Quadrantid Meteors on Jan 4: ಇಂದು ರಾತ್ರಿ ಆಕಾಶವನ್ನು ಬೆಳಗಿಸಲಿರುವ ಉಲ್ಕೆಗಳು: ವೀಕ್ಷಿಸುವುದು ಹೇಗೆ ?

By Suvarna NewsFirst Published Jan 3, 2022, 11:39 PM IST
Highlights

ರಾತ್ರಿ ಆಕಾಶವನ್ನು ಬೆಳಗಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಕ್ವಾಡ್ರಾಂಟಿಡ್ಸ್ ಉಲ್ಕೆಗಳು (Quadrantid Meteors) ಸಿದ್ಧವಾಗಿವೆ. ವಾರ್ಷಿಕ ಉಲ್ಕಾಪಾತವು ಮಂಗಳವಾರ ಬೆಳಿಗ್ಗೆ (ಜನವರಿ 4, 2 AM ) 2:00 AM ಗಂಟೆಯ ನಂತರ ಉತ್ತುಂಗಕ್ಕೇರಲಿದ್ದೂ ಗಂಟೆಗೆ ಸರಿಸುಮಾರು 80 ಉಲ್ಕೆಗಳನ್ನು ನೋಡಬಹುದು ಎಂದು ನಾಸಾ (NASA) ತಿಳಿಸಿದೆ

Tech Desk: ರಾತ್ರಿ ಆಕಾಶವನ್ನು ಬೆಳಗಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಕ್ವಾಡ್ರಾಂಟಿಡ್ಸ್ ಉಲ್ಕೆಗಳು (Quadrantid Meteors) ಸಿದ್ಧವಾಗಿವೆ. ವಾರ್ಷಿಕ ಉಲ್ಕಾಪಾತವು ಮಂಗಳವಾರ ಬೆಳಿಗ್ಗೆ (ಜನವರಿ 4, 2 AM ) 2:00 AM ಗಂಟೆಯ ನಂತರ ಉತ್ತುಂಗಕ್ಕೇರಲಿದ್ದೂ ಗಂಟೆಗೆ ಸರಿಸುಮಾರು 80 ಉಲ್ಕೆಗಳನ್ನು ನೋಡಬಹುದು ಎಂದು ನಾಸಾ (NASA) ತಿಳಿಸಿದೆ. ಈ ಉಲ್ಕೆಯ ವೇಗವು ಸೆಕೆಂಡಿಗೆ 41 ಕಿಲೋಮೀಟರ್ ಆಗಿದೆ. ಪ್ರಕಾಶಮಾನವಾದ ಉಲ್ಕಾಪಾತಗಳಲ್ಲಿ ಒಂದಾದ ಕ್ವಾಡ್ರಾಂಟಿಡ್ಸ್ ಪ್ರತಿ ವರ್ಷ ಡಿಸೆಂಬರ್ 28 ರಿಂದ ಜನವರಿ 12 ರವರೆಗೆ ಸಕ್ರಿಯವಾಗಿರುತ್ತದೆ.

ಹೆಚ್ಚಿನ ಉಲ್ಕಾಪಾತಗಳು ಧೂಮಕೇತುಗಳಿಂದ (comets ಹುಟ್ಟಿಕೊಂಡಿವೆ, ಆದರೆ ಕ್ವಾಡ್ರಾಂಟಿಡ್ಸ್ 2003 EH1 ಎಂಬ ಹೆಸರಿನ ಕ್ಷುದ್ರಗ್ರಹದಿಂದ ಹುಟ್ಟಿಕೊಂಡಿವೆ. ಕ್ಷುದ್ರಗ್ರಹವು ನಮ್ಮ ಸೂರ್ಯನನ್ನು ಸುತ್ತಲು 5.52 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಈ ಕ್ಷುದ್ರಗ್ರಹವು ಬಿಟ್ಟುಹೋದ ಕಣಗಳ ಮೂಲಕ ಭೂಮಿಯು ಹಾದುಹೋದಾಗ, ನಾವು ಈ ರೀತಿಯ ಶವರ್ ಅನ್ನು ನೋಡುತ್ತೇವೆ. 

ಇದನ್ನೂ ಓದಿ: Asteroid 2013 YD48:‌ ಜ. 11 ರಂದು ಭೂಮಿಯ ಹತ್ತಿರಕ್ಕೆ ಬರಲಿದೆ ಬೃಹತ್ ಗಾತ್ರದ ಕ್ಷುದ್ರಗ್ರಹ!

ಈ ಶಿಲಾಖಂಡರಾಶಿಗಳ ಹಾದಿಗಳು ನಮ್ಮ ವಾತಾವರಣದೊಂದಿಗೆ ಡಿಕ್ಕಿ ಹೊಡೆದಾಗ ವಿಭಜನೆಯಾಗುತ್ತವೆ ಮತ್ತು ನಾವು ಆಕಾಶದಲ್ಲಿ ನೋಡುವ ಉರಿಯುತ್ತಿರುವ ಗೆರೆಗಳನ್ನು ರಚಿಸುತ್ತವೆ.ಹೆಚ್ಚಿನ ಉಲ್ಕೆಗಳು ಎರಡು-ದಿನದ ಅವಧಿಯನ್ನು ಹೊಂದಿದ್ದರೂ, ಕ್ವಾಡ್ರಾಂಟಿಡ್ಸ್  ಮತ್ತೊಂದೆಡೆ ತುಂಬಾ ಚಿಕ್ಕದಾಗಿದ್ದು ಕೇವಲ ಕೆಲವೇ ಗಂಟೆಗಳ ಕಾಲ ಗೋಚರಿಸುತ್ತದೆ. 

 

The Quadrantids, which our own Dr. Peter Jenniskens determined are caused by near-Earth asteroid (196256) 2003 EH1, peak at 20:40 GMT January 3! Tonight is a good night to head outside and watch for meteors, if you have skies that allow it. https://t.co/HDPZwDqccC

— The SETI Institute (@SETIInstitute)

 

ಶವರ್ ನೋಡುವುದು ಹೇಗೆ?

ನಿಮ್ಮ ನಗರಗಳ ಬೆಳಕಿನ ಮಾಲಿನ್ಯದಿಂದ ದೂರವಿರಿ ಮತ್ತು ಸುರಕ್ಷಿತ ಖಾಲಿ ಜಾಗ ಅಥವಾ ಮನೆಯ ಟೆರೇಸ್ ಅನ್ನು ಹುಡುಕಿ. ಕತ್ತಲೆಗೆ ಹೊಂದಿಕೊಳ್ಳಲು ನಿಮ್ಮ ಕಣ್ಣುಗಳಿಗೆ ಸುಮಾರು 20 ರಿಂದ 30 ನಿಮಿಷಗಳು ಬೇಕಾಗುತ್ತವೆ, ಆದ್ದರಿಂದ ಬೇಗ ಬನ್ನಿ. ಈ ಚಳಿಗಾಲದ ರಾತ್ರಿಯಲ್ಲಿ ನಿಮ್ಮನ್ನು ಆರಾಮದಾಯಕವಾಗಿಸಲು ನೀವು ಕಂಬಳಿಯನ್ನು ತರುವುದನ್ನು ಮರೆಯಬೇಡಿ. ನಿಮಗೆ ಯಾವುದೇ ವಿಶೇಷ ಉಪಕರಣಗಳು ಅಗತ್ಯವಿಲ್ಲ. ಆಕಾಶದ ಈಶಾನ್ಯ ಭಾಗದತ್ತ ಮುಖ ಮಾಡಿ  ಬೆಂಕಿಯ ಚೆಂಡುಗಳನ್ನು ನೋಡುಬಹುದು.

 

Finder chart for the Quadrantids if anyone fancies spotting some meteors tonight pic.twitter.com/HMxPQCEL7b

— Prof. David Scanlan, FRAS (@David_Scanlan)

 

ಇದನ್ನೂ ಓದಿ: Plastic Baby: ಬಿಹಾರದಲ್ಲಿ ವಿಶೇಷ ಮಗು ಜನಿಸಿದ್ದಕ್ಕೆ ಕಾರಣ ಹೇಳಿದ ವೈದ್ಯರು!

ಇನ್ನು ಗುರುವಾರ ಬೆಳಿಗ್ಗೆ ಆನಲೈನ್‌ನಲ್ಲಿ ಕೂಡ ನೀವು ಇದನ್ನು ನೋಡಬಹುದು. ವರ್ಚುವಲ್ ಟೆಲಿಸ್ಕೋಪ್ ಪ್ರಾಜೆಕ್ಟ್ 2.0 ನಾಳೆ 5:15 am IST ಕ್ಕೆ ಲೈವ್ ಸ್ಟ್ರೀಮ್ ಅನ್ನು ರನ್ ಮಾಡುತ್ತದೆ. ಅವರು ರೋಮ್ನಿಂದ ಈ ಶವರ್ ಅನ್ನು ಸೆರೆಹಿಡಿಯುತ್ತಾರೆ.

 

click me!