ಕೊರೊನಾ: ಪ್ರಜೆಗಳ ಮೇಲೆ ಕಣ್ಣಿಡುವ ದಿನಗಳು ಮುಂದಿವೆ ಹುಷಾರ್‌!

By Suvarna NewsFirst Published Mar 27, 2020, 5:52 PM IST
Highlights

ಹಲವಾರು ಮುಂದುವರಿದ ತಂತ್ರಜ್ಞಾನದ ದೇಶಗಳು ಈಗಾಗಲೇ ಇದರ ಹೆಸರಿನಲ್ಲಿ ತಮ್ಮ ಪ್ರಜೆಗಳ ಮೇಲೆ ನಿಗಾ ಇಡುವ ಒಂದು ವ್ಯವಸ್ಥೆಯನ್ನು ರಚಿಸಿಕೊಂಡಿವೆ. ಕೊರೋನಾ ಹೋದರೂ ಅದು ಮುಂದುವರಿಯಲಿದೆ. ಇದು ಬಹುಶಃ ಕೊರೋನಾ ಶಾಶ್ವತವಾಗಿ ಜಗತ್ತಿಗೆ ನೀಡುವ ಕೊಡುಗೆಯಾಗಿರಲಿದೆ.

ಕೊರೋನಾ ವೈರಸ್‌ನಿಂದ ಎಷ್ಟು ಮಂದಿ ಸಾಯುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಬಹುಶಃ ಲಕ್ಷಗಟ್ಟಲೆ ಜನ ಸಾಯಲೂಬಹುದು. ಆದರೆ, ಹಲವಾರು ಮುಂದುವರಿದ ತಂತ್ರಜ್ಞಾನದ ದೇಶಗಳು ಈಗಾಗಲೇ ಇದರ ಹೆಸರಿನಲ್ಲಿ ತಮ್ಮ ಪ್ರಜೆಗಳ ಮೇಲೆ ನಿಗಾ ಇಡುವ ಒಂದು ವ್ಯವಸ್ಥೆಯನ್ನು ರಚಿಸಿಕೊಂಡು ಆಗಿದೆ. ಕೊರೋನಾ ಹೋದರೂ ಅದು ಮುಂದುವರಿಯಲಿದೆ. ಇದು ಬಹುಶಃ ಕೊರೋನಾ ಶಾಶ್ವತವಾಗಿ ಜಗತ್ತಿಗೆ ನೀಡುವ ಕೊಡುಗೆಯಾಗಿರಲಿದೆ.

ಈ ವ್ಯವಸ್ಥೆಗಳು ಜಾರಿಗೆ ಬಂದದ್ದು ಕೊರೋನಾ ಶಂಕಿತರು ಅಥವಾ ಸೊಂಕಿತರು ಹೊರಗಡೆ ಓಡಾಡಿ ಎಲ್ಲರಿಗೆ ಹಬ್ಬಿಸದಿರಲಿ ಎನ್ನುವ ಒಳ್ಳೆಯ ಕಾರಣದಿಂದ. ಉದಾಹರಣೆಗೆ, ವಿದೇಶದಿಂದ ಬಂದ ಒಬ್ಬ ವ್ಯಕ್ತಿ, ಎರಡು ವಾರಗಳ ಕ್ವಾರಂಟೈನ್‌ ವಾಸ ಕಡ್ಡಾಯವಾಗಿ ಪಾಲಿಸಬೇಕು. ಹಾಗೆ ಪಾಲಿಸದೆ ಓಡಾಡುತ್ತ ಇದ್ದರೆ ಆತನನ್ನು ಶಿಕ್ಷಿಸಬಹುದು. ಆದರೆ ಆತ ಮನೆ ಹೊರಗಿದ್ದಾನೋ ಒಳಗಿದ್ದಾನೋ ತಿಳಿಯುವುದು ಹೇಗೆ? ಅದಕ್ಕಾಗಿಯೇ ಚೀನಾ, ದಕ್ಷಿಣ ಕೊರಿಯಾ ಮುಂತಾದ ಮುಂದುವರಿದ ದೇಶಗಳು ತಮ್ಮದೇ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಆತನ ಎಲ್ಲ ಚಲನವಲನವೂ ದಾಖಲಾಗುತ್ತದೆ. ಸೈಬರ್‌ ಪೊಲೀಸರಿಗೆ ಕೇಳಿದರೆ ಆತನ ಕಳೆದ ಒಂದು ತಿಂಗಳ ಓಡಾಟದ ಎಲ್ಲ ವಿವರವನ್ನೂ ಮೊಗೆದು ಮೊಗೆದು ಕೊಡುತ್ತಾರೆ. ಇದಕ್ಕೆ ಆ ದೇಶಗಳು ಹಲವು ವಿಧಾನಗಳನ್ನು ಬಳಸಿಕೊಂಡಿವೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಂದಿತಾ ಧರ್ಮಸ್ಥಳ ದೀಪ

ಉದಾಹರಣೆಗೆ, ಚೀನಾದಲ್ಲಿ ಈ ಪದ್ಧತಿ ಹೆಚ್ಚು ಕಟ್ಟುನಿಟ್ಟಾಗಿದೆ. ಅಲ್ಲಿ ವ್ಯಕ್ತಿಗಳ ಓಡಾಟ ಗುರುತಿಸಲಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ದೇಶದಲ್ಲಿರುವ ಎಲ್ಲ ಮೊಬೈಲ್‌ಗಳ ಮೇಲೂ ಸರಕಾರ ನಿಗಾ ಇಟ್ಟಿದೆ. ಕೋವಿಡ್‌ ಸೋಂಕಿತನ ಮೊಬೈಲ್‌ ನಂಬರ್‌ನ ಮೇಲೆ ಅದು ನಿಗಾ ಇಡುತ್ತದೆ, ಆತ ಬೇರೆಲ್ಲಾದರೂ ಓಡಾಡಿದರೆ, ತಕ್ಷಣವೇ ಅದಕ್ಕೆ ಗೊತ್ತಾಗುತ್ತದೆ. ಕ್ಷಣಾರ್ಧದಲ್ಲಿ ಪೊಲೀಸರು ಬಂದು ಹಿಡಿದುಹಾಕುತ್ತಾರೆ. ಮೊಬೈಲ್‌ ಬಾರ್‌ಕೋಡ್‌, ಸಿಸಿಟಿವಿ ಫೂಟೇಜ್‌, ಡ್ರೋನ್‌ ಇತ್ಯಾದಿಗಳನ್ನು ಅದು ಬಳಸಿಕೊಂಡಿದೆ. ಹಾಂಕಾಂಗ್‌ನಲ್ಲಿ ಸೋಂಕಿತರಿಗೆ ಹಾಗೂ ಶಂಕಿತರಿಗೆ ಮಣಿಕಟ್ಟಿಗೆ ಕಟ್ಟುವ ಬ್ಯಾಂಡ್‌ಗಳನ್ನು ಕೊಡಲಾಗಿದೆ, ಇದು ಮೊಬೈಲ್ ಸ್ಮಾರ್ಟ್‌ಫೋನ್‌ಗೆ ಲಿಂಕ್‌ ಆಗಿದೆ. ಈ ವ್ಯಕ್ತಿ ನಿಗದಿತ ಪ್ರದೇಶದಲ್ಲಿ ಅಥವಾ ಮನೆಯೊಳಗೆ ಅಥವಾ ಐಸೋಲೇಶನ್‌ನಲ್ಲಿ ಮಾತ್ರವೇ ಇರಬೇಕು. 

ದಕ್ಷಿಣ ಕೊರಿಯಾ ಇನ್ನೂ ಸ್ವಲ್ಪ ಮುಂದೆ ಹೋಗಿದೆ, ಅದು ವ್ಯಕ್ತಿ ಕ್ರೆಡಿಟ್‌ ಕಾರ್ಡ್ ಮತ್ತು ಡೆಬಿಟ್‌ ಕಾರ್ಡ್‌ ಪಾವತಿ ಮಾಹಿತಿಗಳನ್ನು ಹಿಂಬಾಲಿಸುತ್ತಿದೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳ ಮೇಲೂ ನಿಗಾ ಇಟ್ಟಿದೆ. ಮೊಬೈಲ್‌ನ ಲೊಕೇಶನ್‌ ಅಥವಾ ಜಿಪಿಎಸ್‌ ಡೇಟಾವನ್ನು ಕೂಡ ಟ್ರ್ಯಾಕ್‌ ಮಾಡಲಾಗುತ್ತಿದೆ. ಹೀಗಾಗಿ ಯಾರೂ ಎಲ್ಲಿಯೂ ತಪ್ಪಿಸಿಕೊಂಡು ಹೋಗುವಂತೆಯೇ ಇಲ್ಲ. 

71 ವರ್ಷದ ತಂದೆ ನೆನೆದು ಕಣ್ಣೀರಿಟ್ಟ ನಟಿ; ಇದಕ್ಕೆಲ್ಲಾ ಕೊರೋನಾನೇ ಕಾರಣ! 

ಸಿಂಗಾಪುರವೂ ಇದನ್ನೆಲ್ಲ ಮಾಡುತ್ತಿದೆ. ಅಲ್ಲಿ ಬ್ಲೂಟೂತ್‌ ಆಧರಿಸಿದ ಒಂದು ಆಪ್‌ ಅಭಿವೃದ್ಧಿಪಡಿಸಲಾಗಿದೆ. ಅದು, ವ್ಯಕ್ತಿಯ ಓಡಾಟದ ವಿವರಗಳನ್ನು ಸಂಬಂಧಪಟ್ಟವರಿಗೆ ತಿಳಿಸುತ್ತದೆ. ಚೀನಾ ಈ ವಿಚಾರದಲ್ಲಿ ತುಂಬಾ ಮುಂದೆ ಹೋಗಿದೆ ಎನ್ನಲಾಗುತ್ತದೆ. ಅದು ತನ್ನ ದೇಶದ ಪ್ರಜೆಗಳಿಗೇ ತಿಳಿಯದ ಹಾಗೆ, ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ್ದು, ಅದರ ಮೂಲಕ ತನಗೆ ಯಾರು ಬೇಕೋ ಅವರ ಮೇಲೆ ನಿಗಾ ಇಡಬಹುದಾಗಿದೆ ಎಂದು ಚೀನಾದ ಟೀಕಾಕಾರರು ಹೇಳುತ್ತಲೇ ಇದ್ದಾರೆ. ಚೀನಾ ಹೀಗೆಯೇ ಯಾರ ಮೇಲಾದರೂ ನಿಗಾ ಇಡಬಹುದಾಗಿದೆ. ಉದಾಹರಣೆಗೆ, ಟಿಕ್‌ಟಾಕ್‌ ಎಂಬುದು ನಮ್ಮ ದೇಶದಲ್ಲೂ ಯುವಜನತೆ ಹೆಚ್ಚಾಗಿ ಬಳಸುವ ಆಪ್‌. ಈ ಆಪ್‌ನ ಮೂಲಕವೂ ಚೀನಾ ವ್ಯಕ್ತಿಯ ನಿಗಾ ಇಡಬಹುದಾದ, ಆತನ ನಗದು ಪಾವತಿಯ ವಿವರಗಳನ್ನು ಸಂಗ್ರಹಿಸಬಹುದಾದ ಒಂದು ಆಪನ್ನು ನಮ್ಮೆಲ್ಲರ ಮೊಬೈಲ್‌ಗಳಲ್ಲಿ ಗುಟ್ಟಾಗಿ ಇನ್‌ಸ್ಟಾಲ್‌ ಮಾಡುತ್ತಿದೆ ಎಂದು ಕಾನ್‌ಸ್ಪಿರಸಿ ಥಿಯರಿಸ್ಟ್‌ಗಳು ಹೇಳುತ್ತಾರೆ. ಎಷ್ಟು ನಿಜವೋ ಸುಳ್ಳೋ ತಿಳಿಯದು.

ಇಟಲಿಯಲ್ಲಿ ಕೊರೋನಾ ಹರಡಲು ಫುಟ್ಬಾಲ್‌ ಪಂದ್ಯ ಕಾರಣ?

ಇದರಿಂದಾಗಿಯೇ ನಮ್ಮೆಲ್ಲರ ಮುಂದಿನ ದಿನಗಳು ಕಷ್ಟವಾಗಲಿವೆ. ನಾವು ಸಜ್ಜನರು, ನಮಗೆ ಯಾವುದೇ ಇತರ ಅಥವಾ ಕೆಟ್ಟ ವ್ಯವಹಾರಗಳಿಲ್ಲ, ಹಾಗಾಗಿ ಸರಕಾರ ನನ್ನ ಮೇಲೆ ನಿಗಾ ಇಟ್ಟರೂ ಪರವಾಗಿಲ್ಲ ಎಂದುಕೊಳ್ಳುವವರು ಇರಬಹುದು. ಆದರೆ ಯಾರಾದರೊಬ್ಬರು ನಮ್ಮ ಮೇಲೆ ನಿರಂತರ ನಿಗಾ ಇಡಬಹುದು ಎಂಬುದೇ ಖಾಸಗಿತನಕ್ಕೆ ಅತ್ಯಂತ ಧಕ್ಕೆ ತರುವ ಕಿರಿಕಿರಿಯ ಸಂಗತಿ. ಈಗೇನೋ ಕೊರೊನಾ ಓಡಿಸಲು ಇದರಿಂದ ಉಪಕಾರವೇ ಆಗುತ್ತಿದೆ, ಕೊರೋನಾ ಹಾವಳಿ ಕಾಲದ ಬಳಿಕ ಇದರ ಬಳಕೆಯನ್ನು ಸರಕಾರಗಳು ಹೇಗೆ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕು.

click me!