ಮದುವೆಯಾದ ಬಳಿಕ ಕ್ಷುಲಕ್ಕೆ ಕಾರಣಕ್ಕೆ ಡಿವೋರ್ಸ್ ನೀಡಿದ ಹಲವು ಘಟನೆಗಳು ದಾಖಲಾಗಿದೆ. ಭಾರತದಲ್ಲಿ ಇತ್ತೀಚೆಗೆ ಡಿವೋರ್ಸ್ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತ ಅತ್ಯಂತ ಕಡಿಮೆ ಡಿವೋರ್ಸ್ ಪ್ರಕರಣಗಳ ದೇಶ. ಆದರೆ ಈ ಒಂದು ದೇಶದಲ್ಲಿ ಮದುವೆಯಾದ ಶೇ.94 ರಷ್ಟು ಜೋಡಿ ಡಿವೋರ್ಸ್‌ನಲ್ಲಿ ಸಂಬಂಧ ಅಂತ್ಯಗೊಳಿಸುತ್ತಿದ್ದಾರೆ.
ಬೆಂಗಳೂರು(ಸೆ.16) ಆಧುನಿಕ ಯುಗದಲ್ಲಿ ಮದುವೆ ಸಂಬಂಧ ಉಳಿಸಿಕೊಳ್ಳುವುದು ಅತ್ಯಂತ ಸವಾಲಾಗುತ್ತಿದೆ. ವಿಚ್ಛೇದನ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ದಶಕಗಳ ಹಿಂದೆ ಪಕ್ಕದ ಗ್ರಾಮ, ಜಿಲ್ಲೆಯಲ್ಲಿ ಒಂದೋ ಎರಡೋ ಕಾಣಿಸಿಕೊಳ್ಳುತ್ತಿದ್ದ ಡಿವೋರ್ಸ್ ಇದೀಗ ಪ್ರತಿ ಮನೆಯಲ್ಲೂ ದಾಖಲಾಗುತ್ತಿದೆ. ಜಾಗತಿಕವಾಗಿ ಡಿವೋರ್ಸ್ ಅತೀ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕೆಲ ದೇಶಗಳಲ್ಲಿ ಡಿವೋರ್ಸ್ ಪ್ರಮಾಣ ಅತೀಯಾಗಿದೆ. ಸಂಬಂಧಕ್ಕೆ ಹೆಚ್ಚಿನ ಬೆಲೆ ಹಾಗೂ ಮೌಲ್ಯ ನೀಡುವ ಭಾರತದಲ್ಲಿ ಡಿವೋರ್ಸ್ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಇನ್ನು ಪೋರ್ಚುಗಲ್‌ನಲ್ಲಿ ಮದುವೆಯಾದ ಶೇಕಡಾ 94 ರಷ್ಟು ಜೋಡಿ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ. ಮೂಲಕ ವಿಶ್ವದ ಅತ್ಯಂತ ಗರಿಷ್ಠ ಡಿವೋರ್ಸ್ ಪ್ರಕರಣಗಳ ದೇಶ ಅನ್ನೋ ಕುಖ್ಯಾತಿಗೆ ಪೋರ್ಚುಗಲ್ ಪಾತ್ರವಾಗಿದೆ.
ದೇಶದ ಜನಸಂಖ್ಯೆ, ಮದುವೆಯಾಗಿರುವ ಜೋಡಿಗಳು ಹಾಗೂ ಡಿವೋರ್ಸ್ ಪ್ರಕರಣ ಆಧರಿಸಿ ಗ್ಲೋಬಲ್ ಇಂಡೆಕ್ಸ್ ಯಾವ ದೇಶದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಿದೆ ಅನ್ನೋ ಅಂಕಿ ಅಂಶ ಬಿಡುಗಡೆ ಮಾಡಿದೆ. ಪೋರ್ಚುಗಲ್ ಈ ಅಂಕಿ ಸಂಖ್ಯೆಯಲ್ಲಿ ಎಲ್ಲರಿಗಿಂತ ಮುಂದಿದೆ. ಪೋರ್ಚುಗಲ್‌ನಲ್ಲಿ ಡಿವೋರ್ಸ್ ಸಂಖ್ಯೆ ಶೇಕಡಾ 94 ರಷ್ಟಿದ್ದರೆ, ಎರಡನೇ ಸ್ಥಾನ ಸ್ಪೇನ್ ಆಕ್ರಮಿಸಿಕೊಂಡಿದೆ. ಸ್ಪೇನ್‌ನಲ್ಲಿ ಶೇಕಡಾ 85 ರಷ್ಟು ಜೋಡಿಗಳ ಸಂಬಂಧ ಡಿವೋರ್ಸ್‌ನಲ್ಲಿ ಅಂತ್ಯಗೊಳ್ಳುತ್ತಿದೆ.
ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿ ಬಿಟ್ಬಿಡಿ; ಕೋರ್ಟ್ ಹೇಳಿದ್ದೇನು ನೋಡಿ
ಲಕ್ಸಂಬರ್ಗ್, ರಷ್ಯಾ, ಉಕ್ರೇನ್, ಕ್ಯೂಬಾ, ಫಿನ್‌ಲೆಂಡ್, ಬೆಲ್ಜಿಯಂ ನಂತರದ ಸ್ಥಾನ ಪಡೆದಿದೆ. ಅಮೆರಿಕದಲ್ಲಿ ಡಿವೋರ್ಸ್ ಸಂಖ್ಯೆ ಶೇಕಡಾ 45ರಷ್ಟಿದ್ದರೆ, ಚೀನಾದಲ್ಲಿ ಈ ಸಂಖ್ಯೆ ಶೇಕಡಾ 44. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶೇಕಡಾ 41ರಷ್ಟು ಜೋಡಿಗಳು ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ. ಈ ದೇಶಗಳಲ್ಲಿ ವಿಚ್ಛೇದನ ಪ್ರಮಾಣ ಅತಿಯಾಗಿದ್ದರೆ. ಭಾರತದಲ್ಲಿ ಡಿವೋರ್ಸ್ ರೇಟ್ ಶೇಕಡಾ 1. ಹೌದು ಶೇಕಡಾ 1 ರಷ್ಟು ಮಾತ್ರ ಭಾರತಲ್ಲಿ ಡಿವೋರ್ಸ್ ಪ್ರಕರಣಗಳಿವೆ.
ಭಾರತದಲ್ಲಿ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆ ಆಳವಾಗಿ ಬೇರೂರಿದೆ. ಕುಟುಂಬ ರಚನೆ, ಕೌಟುಂಬಿಕ ಪದ್ಧತಿ ಸಂಬಂಧಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹೀಗಾಗಿ ಭಾರತದ ವಿಚ್ಚೇದನ ಪ್ರಮಾಣ ಕಡಿಮೆ. ಹಾಗಂತ ಭಾರತದಲ್ಲಿ ಡಿವೋರ್ಸ್ ಅತ್ಯಂತ ಕಡಿಮೆ ಎಂದು ಹಿಗ್ಗುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿದೆ. ಮೌಲ್ಯಯುತ ಬದುಕು, ಸಂಸ್ಕಾರ ಕಾಣೆಯಾಗುತ್ತಿದೆ.
ಇನ್ಮುಂದೆ ಮದುವೆಯಾದ ಒಂದೇ ವರ್ಷದೊಳಗೆ ಡಿವೋರ್ಸ್ ಕೊಡಬಹುದು; ಹೈಕೋರ್ಟ್