ತೆರೆ ಕಾಣಿಸುತ್ತಿದ್ದ ವಜ್ರಮುನಿ ಬೇರೆ ಮನೆಯಲ್ಲಿದ್ದ ವಜ್ರಮುನಿ ಬೇರೆ. ಪತಿ ಬಗ್ಗೆ ಲಕ್ಷ್ಮಿ ಮನದಾಳದ ಮಾತುಗಳು...
80-90ರ ದಶಕದಲ್ಲಿ ಕನ್ನಡ ಚಿತ್ರರಂಗದ ರೂಲಿಂಗ್ ವಿಲನ್ ಅಂದ್ರೆ ವಜ್ರಮುನಿ. ಯಾವ ಸಿನಿಮಾದಲ್ಲಿ ನೋಡಿದ್ದರೂ ವಜ್ರಮುನಿ ಇರುತ್ತಿದ್ದರು. ಕೆಲವೊಮ್ಮೆ ಮೂರ್ನಾಲ್ಕು ಚಿತ್ರಮಂದಿರಗಳಲ್ಲಿ ಅವರ ಬೇರೆ ಬೇರೆ ಸಿನಿಮಾಗಳು ಓಡುತ್ತಿತ್ತು. ತೆರೆ ಮೇಲೆ ಕಾಣಿಸುತ್ತಿದ್ದ ವಜ್ರಮುನಿ ರಿಯಲ್ ಲೈಫ್‌ನಲ್ಲೂ ಹಾಗೆ ಇರಬೇಕು ಅಂದುಕೊಂಡು ಅನೇಕರು ಮಾತನಾಡಿಸುವುದಕ್ಕೆ ಹೆದರಿಕೊಳ್ಳುತ್ತಿದ್ದರಂತೆ. ಆದರೆ ಆಫ್‌ಸ್ಕ್ರೀನ್‌ನಲ್ಲಿ ವಜ್ರಮುನಿ ನಿಜಕ್ಕೂ ತುಂಬಾನೇ ಮೃದು ಸ್ವಭಾವದವರಂತೆ. ವಜ್ರಮುನಿ ಅವರ ಬಗ್ಗೆ ಕೆಲವೊಂದು ಸಂಗತಿಗಳನ್ನು ಪತ್ನಿ ಲಕ್ಷ್ಮಿ ಹಂಚಿಕೊಂಡಿದ್ದಾರೆ.
'ವಜ್ರಮುನಿಯವರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು ಅದೇ ನಮಗೆ ಹೆಮ್ಮೆಯ ವಿಚಾರ. 2006ರಲ್ಲಿ ಅವರು ಅಗಲಿದ್ದು, ನಮ್ಮೊಟ್ಟಿಗೆ ಜೀವನ ಮಾಡುತ್ತಿದ್ದಾರೆ ಅನ್ನೋ ಭಾವನೆಯಲ್ಲಿ ದಿನ ಸಾಗಿಸುತ್ತಿದ್ದೀವಿ. ತೋಟದ ಮನೆಗೆ ಬಂದ್ರೆ ರೂಮಿನಲ್ಲಿ ಕುಳಿತುಕೊಂಡು ಟಿವಿ ನೋಡುವುದು ಪುಸ್ತಕ ಓದುವುದಕ್ಕೆ ಹೆಚ್ಚು ಖುಷಿ ಪಡುತ್ತಿದ್ದರು. ಅವರ ಜೊತೆ ಅನೇಕ ಕ್ಷಣಗಳು ಮರೆಯಲು ಆಗಲ್ಲ. ಆಗ ಮೊಬೈಲ್ ಇರುತ್ತಿರಲಿಲ್ಲ ಶೂಟಿಂಗ್ ಸ್ಪಾಟ್‌ಗೆ ಹೋಗಿ ಕರೆ ಮಾಡುತ್ತಿದ್ದರು. ಅವರು ಮನೆಗೆ ಬರ್ತಿದ್ದಾರೆ ಅಂದ್ರೆ ತುಂಬಾ ಭಯ ಆಗುತ್ತಿತ್ತು. ತೆರೆ ಮೇಲೆ ಹೇಗೆ ಕಾಣಿಸುತ್ತಾರೆ ಅದರ ವಿರುದ್ಧವಾಗಿ ಮನೆಯಲ್ಲಿ ಇರುತ್ತಿದ್ದರು ತುಂಬಾ ಮೃದು ಸ್ವಭಾವದ ವ್ಯಕ್ತಿ ಆಗಿದ್ದರು' ಎಂದು ಲಕ್ಷ್ಮಿ ವಜ್ರಮುನಿ ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Bengaluru: ಜಯನಗರದ ರಸ್ತೆಗೆ ಖಳನಾಯಕ ಖ್ಯಾತಿಯ ವಜ್ರಮುನಿ ಹೆಸರು ನಾಮಕರಣ: ಇಂದು ಉದ್ಘಾಟನೆ
'ಎಲ್ಲರೂ ನನ್ನನ್ನು ಪ್ರಶ್ನೆ ಮಾಡುತ್ತಿದ್ದರು ಅವರ ಮಾತು ನಡೆ ನುಡಿ ಎಲ್ಲಾ ಜೋರಾಗಿರುತ್ತದೆ ನೀವು ಅವರ ಜೊತೆ ಹೇಗಿರುತ್ತೀರಾ ಎಂದು. ಆಗ ಮನೆ ಬಂದು ಅವರನ್ನು ಭೇಟಿ ಮಾಡಿ ಗೊತ್ತಾಗುತ್ತದೆ ಎಂದು ಹೇಳುತ್ತಿದ್ದೆ. ಮನೆಗೆ ಬಂದು ಒಮ್ಮೆ ಅವರನ್ನು ಭೇಟಿ ಮಾಡಿದ ಮೇಲೆ ವ್ಯಕ್ತಿ ಗುಣ ಒಳ್ಳೆಯದು ಎನ್ನುತ್ತಿದ್ದರು. ವಜ್ರಮುನಿ ಅವರಿಗೆ ಕೋಪ ಬರುತ್ತೆ ಯಾರಾದರೂ ಏನಾದರೂ ಕೆಲಸ ಮಾಡಿಲ್ಲ ಅಂದ್ರೆ ನಿಂತ ಜಾಗದಲ್ಲೇ ಕೆಲಸ ಮಾಡಿಸಿ ಬಿಡುತ್ತಿದ್ದರು. ವಜ್ರಮುನಿ ಅವರ ಎಲ್ಲಾ ಸಿನಿಮಾಗಳು ಇಷ್ಟ ಆಗುತ್ತಿತ್ತು ಆಗದೇ ಇರುವ ಸಿನಿಮಾ ಅಂತ ಯಾವುದು ಇಲ್ಲ. ಸಿನಿಮಾ ನೋಡಿ ಮನೆಗೆ ಬಂದ್ಮೇಲೆ ಒಂದೊಂದು ಸಲ ರೇಪ್ ಸೀನ್ ನೋಡಿ ಯಾಕೆ ಆ ರೀತಿ ಮಾಡಿದ್ದೀರಿ ಎಂದು ಕೇಳುತ್ತಿದ್ದೆ. ಅದೆಲ್ಲಾ ಆಕ್ಟಿಂಗ್ ಎನ್ನುತ್ತಿದ್ದರು. ಅರಂಭದಲ್ಲಿ ನಮಗೆ ಬೇಸರ ಆಗುತ್ತಿತ್ತು ಅದನ್ನು ನೋಡಿ ನೋಡಿ ನಾವು ಕೆಲಸ ಅರ್ಥ ಮಾಡಿಕೊಂಡೆವು. ನಾವು ಸಿನಿಮಾ ಶೂಟಿಂಗ್ ಮಾಡಲು ಆರಂಭಿಸಿದಾಗ ಇದೆಲ್ಲಾ ಆಕ್ಟಿಂಗ್ ಅನಿಸುತ್ತಿತ್ತು. ವಜ್ರಮುನಿ ಅವರ ಜೀವನವನ್ನು ತುಂಬಾ ಎಂಜಾಯ್ ಮಾಡುತ್ತಿದ್ದರು. ಊಟದ ವಿಚಾರದಲ್ಲಿ ಸಖತ್ ಎಂಜಾಯ್ ಮಾಡುತ್ತಾರೆ. ಮನೆಗೆ ಜನರು ಬಂದ್ರೆ ಅವರಿಗೆ ಊಟ ಹಾಕಿ ನಿದ್ರೆ ಮಾಡಿ ಕಳುಹಿಸುತ್ತಾರೆ' ಎಂದು ಲಕ್ಷ್ಮಿ ಹೇಳಿದ್ದಾರೆ.
Mr & Mrs ರಾಮಾಚಾರಿ ಚಿತ್ರದ ಕಸ್ತೂರಿ- ಸುವರ್ಣ ನೆನಪಿದ್ಯಾ? ಈಗ ಹೇಗಿದ್ದಾರೆ ನೋಡಿ..
'ಮೊಮ್ಮಕ್ಕಳು ಸಿನಿಮಾ ರಂಗಕ್ಕೆ ಯಾಕೆ ಎಂಟ್ರಿ ಕೊಟ್ಟಿಲ್ಲ ಎಂದು ಅನೇಕರು ಕೇಳುತ್ತಾರೆ. ಅರಂಭದಿಂದಲೂ ವಜ್ರಮುನಿಯವರು ಮಕ್ಕಳು ಮೊಮ್ಮಕ್ಕಳನ್ನು ಶೂಟಿಂಗ್ ಜಾಗಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ನನಗೆ ಸಿನಿಮಾ ಫೀಲ್ಡ್ ಸಾಕು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಅನ್ನೋ ಆಸೆ ಇತ್ತು. ಆದರೆ ಮಕ್ಕಳು ಸಿನಿಮಾ ಮಾಡಬೇಕು ಅನ್ನೋ ಆಸೆ ನನಗಿದೆ. ವಜ್ರಮುನಿಯವರು ನಮ್ಮನ್ನು ಬಿಟ್ಟು ಹೋದ ಮೇಲೆ ಜೀವನ ನಡೆಸುವುದು ಕಷ್ಟ ಆಗುತ್ತಿರಲಿಲ್ಲ ಏಕೆಂದರೆ ಮದುವೆಯಾಗಿ ಬಂದಾಗಿನಿಂದ ನಮ್ಮ ಕೆಲಸ ನಾವು ಮಾಡಿಕೊಳ್ಳುವುದನ್ನು ಹೇಳಿಕೊಟ್ಟಿದ್ದರು. ಅವರು ಮನೆಯಲ್ಲಿ ಇದ್ದಾಗ ಅವರು ಹೇಳಿದ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು' ಎಂದಿದ್ದಾರೆ ಲಕ್ಷ್ಮಿ.