ನಾಳೆ ಭಾನುವಾರ ಜೂನ್ 16ರಂದು ಅಪ್ಪಂದಿರ ದಿನ ಆಚರಣೆ ಮಾಡಲಾಗ್ತಿದೆ. ಎಲ್ಲ ಮಕ್ಕಳು ತಂದೆಗೆ ಶುಭಕೋರುವ ತಯಾರಿ ನಡೆಸಿದ್ದಾರೆ. ಅಪ್ಪ ಸಣ್ಣಪುಟ್ಟ ನಿರ್ಧಾರ ತೆಗೆದುಕೊಂಡಾಗ ಕೋಪಗೊಳ್ಳುವ ಮಕ್ಕಳು, ಇಂಥ ಅಪ್ಪ ಸಿಕ್ಕಿಲ್ಲ ಅಂತ ಖುಷಿಪಡಿ.
ಅಪ್ಪ – ಅಮ್ಮ ಇಬ್ಬರನ್ನು ದೇವರಿಗೆ ಹೋಲಿಸಲಾಗುತ್ತದೆ. ತನ್ನೆಲ್ಲ ದುಃಖವನ್ನು ಬಚ್ಚಿಟ್ಟು ಕುಟುಂಬಕ್ಕಾಗಿ ಕೆಲಸ ಮಾಡುವ ಎತ್ತು ಎಂದೇ ಅಪ್ಪನನ್ನು ಪರಿಗಣಿಸಲಾಗುತ್ತದೆ. ಅಪ್ಪನ ಪ್ರೀತಿ ಅಮರ. ಮಕ್ಕಳಿಗಾಗಿ ಎಂಥ ಕೆಲಸ ಮಾಡಲು ಅಪ್ಪ ಸಿದ್ಧನಿರ್ತಾನೆ. ಆದ್ರೆ ಪ್ರಪಂಚದಲ್ಲಿ ಇಂಥ ಅಪ್ಪನನ್ನು ನೀವು ನೋಡಲು ಸಾಧ್ಯವಿಲ್ಲ. ಇಡೀ ದೇಶದ ಜನತೆಗೆ ಅತ್ಯುತ್ತಮ ರಾಜನಾಗಿದ್ದ ಆತ, ಒಳ್ಳೆ ಅಪ್ಪ ಮಾತ್ರ ಆಗ್ಲಿಲ್ಲ. ತನ್ನ ರಾಜ್ಯಕ್ಕಾಗಿ ಮಹತ್ತರ ಕೆಲಸವನ್ನು ಮಾಡಿದ್ದ ಈ ರಾಜನನ್ನು ಪೀಟರ್ I ಮತ್ತು ಪೀಟರ್ ದಿ ಗ್ರೇಟ್ ಎಂದು ಕರೆಯಲಾಗುತ್ತದೆ.
ಪೀಟರ್ (Peter) ಸಾಮಾನ್ಯ ರಾಜನಾಗಿರಲಿಲ್ಲ. ರಷ್ಯಾ (Russia) ವನ್ನು ಆಧುನಿಕ ಯುಗಕ್ಕೆ (Modern Era) ತಂದ ಕೀರ್ತಿಗೆ ಪಾತ್ರನಾಗಿದ್ದ. 1682 ರಿಂದ 1725 ರವರೆಗೆ ಪೀಟರ್, ರಾಜ್ಯಕ್ಕಾಗಿ ಅನೇಕ ಮಹತ್ವದ ಕೆಲಸಗಳನ್ನು ಮಾಡಿದ್ದ. ರಷ್ಯನ್ನರು ಪಶ್ಚಿಮ ಯುರೋಪಿಯನ್ನರಂತೆ ಕಾಣುವಂತೆ ಮತ್ತು ವರ್ತಿಸುವಂತೆ ಮಾಡಲು ಪೀಟರ್ ಗಡ್ಡದ ತೆರಿಗೆಯನ್ನು ವಿಧಿಸಿದ್ದ. ನೌಕಾಪಡೆ ಸಿದ್ಧಪಡಿಸಿದ್ದಲ್ಲದೆ ಸ್ವೀಡನ್ ವಿರುದ್ಧ ಜಯಭೇರಿ ಬಾರಿಸಿದ್ದ. ಅನೇಕ ಸಾಧನೆ ಮಾಡಿದ್ದ ಪೀಟರ್ ಅವರನ್ನು ಪೀಟರ್ ದಿ ಗ್ರೇಟ್, ಉತ್ತಮ ರಾಜ ಎಂದು ಕರೆಯಲಾಯಿತು. ಆದರೆ ಪೀಟರ್ ಎಂದೂ ಉತ್ತಮ ತಂದೆ ಆಗ್ಲಿಲ್ಲ.
ರೆಡ್ ಕಾರ್ಪೆಟ್ ಸ್ಟುಡಿಯೋ 777 ನಡೆಸುತ್ತಿದ್ರು ಪವಿತ್ರಾ ಗೌಡ; ವಿಜಯಲಕ್ಷ್ಮೀಗೆ ಟಾಂಗ್ ಕೊಡೋಕಾ?
ಪೀಟರ್, ಸಾಂಪ್ರದಾಯಿಕತೆಯ ವಿರುದ್ಧ ಬಂಡಾಯವೆದ್ದಿದ್ದ ಎಂದು ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿದ್ದ ರಷ್ಯಾದ ಇತಿಹಾಸದ ಪ್ರಾಧ್ಯಾಪಕ ಜೊನಾಥನ್ ಡಾಲಿ ಹೇಳಿದ್ದಾರೆ. ಪೀಟರ್ ನಿರಾಶೆಗೆ ಮುಖ್ಯ ಕಾರಣವಾಗಿದ್ದು ಅವರ ಮಗ. ಪೀಟರ್ ಹಿರಿಯ ಮಗ ಮತ್ತು ಉತ್ತರಾಧಿಕಾರಿ ತ್ಸರೆವಿಚ್ ಅಲೆಕ್ಸಿ, ತಂದೆಗಿಂತ ಭಿನ್ನ ಆಲೋಚನೆ ಹೊಂದಿದ್ದ.
ಅಲೆಕ್ಸಿಯ ತಾಯಿ ಯುಡೋಕ್ಸಿಯಾ ಧರ್ಮನಿಷ್ಠೆ ಹೊಂದಿದ್ದಳು. ಪೀಟರ್ ಅಲೆಕ್ಸಿಯಾದಿಂದ ದೂರವಿದ್ದ. ಹಾಗಾಗಿ ಅಲೆಕ್ಸಿಯಾ ಚಿಕ್ಕಮ್ಮನ ಜೊತೆ ಬೆಳೆದ. ಆತ ಮಾಸ್ಕೋ ಗುಂಪಿನ ಜೊತೆ ಹೆಚ್ಚು ಬರೆಯುತ್ತಿದ್ದ. ಈ ಗುಂಪಿನ ಜನರು ಆರ್ಥೊಡಾಕ್ಸ್ ಚರ್ಚ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಪಾಶ್ಚಾತ್ಯೀಕರಣವನ್ನು ಕಡಿಮೆ ನಂಬುತ್ತಿದ್ದರು. ಅಲೆಕ್ಸಿ ಹದಿಹರೆಯದವನಾಗಿದ್ದಾಗ, ಪೀಟರ್ ಸೈನ್ಯದ ಲಾಜಿಸ್ಟಿಕ್ಸ್ ವಿಭಾಗಕ್ಕೆ ನೇಮಿಸಲಾಯಿತು. 1708 ರಲ್ಲಿ ಸ್ವೀಡನ್ ರಷ್ಯಾದ ವಿಫಲ ಆಕ್ರಮಣದ ಸಮಯದಲ್ಲಿ ಮಾಸ್ಕೋದ ರಕ್ಷಣೆಗೆ ಅಲೆಕ್ಸಿ ಮುಂದಾಗಿದ್ದಾನೆ ಎಂಬ ಸಣ್ಣ ಆರೋಪ ಕೇಳಿ ಬಂದಿತ್ತು. ಆದ್ರೆ ಆ ಸಮಯದಲ್ಲಿ ಅಪ್ಪ – ಮಗನ ಮಧ್ಯೆ ಭಿನ್ನಾಭಿಪ್ರಾಯವಿರಲಿಲ್ಲ.
ಅಲೆಕ್ಸಿಯ ಮದವೆ ನಂತ್ರ ಅಪ್ಪ – ಮಗನ ಸಂಬಂಧ ಹಳಸಲು ಶುರುವಾಯ್ತು. ಅಲೆಕ್ಸಿ ಚಾರ್ಲೊಟ್ ಎಂಬ ಜರ್ಮನ್ ರಾಜಕುಮಾರಿ ಜೊತೆ ಮದುವೆ ಮಾಡಿಸಲಾಯ್ತು. ಆದ್ರೆ ಅಲೆಕ್ಸಿ ಈ ಸಂಬಂಧದಲ್ಲಿ ಖುಷಿ ಇರಲಿಲ್ಲ. ಪ್ರೀತಿ ಇರಲಿಲ್ಲ, ಕುಡಿತ ಹೆಚ್ಚಾಗಿತ್ತು. ಅಲೆಕ್ಸಿ ಪತ್ನಿ ಷಾರ್ಲೆಟ್, ಎರಡನೇ ಮಗುವಿಗೆ ಜನ್ಮ ನೀಡಿದ ನಂತ್ರ ಸಾವನ್ನಪ್ಪಿದ್ಲು. ಈ ಸಮಯದಲ್ಲಿ ಅಲೆಕ್ಸಿ ಅಫ್ರೋಸಿನಾ ಫೆಡೋರೊವಾ ಎಂಬ ಸೇವಕಿಯೊಂದಿಗೆ ಸಂಬಂಧ ಹೊಂದಿದ್ದ.
ಅನಂತ್ ರಾಧಿಕಾ ಕ್ರೂಸ್ ಪಾರ್ಟಿ ಫೋಟೋಸ್ ಔಟ್; ರಾಣಿಯಂತೆ ಕಂಗೊಳಿಸಿದ ವಧು
ಅಕ್ಟೋಬರ್ 1715 ರಲ್ಲಿ ಪೀಟರ್ ತನ್ನ ಮಗನಿಗೆ ಪತ್ರ ಬರೆದು ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡ. ಅನರ್ಹ ಮಗನಿಗೆ ಅಧಿಕಾರ ನೀಡುವ ಬದಲು ಅಪರಿಚಿತ ಅರ್ಹ ವ್ಯಕ್ತಿಗೆ ಅಧಿಕಾರ ನೀಡೋದು ಯೋಗ್ಯವೆಂದು ಆತ ಭಾವಿಸಿದ. ಇದಾದ್ಮೇಲೆ ಅಲೆಕ್ಸಿ ತನ್ನ ಸಿಂಹಾಸನಿಂದ ಕೆಳಗಿಳಿದ. ಮಗನ ಹಿಂದೆ ವಿರೋಧಿಗಳು ಬೀಳುವ ಸಾಧ್ಯತೆ ಇದೆ ಎಂಬುದನ್ನು ಅರಿತ ಪೀಟರ್, ಮಗನಿಗೆ ಸನ್ಯಾಸತ್ವ ಸ್ವೀಕರಿಸುವಂತೆ ಹೇಳಿದೆ. ಮಠಕ್ಕೆ ಹೋಗಲು ಅಲೆಕ್ಸಿ ಒಪ್ಪಿಕೊಂಡ್ರೂ ಅಲ್ಲಿಗೆ ಹೋಗದೆ ಸಾಲ ಮಾಡಿ, ವಿದೇಶಕ್ಕೆ ಓಡಿ ಹೋದ. ಆದರೆ ಪೀಟರ್ ಏಜೆಂಟರ್ ಸಹಾಯದಿಂದ ಮಗನ ಪತ್ತೆ ಮಾಡಿದೆ. 1718ರಲ್ಲಿ ಅಲೆಕ್ಸಿ ರಷ್ಯಾಕ್ಕೆ ವಾಪಸ್ ಆದ. ತಂದೆ ವಿರುದ್ಧವೇ ಮಗ ಪಿತೂರಿ ಮಾಡಿದ್ದರಿಂದ ಮಗನನ್ನು ಬಂಧಿಸಿದ ತಂದೆ ಚಿತ್ರಹಿಂಸೆ ನೀಡಿದ. ಜೂನ್ 19, 1718ರಲ್ಲಿ ಆತನಿಗೆ 20 ಹೊಡೆತ ನೀಡಲಾಯ್ತು. ಇದಾದ ಕೆಲವೇ ದಿನಗಳಲ್ಲಿ ಅಲೆಕ್ಸಿ ಸಾವನ್ನಪ್ಪಿದ.