ದರ್ಶನ್ ಸೂಪರ್ ಸ್ಟಾರ್, ಉಮಾಪತಿ ದೊಡ್ಡ ನಿರ್ಮಾಪಕರು; ಬುದ್ಧಿ ಹೇಳೋದಕ್ಕೆ ನಾನ್ಯಾರು ಅಂದ್ಬಿಟ್ರಾ ಪ್ರಥಮ್!

By Shriram Bhat  |  First Published Feb 25, 2024, 2:35 PM IST

ಕಳೆದ ಹಲವು ದಿನಗಳಿಂದ ಕಾಟೇರ ಸಿನಿಮಾದ ಶೀರ್ಷಿಕೆ ವಿಚಾರವಾಗಿ ನಟ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕಾಟೇರ ಶೀರ್ಷಿಕೆ ಇಟ್ಟಿದ್ದೇ ನಾನು ಎಂದು ದರ್ಶನ್‌ ಹೇಳಿದರೆ, ಆ ಟೈಟಲ್‌ ಕೊಟ್ಟಿದ್ದೇ ನಾನು ಎನ್ನುತ್ತಿದ್ದಾರೆ ಉಮಾಪತಿ ಶ್ರೀನಿವಾಸ್.


ಸ್ಯಾಂಡಲ್‌ವುಡ್ ನಟ ದರ್ಶನ್‌ (Darshan) ಮತ್ತು ಉಮಾಪತಿ ಶ್ರೀನಿವಾಸ್‌ ಗೌಡ (Umapathy Srinivas Gowda) ಅವರಿಬ್ಬರ ಕಿತ್ತಾಟ ಸೋಷಿಯಲ್‌ ಮೀಡಿಯಾದಲ್ಲೂ ಸದ್ಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಅವರಿಬ್ಬರ ಪರ ಮತ್ತು ವಿರೋಧವಾಗಿ ಹಲವರು ತಮ್ಮ ಅಭಿಪ್ರಾಯಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಈ ಬಗ್ಗೆ ನಟ, ಒಳ್ಳೆ ಹುಡುಗ ಖ್ಯಾತಿಯ ಪ್ರಥಮ್ ಮಾತನಾಡಿದ್ದಾರೆ. 'ಈ ವಿಚಾರದಲ್ಲಿ ವಿವಾದ ಮಾಡಿಕೊಳ್ಳುವುದಕ್ಕಿಂತ ಅವರೇ ಕೂತು ಬಗೆಹರಿಸಿಕೊಳ್ಳಬೇಕು' ಎಂದಿದ್ದಾರೆ.

ದರ್ಶನ್ ನಟನೆಯ 'ಕಾಟೇರ' ಸಿನಿಮಾದ 50ನೇ ದಿನದ ಸಂಭ್ರಮದಲ್ಲಿ (Kaatera Movie Title Controversy) ಮಾತನಾಡುತ್ತಿದ್ದ ದರ್ಶನ್‌, 'ಉಮಾಪತಿ ಶ್ರೀನಿವಾಸ್‌ ಹೆಸರೆತ್ತದೇ ಪರೋಕ್ಷವಾಗಿ 'ಏ ತಗಡೇ.., ಗುಮ್ಮಿಸ್ಕೋತಿಯಾ.. ಎಂದಿದ್ದರು. ಬಳಿಕ ನಟ ದರ್ಶನ್‌ ಮಾತು ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್ ಸುದ್ದಿ ಮಾಡಿತ್ತು. ಈ ಬಗ್ಗೆ 'ನಾನೇನೂ ಕೈ ಕಟ್ಟಿ ಕೂತ್ತಿಲ್ಲ, ನನಗೂ ತಾಕತ್ತಿದೆ, ಬರಲಿ ನೋಡೋಣ' ಎಂದು ದರ್ಶನ್ ಮಾತಿಗೆ ಟಾಂಗ್‌ ಕೊಟ್ಟಿದ್ದರು ನಿರ್ಮಾಪಕರಾದ ಉಮಾಪತಿ. ಅವರಿಬ್ಬರ ಜಗಳದ ಬಗ್ಗೆ ಇತ್ತೀಚೆಗೆ ಮಾತನಾಡಿರುವ ಪ್ರಥಮ್‌, 'ಅವರಿಬ್ಬರೂ ದೊಡ್ಡವರು, ಕುಳಿತು ಬಗೆಹರಿಸಿಕೊಳ್ಳಬೇಕು' ಎಂದಿದ್ದಾರೆ.

Tap to resize

Latest Videos

ನಟ ರಾಜ್‌ಕುಮಾರ್ 'ಡಾ ರಾಜ್‌ಕುಮಾರ್' ಆದಾಗ ಅವ್ರು ಹೇಳಿದ್ದೇನು; ಹೀಗಂದಿದ್ರಾ ಅಣ್ಣವ್ರು!

ಕಳೆದ ಹಲವು ದಿನಗಳಿಂದ ಕಾಟೇರ ಸಿನಿಮಾದ ಶೀರ್ಷಿಕೆ ವಿಚಾರವಾಗಿ ನಟ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕಾಟೇರ ಶೀರ್ಷಿಕೆ ಇಟ್ಟಿದ್ದೇ ನಾನು ಎಂದು ದರ್ಶನ್‌ ಹೇಳಿದರೆ, ಆ ಟೈಟಲ್‌ ಕೊಟ್ಟಿದ್ದೇ ನಾನು ಎನ್ನುತ್ತಿದ್ದಾರೆ ಉಮಾಪತಿ ಶ್ರೀನಿವಾಸ್.‌ ಈ ಇಬ್ಬರ ಕಿತ್ತಾಟ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಹಲವರು ಈ ಬಗ್ಗೆ ಮಾತನಾಡಿಕೊಳ್ಳುವಂತಾಗಿದೆ. 

ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!

ಈ ಬಗ್ಗೆ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ಪ್ರಥಮ್ 'ಸಿನಿಮಾ ಉದ್ಯಮದಲ್ಲಿ ನಿರ್ಮಾಪಕರಿಗೆ ಒಳ್ಳೆಯದು ಆಗಬೇಕು. ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್‌ ಕೂಡ ಅಪ್ರತಿಮ ನಾಯಕರು. ನಾನು ಒಂದು ಮಾತು ಹೇಳ್ತೀನಿ, ಚಿತ್ರರಂಗದಲ್ಲಿ ಅಣ್ಣಾವ್ಉ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಹಂಬಲ್‌ನೆಸ್‌ ಏನೂ ಅಂತ ನಮಗೆ ಹೇಳಿಕೊಟ್ಟವರು ಅಣ್ಣಾವ್ರು. ಇನ್ನು, ನಟ ದರ್ಶನ್‌ ಸಹ ತುಂಬ ಒಳ್ಳೆಯ ಕಲಾವಿದರು, ದೊಡ್ಡ ಸ್ಟಾರ್.‌ ಏನೋ ಆಗಬಾರದ್ದು ಆಗಿಹೋಗಿದೆ. ಬುದ್ಧಿವಂತರಾದ್ರೆ ನಾವು ಏನು ಮಾಡ್ಬೇಕು ಅಂದ್ರೆ, ಆ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಬೇಕು. ಇಬ್ಬರೇ ಕೂತು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು' ಎಂದಿದ್ದಾರೆ. 

ಗೆಲುವು ಕೆಟ್ಟ ಶಿಕ್ಷಕ, ಸೋಲು ಕಲಿಸುವ ಪಾಠ ಮರೆಯಲಾಗದು; ಯಾಕೆ ಹೀಗಂದ್ರು ನಟ ಶಾರುಖ್‌ ಖಾನ್?

'ಪರ್ಸನಲ್‌ ಸಂಗತಿಗಳು ಹೊರಗಡೆ ಬಂದರೆ ಅದು ಚರ್ಚೆ ಆಗುತ್ತಾ ಹೋಗುತ್ತೆ.. ಅನಾಯಾಸವಾಗಿ ಹತ್ತು ಜನರ ಬಾಯಿಗೆ ಆಹಾರವಾಗುತ್ತೆ.. ಒಬ್ರು ದೊಡ್ಡ ಹೀರೋ, ಇನ್ನೊಬ್ರು ದೊಡ್ಡ ನಿರ್ಮಾಪಕರು. ಏನು ಮಾತನಾಡಿದರೂ ತಪ್ಪಾಗಬಹುದು. ಉಮಾಪತಿಯವರು 140 ವರ್ಷದ ಇತಿಹಾಸ ಇರೋ ಕಾಂಗ್ರೆಸ್ ಪಾರ್ಟಿಯಿಂದ, ಬರೀ ಒಂದುವರೆ ತಿಂಗಳಲ್ಲಿ ಟಿಕೆಟ್ ಪಡೆದಿದ್ದಾರೆಂದರೆ ಅದೇನೂ ಸಾಮಾನ್ಯ ಸಂಗತಿಯಲ್ಲ. ಹಾಗೇ, ಒಬ್ಬ ಖಳನಟನ ಮಗ, ಸಣ್ಣ ಪಾತ್ರಗಳ ಮೂಲಕ ಬಂದು, ಲೈಟ್ ಬಾಯ್ ಆಗಿ, ಕ್ಯಾಮರಾ ಅಸಿಸ್ಟಂಟ್‌ ಆಗಿದ್ದವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ ಅಂದರೆ ಅದು ಕೂಡ ಅಸಾಮಾನ್ಯ ವಿಷಯವೇ ಆಗಿದೆ. ಅವರಿಬ್ಬರೂ ಕೂತು ಮಾತನಾಡಿದ್ರೆ, ಬೇರೆ ಯಾರೂ ಮಾತನಾಡೋ ಅವಶ್ಯಕತೆಯಿಲ್ಲ' ಎಂದಿದ್ದಾರೆ ಪ್ರಥಮ್. 

ಸ್ಟಾರ್ ಕಿಡ್ ಆಗಿದ್ದರೂ ಸಕ್ಸಸ್‌ಗೆ ಅದಕ್ಕಿಂತ ಹೆಚ್ಚಿನದೇನೋ ಬೇಕು; ನಟ ಜೂನಿಯರ್ ಎನ್‌ಟಿಆರ್‌

click me!