ಪಿಟಿಐ ಬೆಂಗಳೂರು: ಉಪಗ್ರಹಗಳ ಉಡ್ಡಯನ, ಬಾಹ್ಯಾಕಾಶ ಯಾನಕ್ಕೆ ಬಳಸಬಹುದಾದ ಮರುಬಳಕೆಯ ಉಡ್ಡಯನ ನೌಕೆ (ಸ್ಪೇಸ್‌ಶಿಪ್) ಅಭಿವೃದ್ಧಿಪಡಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (Indian Space Research Organization) ಸ್ಪೇಸ್‌ಶಿಪ್ ಅನ್ನು ರನ್‌ವೇನಲ್ಲಿ ಇಳಿಸುವ ತಂತ್ರಜ್ಞಾನವನ್ನು ಶೀಘ್ರವೇ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆಯಲ್ಲಿ (Challakere) ಪ್ರಯೋಗಕ್ಕೆ ಒಳಪಡಿಸಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೋದ ಮುಖ್ಯಸ್ಥ (ISRO chief)ಎಸ್.ಸೋಮನಾಥ್ (S. Somnath), ‘ನಾವು ಹವಾಮಾನವನ್ನು ಪರಿಶೀಲಿಸುತ್ತಿದ್ದೇವೆ. ತಕ್ಷಣಕ್ಕೆ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಗಾಳಿ ಮತ್ತು ಇತರೆ ಕೆಲ ಪರಿಸ್ಥಿತಿಗಳು ಸುಗಮವಾಗುವುದನ್ನು ಕಾಯುತ್ತಿದ್ದೇವೆ. ಅದು ನಾವು ಎಣಿಸಿದ ಸ್ಥಿತಿ ತಲುಪಿದ ಕೂಡಲೇ ಮರುಬಳಕೆ ಮಾಡಬಹುದಾದ ಉಡ್ಡಯನ ವಾಹನದ (RLV) ರನ್‌ವೇ ಲ್ಯಾಂಡಿಂಗ್ ಪರೀಕ್ಷೆ ನಡೆಸಲಿದ್ದೇವೆ’ ಎಂದು ತಿಳಿಸಿದ್ದಾರೆ.
ಪರೀಕ್ಷೆ ಹೇಗೆ ನಡೆಯುತ್ತದೆ:
ಆರ್‌ಎಲ್‌ವಿಯನ್ನು ಹೆಲಿಕಾಪ್ಟರ್ (helicopter) ಮೂಲಕ 3-5 ಕಿ.ಮೀ ಎತ್ತರ ಮತ್ತು 5 ಕಿ.ಮೀ ದೂರದ ಪ್ರದೇಶಕ್ಕೆ ಕೊಂಡೊಯ್ಯಲಾಗುವುದು. ಬಳಿಕ ಅದನ್ನು ಅದನ್ನು ಹೆಲಿಕಾಪ್ಟರ್‌ನಿಂದ ಬೇರ್ಪಡಿಸಲಾಗುವುದು. ಬಳಿಕ ಅದು ಅಲ್ಲಿಂದ, ಪೈಲಟ್ ನೆರವು ಇಲ್ಲದೆಯೇ ತೇಲಿಕೊಂಡು ರನ್‌ವೇನತ್ತ (runway) ಸಾಗಿಬಂದು, ಲ್ಯಾಂಡಿಂಗ್ ಗೇರ್ ಬಳಸಿ ಸ್ವಯಂ ರನ್‌ವೇನಲ್ಲಿ ವಿಮಾನದಂತೆ ಇಳಿಯಲಿದೆ.
ಮಂಗಳನ ಅಧ್ಯಯನಕ್ಕೆ ಇಸ್ರೋ ಕಳಿಸಿದ್ದ ಮಾಮ್ ಸಂಪರ್ಕ ಕಡಿತ
ಈಗಾಗಲೇ ಮೊದಲ ಹಂತದಲ್ಲಿ ಸ್ಪೇಸ್‌ಶಿಪ್‌ನ ಲ್ಯಾಂಡಿಂಗ್ ಗೇರ್ (landing gear), ಪ್ಯಾರಾಚ್ಯೂಟ್ (parachute), ಹುಕ್‌ಬೀಮ್ (hookbeam), ರಾಡಾರ್ ಆಲ್ಟಿಮೀಟರ್ (radar altimeter) ಮೊದಲಾದ ವ್ಯವಸ್ಥೆಗಳು ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿವೆ ಎಂದು ಇಸ್ರೋ ಹೇಳಿಕೊಂಡಿತ್ತು. ಅದರ ಮುಂದಿನ ಭಾಗವಾಗಿ ಇದೀಗ ಸ್ಪೇಸ್‌ಶಿಪ್ ಸ್ವಯಂ ರನ್‌ವೇನಲ್ಲಿ ಇಳಿಯಬಲ್ಲ ತಂತ್ರಜ್ಞಾನವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸ್ಪೇಸ್‌ಶಿಪ್ ಏಕೆ?:
ಹಾಲಿ ಉಪಗ್ರಹಗಳನ್ನು ಹಾರಿಬಿಡಲು ರಾಕೆಟ್ (Rockets)ಬಳಸಲಾಗುತ್ತಿದೆ. ಒಮ್ಮೆ ಉಪಗ್ರಹವನ್ನು (satellite) ಉಡ್ಡಯನ ಮಾಡಿದ ಬಳಿಕ ರಾಕೆಟ್ ಸುಟ್ಟು ಭಸ್ಮವಾಗಿ ಹೋಗುತ್ತದೆ. ಉಪಗ್ರಹಕ್ಕಿಂತ ರಾಕೆಟ್ ವೆಚ್ಚವೇ ಹೆಚ್ಚಿರುತ್ತದೆ. ಹೀಗಾಗಿ ಮರುಬಳಕೆ ಮಾಡಬಹುದಾದ ಸ್ಪೇಸ್‌ಶಿಪ್ ಅಭಿವೃದ್ಧಿಪಡಿಸಿದರೆ ಅವು ಉಪಗ್ರಹಗಳನ್ನು ಕಕ್ಷೆಗೆ ಸೇರಿದ ಭೂಮಿಗೆ ಮರಳುತ್ತವೆ. ಅವುಗಳನ್ನು ಮರಳಿ ಎಷ್ಟು ಬಾರಿ ಬೇಕಾದರೂ ಬಳಸಬಹುದು. ಇದರಿಂದ ಉಡ್ಡಯನ ವೆಚ್ಚ ಕಡಿತವಾಗುತ್ತದೆ. ಬಾಹ್ಯಾಕಾಶ ಯಾನಕ್ಕೂ ಇದು ನೆರವಾಗುತ್ತದೆ.
Viral News: ಗಗನ ಯಾತ್ರಿಗಳಿಗೆ ಹೇಗೆ ಹೇರ್‌ಕಟ್ ಮಾಡ್ತಾರೆ ಗೊತ್ತಾ.?