click me!