ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಇಸ್ರೋ ಆಗಸ್ಟ್ 12ರಂದು ಜಿಸಾಟ್ -1 ಸೆಟಲೈಟ್ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ವಾಸ್ತವದಲ್ಲಿ ಈ ಉಪಗ್ರಹ ಮಾರ್ಚ್ ತಿಂಗಳ ಹಿಂದೆಯೇ ಉಡಾವಣೆಯಾಗಬೇಕಿತ್ತು. ಆದರೆ, ತಾಂತ್ರಿಕ ಮತ್ತು ಕೋವಿಡ್ ಸಾಂಕ್ರಾಮಿಕ ಕಾರಣಗಳಿಂದಾಗಿ ಮುಂದಕ್ಕೆ ಹೋಗಿತ್ತು.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ಇಸ್ರೋ ಮತ್ತೊಂದು ಸಾಹಸಕ್ಕೆಸಿದ್ಧವಾಗಿದೆ. ಕೋವಿಡ್ ಕಾರಣದಿಂದಾಗಿ ಇಸ್ರೋ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಸಂಸ್ಥೆಯು ತನ್ನ ಯೋಜನೆಗಳ ಜಾರಿಗೆ ಮುಂದಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆಯು ಶ್ರೀಹರಿಕೋಟಾದಿಂದ ಜಿಎಸ್ಎಲ್‌ವಿ-ಎಫ್ 10 ರಾಕೆಟ್ ಮೂಲಕ ಜಿಯೋ ಇಮೇಜಿಂಗ್ ಸೆಟಲೈಟ್ ಜಿಸಾಟ್ -1 ಉಪಗ್ರಹವನ್ನು ಕಕ್ಷೆಗೆ ಕಳುಹಿಸಲು ಯೋಜನೆ ರೂಪಿಸಿದೆ. ಆಗಸ್ಟ್ 12ರಂದು ಉಪಗ್ರಹ ಉಡಾವಣೆ ನಡೆಯಲಿದೆ.
undefined
ಬಾಹ್ಯಾಕಾಶಕ್ಕೆ ಹೋಗ್ತಾರಾ ಜಗತ್ತಿನ ಮೊದಲ ವಿಶೇಷ ಚೇತನ ಗಗನಯಾತ್ರಿ?
ಕಳೆದ ವರ್ಷದಿಂದ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಉಲ್ಬಣಗೊಂಡಿದೆ. ಹಾಗಾಗಿ, ಇಸ್ರೋ ತನ್ನ ಉಪಗ್ರಹಗಳನ್ನು ಕಕ್ಷೆಗೆ ಹಾರಿ ಬಿಡುವ ಚಟುವಟಿಕೆಗಳಿಗೆ ತಡೆಯೊಡ್ಡಿಕೊಂಡಿತ್ತು. ಇದೀಗ ಮತ್ತೆ ತನ್ನ ಎಂದಿನ ಕಾರ್ಯಕ್ಕೆ ಮರಳುತ್ತಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಿಸಾಟ್ -1 ಉಪಗ್ರಹ ಉಡ್ಡಯನವು ಇಸ್ರೋ ಕೈಗೊಳ್ಳುತ್ತಿರುವ ಎರಡನೇ ಚಟುವಟಿಕೆಯಾಗಿದೆ. ಇದಕ್ಕೊಮೊದಲು ಇಸ್ರೋ, ಫೆಬ್ರವರಿ 12ರಂದು ಬ್ರೆಜಿಲ್‌ನ ಪರಿವೀಕ್ಷಣಾ ಸೆಟಲೈಟ್ ಅಮೇಜಾನಿಯಾ-1 ಮತ್ತು ವಿದ್ಯಾರ್ಥಿಗಳು ರೂಪಿಸಿದ ಕೆಲವು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೊಂದ ಅಂಥದ್ದೇ ಕಾರ್ಯಕ್ಕೆ ಮುಂದಾಗಿದೆ ಇಸ್ರೋ.
ವಾಸ್ತವದಲ್ಲಿ 2,268 ಕೆಜಿ ತೂಕದ ಜಿಸಾಟ್ -1 ಉಪಗ್ರಹವನ್ನು ಕಳೆದ ವರ್ಷ ಮಾರ್ಚ್ 5ರಂದೇ ಕಕ್ಷೆಗೆ ಕಳುಹಿಸಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಉಪಗ್ರಹ ಉಡಾವಣೆಯನ್ನು ಮುಂದಕ್ಕೆ ಹಾಕಲಾಗಿತ್ತು. ಇದೀಗ ಅದಕ್ಕೆ ದಿನಾಂಕ ನಿಗದಿ ಮಾಡಲಾಗಿದ್ದು, ಆಗಸ್ಟ್ 12ರಂದು ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಜಿಸಾಟ್ -1 ಸೆಟಲೈಟ್ ಅನ್ನು ಕಕ್ಷೆಗೆ ಕಳುಹಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಮಾರ್ಚ್ 5ಕ್ಕೆ ನಿಗದಿಯಾಗಿದ್ದ ಜಿಸಾಟ್ -1 ಉಪಗ್ರಹವನ್ನು ಮತ್ತೆ ಮಾರ್ಚ್ 28ಕ್ಕೆ ನಿಗದಿ ಮಾಡಲಾಗಿತ್ತಾದರೂ ಆಗಲೂ ಉಡಾವಣೆ ಸಾಧ್ಯವಾಗಿರಲಿಲ್ಲ. ಕೆಲವು ಚಿಕ್ಕಪುಟ್ಟ ಕಾರಣಗಳಿಂದಾಗಿ ನಿಗದಿತ ಟೈಮ್‌ಗೆ ಉಡಾವಣೆ ಸಾಧ್ಯವಾಗಲಿಲ್ಲ. ಹಾಗಾಗಿ, ಈ ಉಪಗ್ರಹ ಉಡಾವಣೆಯು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇತ್ತು. ಆದರೆ, ಹೆಚ್ಚಿದ ಕೊರೊನಾ ಸಾಂಕ್ರಾಮಿಕವನ್ನು ತಡೆಯಲು ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಹೇರಲಾಯಿತು. ಇದರಿಂದಾಗಿ ಮತ್ತೆ ಈ ಉಪಗ್ರಹ ಉಡಾವಣೆಯನ್ನು ಮುಂದಕ್ಕೆ ಹಾಕಲಾಯಿತು.
ಬಾಹ್ಯಾಕಾಶದಲ್ಲಿ ಇಂದು ಭಾರತದ ಶಿರಿಶಾ ಇತಿಹಾಸ : ಖಾಸಗಿ ನೌಕೆಯಲ್ಲಿ 90 ನಿಮಿಷ ಸಾಹಸ
ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟು, ಆಗಸ್ಟ್ 12 ರಂದು ಬೆಳಿಗ್ಗೆ 05.43 ಕ್ಕೆ ಜಿಎಸ್ಎಲ್‌ವಿ-ಎಫ್ 10 ಉಡಾವಣೆಯನ್ನು ನಾವು ತಾತ್ಕಾಲಿಕವಾಗಿ ಯೋಜಿಸಿದ್ದೇವೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೋ ಪ್ರಕಾರ, ಜಿಸಾಟ್ -1 ಭಾರತೀಯ ಉಪಖಂಡದ ರಿಯಲ್ ಟೈಮ್ ವೀಕ್ಷಣೆಗೆ, ಮೋಡ ಮುಕ್ತ ಪರಿಸ್ಥಿತಿಗಳಲ್ಲಿ ಸಾಧ್ಯವಾಗಲಿದೆ.
ಜಿಸಾಟ್ -1 ಉಪಗ್ರಹವನ್ನು ಜಿಎಸ್ಎಲ್‌ವಿ- ಎಫ್ 10 ಮೂಲಕ ಜಿಯೋಸಿಂಕ್ರೋನಸ್ ಕಕ್ಷೆಯಲ್ಲಿ ಇರಿಸಲಾಗುವುದು. ಬಳಿಕ ಅದನ್ನು ಭೂಮಿಯ ಸಮಭಾಜಕದಿಂದ ಸುಮಾರು 36,000 ಕಿ.ಮೀ ದೂರದಲ್ಲಿರುವ ಅಂತಿಮ ಜಿಯೋಸ್ಟೇಷನರಿ ಕಕ್ಷೆಗೆ ಸೇರಿಸಲಾಗುತ್ತದೆ.
ರಿಯಲ್ ಟೈಮ್‌ನಲ್ಲಿ ದೇಶದ ಗಡಿಗಳ ನೈಜಸ್ಥಿತಿಯ ಭಾವಚಿತ್ರಗಳನ್ನು ಭೂ ವೀಕ್ಷಣಾ ಸೆಟಲೈಟ್ ಕಳುಹಿಸುತ್ತದೆ. ಮತ್ತು ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ತ್ವರಿತ ಮಾನಿಟರಿಂಗ್ ಕೂಡ ಇದರಿಂದ ಸಾಧ್ಯವಾಗಲಿದೆ. ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವನ್ನು ಪ್ರತಿಷ್ಠಾಪಿಸುವುದರಿಂದ ಪ್ರಮುಖ ಅನುಕೂಲಗಳಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ: GPS, ನೆಟ್‌ವರ್ಕ್ ಸಮಸ್ಯೆ
ಭಾರತದ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋ, ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಹಲವು ವಿಕ್ರಮಗಳನ್ನು ಸಾಧಿಸಿದೆ. ಚಂದ್ರಯಾನ ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜಗತ್ತಿನ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಇದೀಗ ಮತ್ತೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಸಿದ್ಧವಾಗಿದೆ ಇಸ್ರೋ.