ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಎದುರಾಗಿರುವ ಹಲವು ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ 2022ರಲ್ಲಿ ವೈಯುಕ್ತಿಕ ಡೇಟಾ ರಕ್ಷಣೆ ಕರಡು ಮಸೂದೆಯನ್ನು 2022ರಲ್ಲಿ ರಚಿಸಿತ್ತು. ಇದೀಗ ಸಾರ್ವಜನಿಕರು, ತಜ್ಞರು ಸಲಹೆ ಬಳಿಕ ಕೆಲ ಬದಲಾವಣೆಯೊಂದಿಗೆ ಕೇಂದ್ರ ಸಚಿವ ಸಂಪುಟ ನೂತನ ಡೇಟಾ ಪ್ರೊಟೆಕ್ಷನ್ ಬಿಲ್‌ಗೆ ಅನುಮೋದನೆ ನೀಡಿದೆ.
ನವದೆಹಲಿ(ಜು.05): ಭಾರತದ ಡಿಜಿಟಲ್ ಕ್ರಾಂತಿ ಮಾಡಿದೆ. ಆದರೆ ಇದೇ ವೇಳೆ ಎದುರಾಗಿರುವೇ ಡೇಟಾ ರಕ್ಷಣೆಗಾಗಿ ಇದೀಗ ಮಸೂದೆ ತರಲು ಸಜ್ಜಾಗಿದೆ. 2022ರ ನವೆಂಬರ್ ತಿಂಗಳಲ್ಲಿ ಡಿಜಿಟಲ್ ವೈಯುಕ್ತಿಕ ಡೇಟಾ ಸುರಕ್ಷತಾ ಕರಡು ಮಸೂದೆ ರಚಿಸಲಾಗಿತ್ತು. ಇದೀಗ ಕೆಲ ಬದಲಾವಣೆಯೊಂದಿಗೆ ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವೈಯಕ್ತಿಕ ಡೇಟಾ ರಕ್ಷಣೆ ಬಿಲ್ ಮಂಡಿಸುವ ನಿರೀಕ್ಷೆ ಇದೆ.
ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕರಡು ಮಸೂದೆಯನ್ನು ಕೇಂದ್ರ ಸರ್ಕಾರ 2022ರ ನವೆಂಬರ್ ತಿಂಗಳಲ್ಲಿ ರಚಿಸಿತ್ತು. ಬಳಿಕ ಹಲವು ಸುತ್ತಿನ ಸಾರ್ವಜನಿಕ ಸಮಾಲೋಚನೆ, ಸಲಹೆಗಳಿಗೆ ಅಹ್ವಾನ ನೀಡಲಾಗಿತ್ತು. ಈ ಸಲಹೆ, ಸೂಚನೆ ಹಾಗೂ ಸಚಿವಾಲಯದ ಚರ್ಚಗಳ ಬಳಿಕ ಕರಡು ಪ್ರತಿಮೆ ಸಿದ್ದಪಡಿಸಿದೆ. ಪರಿಷ್ಕೃತ ಡೇಟಾ ಪ್ರೊಟೆಕ್ಷನ್ ಬಿಲ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
undefined
ಇಂಟರ್ನೆಟ್ ಭವಿಷ್ಯಕ್ಕೆ ಭಾರತದ ಪ್ರತ್ಯೇಕ ನೀತಿ; ಸೂಕ್ತ ಮಾನದಂಡ ರಚಿಸಲು ಸಿದ್ಧ: ರಾಜೀವ್ ಚಂದ್ರಶೇಖರ್
2018ರಲ್ಲಿ ಮಂಡಿಸಲಾದ ಡೇಟಾ ಪ್ರೊಟೆಕ್ಷನ್ ಬಿಲ್ ಸಂಕೀರ್ಣವಾಗಿದೆ ಅನ್ನೋ ಕಾರಣಕ್ಕೆ ಹಿಂತೆಗೆದುಕೊಳ್ಳಲಾಗಿತ್ತು. ಬಳಿಕ ಸಂಸತ್ತಿನ ಜಂಟಿ ಸಮಿತಿ ಪರಿಶೀಲನೆ, ಪರಾಮರ್ಶೆಗಳಿಂದ ಕೆಲ ಬದಲಾವಣೆ ಮಾಡಲಾಗಿತ್ತು. ಪ್ರಮುಖವಾಗಿ ಈ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, ತಂತ್ರಜ್ಞಾನದ ನಿಯಮಾವಳಿಯಾಗಿದೆ. ಇದು ಡಿಜಿಟಲ್ ಇಂಡಿಯಾ ಮಸೂದೆಯನ್ನು ಒಳಗೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಭಾರತೀಯ ದೂರಸಂಪರ್ಕ ಮಸೂದೆ 2022 ಹಾಗೂ ಡೇಟಾ ಆಡಳಿತ ನೀತಿ ಮಸೂದೆಗಳ ಆಧಾರದಲ್ಲಿ ನೂತನ ಡೇಟಾ ಪ್ರೊಟಕ್ಷನ್ ಬಿಲ್ ಪರಿಷ್ಕರಿಸಲಾಗಿದೆ.
ಈ ಮಸೂದೆ ಜನಸಾಮಾನ್ಯರ ಡೇಟಾ ಸಂರಕ್ಷಣೆಯನ್ನು ಒತ್ತಿ ಹೇಳುತ್ತದೆ. ಡೇಟಾ ಸೋರಿಕೆ, ಡೇಟಾ ದುರ್ಬಳೆಕೆ ತಡೆಯಲು ಈ ಬಿಲ್ ನೆರವಾಗಲಿದೆ. ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿನ ಖಾತಯನ್ನು ಡಿಲೀಟ್ ಮಾಡಿದರೆ, ಆತನ ಎಲ್ಲಾ ವೈಯುಕ್ತಿಕ ಮಾಹಿತಿಯನ್ನು ಅಳಿಸಬೇಕು. ಸಂಗ್ರಹಿಸಿದ ಡೇಟಾವನ್ನು ಬೇರೆ ಉದ್ದೇಶಕಕ್ಕಾಗಿ ಬಳಕೆ ಮಾಡುವುದು ಇದರಿಂದ ತಪ್ಪುತ್ತದೆ. ಉದಾಹರಣೆಗೆ ಬ್ಯಾಂಕ್‌ನಲ್ಲಿನ ಖಾತೆಯನ್ನು ಗ್ರಾಹಕರ ಕ್ಲೋಸ್ ಮಾಡಿದರೆ, ಆತನ ಎಲ್ಲಾ ವೈಯುಕ್ತಿ ದಾಖಲೆಗಳನ್ನು ಡಿಲೀಟ್ ಮಾಡಲಾಗುತ್ತದೆ. ಬಳಿಕ ಗ್ರಾಹಕನ ಕುರಿತ ಯಾವುದೇ ಮಾಹಿತಿಗಳು ಬ್ಯಾಂಕ್ ಸರ್ವರ್‌ನಲ್ಲಿ ಲಭ್ಯವಿರುವುದಿಲ್ಲ. ಇದೇ ರೀತಿ ಸಾಮಾಜಿಕ ಮಾಧ್ಯದಲ್ಲಿ ಖಾತೆ ಡಿಲೀಟ್ ಆದ ಬಳಿಕ ಬಳಕೆದಾರರ ಕುರಿತು ಯಾವುದೇ ಮಾಹಿತಿ ಇರಬಾರದು.
Data Protection Bill: ದತ್ತಾಂಶ ಸೋರಿಕೆ ಆದರೆ 500 ಕೋಟಿ ರೂ. ದಂಡ..!
ಈ ಮಸೂದೆ ಡಿಜಿಟಲ್ ಡೇಟಾ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ. ಸ್ಥಳೀಯ ಮಟ್ಟದಲ್ಲೇ ಡೇಟಾ ಸಂಗ್ರಹಣೆ, ಭೌಗೋಳಿಕವಾಗಿ ಡೇಟಾ ನಿರ್ವಹಣೆ ಸೇರಿ ಹಲವು ಕ್ಲಿಷ್ಟಕರ ವಿಷಗಳ ಕುರಿತು ಈ ಮಸೂದೆ ಸ್ಪಷ್ಟ ಚಿತ್ರಣ ನೀಡಲಿದೆ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ನೂತನ ಮಸೂದೆ ರಚಿಸಲಾಗಿದೆ.