'ಗುಡ್ಡದ ಭೂತ' ಖ್ಯಾತಿಯ ಕನ್ನಡದ ಹಿರಿಯ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ

By Girish GoudarFirst Published Jul 16, 2024, 4:53 PM IST
Highlights

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ನಿರ್ಮಾಪಕರಾದ ಸದಾನಂದ ಸುವರ್ಣ ಇಂದು ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೂಲತಃ ಮೂಲ್ಕಿಯವರಾದ ಸದಾನಂದ ಸುವರ್ಣ ಅವರು ನಿರ್ಮಿಸಿದ ಮೊದಲ ಸಿನಿಮಾ ಘಟಶ್ರಾದ್ಧ. ಇದು ಗಿರೀಶ್ ಕಾಸರವಳ್ಳಿಯವರ ಮೊದಲ ನಿರ್ದೇಶನದ ಸಿನಿಮಾ‌ ಕೂಡ. ಗಿರೀಶ್ ಕಾಸರವಳ್ಳಿಯವರು ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಊರಲು ನೆರವಾದವರು ಸದಾನಂದ ಸುವರ್ಣ. 

ಮಂಗಳೂರು(ಜು.16):  'ಘಟಶ್ರಾದ್ಧ' ಸಿನಿಮಾ ಮೂಲಕ ನಿರ್ಮಾಪಕರಾದ ಸದಾನಂದ ಸುವರ್ಣ(93) ಅವರು, ಇಂದು(ಮಂಗಳವಾರ) ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಸದಾನಂದ ಸುವರ್ಣ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. 

ಮೂಲತಃ ಮೂಲ್ಕಿಯವರಾದ ಸದಾನಂದ ಸುವರ್ಣ ಅವರು ನಿರ್ಮಿಸಿದ ಮೊದಲ ಸಿನಿಮಾ ಘಟಶ್ರಾದ್ಧ. ಇದು ಗಿರೀಶ್ ಕಾಸರವಳ್ಳಿಯವರ ಮೊದಲ ನಿರ್ದೇಶನದ ಸಿನಿಮಾ‌ ಕೂಡ. ಗಿರೀಶ್ ಕಾಸರವಳ್ಳಿಯವರು ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಊರಲು ನೆರವಾದವರು ಸುವರ್ಣ ಅವರು. ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಕುಬಿ ಮತ್ತು ಇಯಾಲ, ತಬರನ ಕಥೆ ಸಿನಿಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು.

Latest Videos

ಬಾರದ ಲೋಕಕ್ಕೆ ಪಯಣ ಬೆಳೆಸಿದ ಅಪರ್ಣಾ..ಬಾಳ ನಿರೂಪಣೆ ಮುಗಿಸಿ ಚಿರ ನಿದ್ರೆಗೆ ಜಾರಿದ ನಟಿ

ದೂರದರ್ಶನಕ್ಕೆ ಗುಡ್ಡದ ಭೂತ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಪ್ರಕಾಶ್ ರೈ ಅವರಿಗೆ ಬ್ರೇಕ್ ಕೊಟ್ಟಿತ್ತು. ದೂರದರ್ಶನಕ್ಕೆ‌ ಅವರ ನಿರ್ದೇಶನದ, ಶಿವರಾಮ ಕಾರಂತ ಅವರ ಸಂದರ್ಶನದ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಹತ್ತು ಕಂತುಗಳಲ್ಲಿ ಪ್ರಸಾರವಾಗಿತ್ತು.

ಸದಾನಂದ ಸುವರ್ಣ ನಿರ್ದೇಶನದ 'ಕೋರ್ಟ್‌ ಮಾರ್ಷಲ್' ನಾಟಕ ಅದ್ಭುತವಾಗಿತ್ತು. ಮುಂಬೈನಲ್ಲಿ ರಾತ್ರಿ  ಶಾಲೆಯಲ್ಲಿ ಕಲಿತು, ಖಾಸಗಿ ಕಂಪನಿಯಲ್ಲಿದ್ದು, ಹತ್ತಾರು ವರ್ಷಗಳ ಹಿಂದೆ ಮಂಗಳೂರು ವಾಸಿಯಾಗಿದ್ದರು.

click me!