ಪ್ರೀತಿಸಿದ ವ್ಯಕ್ತಿ ಸದಾ ಸುಖವಾಗಿರಬೇಕು, ಸಂತೋಷವಾಗಿರಬೇಕೆಂಬ ಮನಸ್ಥಿತಿ ಈಗ ಬದಲಾಗಿದೆ. ಸಣ್ಣ ವಿಚಾರಕ್ಕೆ ದ್ವೇಷ ಬೆಳೆಸಿಕೊಳ್ಳುವ ಜನರು ಪ್ರೀತಿಯ ಮೋಸದಾಟವಾಡ್ತಾರೆ. ಈಗಿನ ದಿನಗಳಲ್ಲಿ ಲವ್ ಇಷ್ಕ್ ಮರ್ಡರ್ ಕಾಮನ್ ಆಗ್ತಿದೆ.
ಪ್ರೀತಿಸೋದೇ ತಪ್ಪಾ? ಪ್ರೀತಿಸಿದ ಹುಡುಗನ ಜೊತೆ ಬಾಳ್ವೆ ನಡೆಸುವ ನಿರ್ಧಾರ ತೆಗೆದುಕೊಳ್ಳೋದು ಅಪರಾಧವೇ? ಪ್ರೀತಿ ನಿಜವಾಗ್ಲೂ ಕುರುಡಾ? ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ವೇ ಇಲ್ವಾ? ಇನ್ನೂ ಎಷ್ಟು ದಿನ ಇಂಥ ಸುದ್ದಿ ಕೇಳೋದು? ಈ ಎಲ್ಲ ಪ್ರಶ್ನೆ ಹುಟ್ಟಿದ್ದು ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದ ಹುಡುಗಿ ಹತ್ಯೆ ನಂತ್ರ. ಪ್ರೇಯಸಿ ಕೊಂದು ಹಾಸಿಗೆಯಲ್ಲಿ ಶವ ಸುತ್ತಿಟ್ಟಿದ್ದ ವ್ಯಕ್ತಿ ಪೊಲೀಸ್ ಕೈಗೇನೋ ಸಿಕ್ಕಿಬಿದ್ದಿದ್ದಾನೆ. ಆದ್ರೆ ಇಂಥ ಘಟನೆ ಈಗ ಸಾಮಾನ್ಯ ಎನ್ನುವಂತಾಗಿದೆ.
ಕೆಲ ದಿನಗಳ ಹಿಂದಷ್ಟೆ ಶ್ರದ್ಧಾ (Shraddha) ವಾಕರ್ ಹತ್ಯೆ (Murder) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನಂತ್ರ ನಿಕ್ಕಿ ಯಾದವ್ ಕೊಲೆ ಪ್ರಕರಣ ಸುದ್ದಿ ಮಾಡಿದೆ. ನಿಕ್ಕಿ ದೇಹವನ್ನು ಆಕೆ ಬಾಯ್ ಫ್ರೆಂಡ್ ಫ್ರಿಡ್ಜ್ ನಲ್ಲಿಟ್ಟಿದ್ದ. ಒಂದಾದ್ಮೇಲೆ ಒಂದರಂತೆ ಇಂಥ ಪ್ರಕರಣಗಳು ವರದಿಯಾಗ್ತಿದೆ. ಪ್ಯಾರ್, ಇಷ್ಕ್, ಮರ್ಡರ್ ಈಗ ಫ್ಯಾಷನ್ (Fashion) ಆಗ್ತಿದೆ. ಇದು ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಅಷ್ಟಕ್ಕೂ ಹೆಣ್ಣನ್ನು ಬಳಸಿ ಎಸೆಯುವ ವಸ್ತು ಮಾಡ್ಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡ್ತಿದೆ. ನಿಮಗೆ ಅಚ್ಚರಿಯಾಗ್ಬಹುದು. ಆದ್ರೆ ಕ್ರಿಮಿನಲ್ ಸೈಕಾಲಜಿಸ್ಟ್ (Psychologist) ಪ್ರಕಾರ, ಕೆಲವರು ಹುಡುಗಿಯರನ್ನು ಬಳಸಿ ಬೀಸಾಕುವ ವಸ್ತುವಂತೆ ನೋಡ್ತಿದ್ದಾರೆ. ಈಗ ಅಂತ ಮನಸ್ಥಿತಿ ಹೆಚ್ಚಾಗಿದೆ. ಇಲ್ಲಿ ಯೂಸ್ ಎಂಡ್ ಥ್ರೋ ನೀತಿ ಅನುಸರಿಸುವ ಜನರು ಜೀವಕ್ಕೆ ಬೆಲೆ ನೀಡ್ತಿಲ್ಲ.
ನಿಮ್ಮ ಗೆಳತಿಯೂ ಒತ್ತಡ ಹಾಕಿ, ಸ್ವಾರ್ಥ ಈಡೇರಿಸಿಕೊಳ್ತಾರಾ?
ಇಂಥ ಘಟನೆಗೆ ಕಾರಣವೇನು ಎಂಬುದನ್ನು ಹುಡುಕ್ತಾ ಹೋದಾಗ ನಮ್ಮ ಮನಸ್ಸಿನಲ್ಲಿ ಬರೋದು, ಇಂಥ ಘಟನೆಯನ್ನು ಹೈಲೈಟ್ ಮಾಡಿದಾಗ, ದುರ್ಬಲ ಮನಸ್ಸ (Mind) ನ್ನು ಹೊಂದಿರುವ ಜನರು ಅದರಿಂದ ಪ್ರೇರಿತರಾಗಿರಬಹುದು ಎಂದುಕೊಳ್ತೇವೆ. ಆದ್ರೆ ತಜ್ಞರು (experts) ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕ್ತಾರೆ. ಇಂಥ ಘಟನೆಯ ಹಿಂದೆ ಉದ್ದೇಶಪೂರ್ವಕ ನಡೆ ಇರುತ್ತದೆ. ಇದು ಕೇವಲ ಒಂದು ದಿನದ ಆಲೋಚನೆಯಲ್ಲ. ಅನೇಕ ದಿನಗಳಿಂದ ಮನಸ್ಸಿನಲ್ಲಿ ಬರುತ್ತಿರುವ ನಕಾರಾತ್ಮಕ (Negative) ಆಲೋಚನೆಗಳ ಪರಿಣಾಮವಾಗಿರುತ್ತದೆ ಎನ್ನುತ್ತಾರೆ.
ಇಂಥ ಘಟನೆ ಹೆಚ್ಚಲು ಕಾರಣವೇನು? : ಅಪರಾಧ ಮಾಡುವವರಲ್ಲಿ ಎರಡು ವಿಧಗಳಿದೆ. ಮೊದಲನೆಯವರನ್ನು ಸೈಕೋಪಾತ್ಸ್ (Psychopaths) ಎಂದು ಕರೆಯಲಾಗುತ್ತದೆ. ಎರಡನೆಯದನ್ನು ಸೋಶಿಯೋಪಾತ್ಸ್ ಎಂದು ಕರೆಯಲಾಗುತ್ತದೆ. ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಿಕೃತ ಮನಸ್ಥಿತಿಯನ್ನು ಹೊಂದಿರುವ ಜನರನ್ನು ಸೈಕೋಪಾತ್ ಎಂದು ಕರೆಯಲಾಗುತ್ತದೆ. ಚಿಕಿತ್ಸೆ ಮತ್ತು ಕುಟುಂಬದ ಬೆಂಬಲದಿಂದ ಇವರನ್ನು ಸರಿಮಾಡಬಹುದು. ಇವರ ಮನಸ್ಥಿತಿ ಬೇಗ ಅರ್ಥವಾಗುತ್ತದೆ. ಪಾಲುದಾರರ ವರ್ತನೆ ವಿಚಿತ್ರವಾಗಿದ್ದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಬೇಕು. ಇಲ್ಲವೆಂದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಸದಾ ಅತೃಪ್ತರಾಗಿರ್ತಾರೆ. ವಾಸ್ತವದಲ್ಲಿ ನಾನು ಏನಾಗಿದ್ದೇನೋ ಅದನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಅವರನ್ನು ಸೋಶಿಯೋಪಾತ್ಸ್ ಎಂದು ಕರೆಯಲಾಗುತ್ತದೆ. ಅವರು ಸದಾ ಒಂಟಿಯಾಗಿರುತ್ತಾರೆ. ಒಂದ್ಬೇಳೆ ಸಂಗಾತಿ ಜೊತೆ ವಾಸ ಶುರು ಮಾಡಿದ್ರೂ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ದೊಡ್ಡ ಘಟನೆಗೆ ಸಾಕ್ಷಿಯಾಗ್ತಾರೆ.
Parenting Tips: ಪೋಷಕರು ಮಕ್ಕಳ ಮುಂದೆ ಅಳೋದು ತಪ್ಪಾ?
ಪ್ರೀತಿಯಿರಲಿ,ಕುರುಡುತನ ಬೇಡ : ಪ್ರೀತಿಯ ಮೇಲೆ ಜಗತ್ತು ನಿಂತಿದೆ. ಪರಸ್ಪರ ಪ್ರೀತಿ ಅನಿವಾರ್ಯ ಹಾಗೂ ಅಗತ್ಯ. ಆದ್ರೆ ಪ್ರೀತಿಯಲ್ಲಿ ಕುರುಡುತನವಿದ್ರೆ ಇಂಥ ಘಟನೆ ಮರುಕಳಿಸುತ್ತದೆ. ಕೊಲೆಗೆ ಮೊದಲು ಅನೇಕ ಬಾರಿ ಸಂಗಾತಿ ಹಿಂಸೆ ನೀಡಿರ್ತಾನೆ. ಶ್ರದ್ಧಾ ಪ್ರಕರಣದಲ್ಲಿ ಆರೋಪಿ ಆಕೆಗೆ ಅನೇಕ ಬಾರಿ ಹೊಡೆದಿದ್ದ. ಆಗ್ಲೇ ಶ್ರದ್ಧಾ ಜಾಗೃತಳಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಪ್ರೀತಿಯಲ್ಲಿದ್ದವರು ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿರಬೇಕು. ಅತಿಯಾಗಿ ನಂಬುವ ಬದಲು, ಚಿಂತನಶೀಲವಾಗಿ ಮುನ್ನಡೆಯಬೇಕು.