ಪೋಷಕರು-ಮಕ್ಕಳ ಸಂಬಂಧ ಹೇಗಿರಬೇಕು ಗೊತ್ತಾ?

By Suvarna NewsFirst Published Apr 14, 2020, 3:07 PM IST
Highlights
ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದು ಕೂಡ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತೆ. ಅತಿಯಾದ್ರೆ ಅಮೃತವೂ ವಿಷ ಎಂಬಂತೆ, ಅತಿಯಾದ ಶಿಸ್ತು ಹಾಗೂ ಮಮಕಾರ ಎರಡೂ ಮಕ್ಕಳ ವರ್ತನೆಯ ಮೇಲೆ ಪರಿಣಾಮ ಬೀರಬಲ್ಲದು.
ಮಕ್ಕಳ-ಪೋಷಕರ ಸಂಬಂಧವನ್ನು ಪದಗಳಲ್ಲಿ ಹಿಡಿದಿಡೋದು ಅಸಾಧ್ಯವಾದ ಕೆಲಸ. ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ ಬಂಧವಿದು. ಕೆಲವರು ಸ್ಟ್ರಿಕ್ಟ್ ಆಗಿದ್ರೆ ಮಾತ್ರ ಮಕ್ಕಳು ಹೇಳಿದ ಮಾತು ಕೇಳ್ತಾರೆ ಎಂಬ ಭಾವನೆ ಹೊಂದಿದ್ರೆ, ಇನ್ನೂ ಕೆಲವರು ಮಕ್ಕಳೊಂದಿಗೆ ಬೆರೆತು ಸ್ನೇಹ-ಸಲುಗೆಯಿಂದ ಇದ್ರೆ ಅವರು ಸರಿಯಾದ ದಾರಿಯಲ್ಲಿ ಸಾಗುತ್ತಾರೆ ಎಂಬ ಭಾವನೆ ಹೊಂದಿರುತ್ತಾರೆ. ಇದರಲ್ಲಿ ನೀವು ಯಾವ ಕೆಟಗರಿಗೆ ಸೇರಿದ್ರೂ ಪರ್ವಾಗಿಲ್ಲ. ಮಕ್ಕಳಿಗೆ ಒಳ್ಳೆಯ ಫ್ರೆಂಡ್ ಆಗಿರುವ ಜೊತೆಗೆ ಅವರನ್ನು ಶಿಸ್ತಿನಿಂದ ಬೆಳೆಸಲು ಕೂಡ ಸಾಧ್ಯವಿದೆ. ಅದು ಹೇಗೆ ಅಂತೀರಾ?

ಕೊರೋನಾ ಆತಂಕದ ನಡುವೆ ಸಂಭೋಗ ಅಪಾಯವೇ? ಓರಲ್ ಓಕೆನಾ?

ಸದಾ ಅವರೊಂದಿಗಿರುವ ವಿಶ್ವಾಸ ಮೂಡಿಸಿ
ಮಕ್ಕಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಬೆಂಬಲಕ್ಕೆ ಸದಾ ಯಾರಾದರೂ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಮಕ್ಕಳ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಅವರ ಇಷ್ಟ-ಕಷ್ಟಗಳಿಗೆ ಸ್ಪಂದಿಸಿ. ಹೀಗೆ ಮಾಡೋದ್ರಿಂದ ಅವರಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತೆ. ಅಮ್ಮ ಅಥವಾ ಅಪ್ಪ ಸದಾ ನನ್ನ ಬೆಂಬಲಕ್ಕಿರುತ್ತಾರೆ ಎಂಬ ಭರವಸೆ ಮೂಡುತ್ತದೆ. ಇದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತೆ. ಜನರನ್ನು, ಸಮಾಜವನ್ನು ಹೇಗೆ ಎದುರಿಸಬೇಕು ಎಂಬುದನ್ನು ಅವರು ಕಲಿಯುತ್ತಾರೆ. ಅಷ್ಟೇ ಅಲ್ಲ, ಪ್ರತಿ ವಿಷಯವನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. 

ಮಕ್ಕಳಿಗಾಗಿ ಸಮಯ ಮೀಸಲಿಡಿ
ಅದೆಷ್ಟೇ ಕೆಲಸವಿರಲಿ, ಒತ್ತಡವಿರಲಿ ಮಕ್ಕಳಿಗಾಗಿ ಒಂದಿಷ್ಟು ಸಮಯ ಮೀಸಲಿಡಿ. ಈಗಂತೂ ಲಾಕ್‍ಡೌನ್ ಪರಿಣಾಮ ಅಪ್ಪ-ಅಮ್ಮ ಇಬ್ಬರೂ ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಹೋಲಿಸಿದ್ರೆ ಈಗ ಮಕ್ಕಳೊಂದಿಗೆ ಬೆರೆಯಲು ಸ್ವಲ್ಪ ಸಮಯವೂ ಸಿಗುತ್ತಿದೆ. ಹೀಗಾಗಿ ಮಕ್ಕಳಿಗಾಗಿ ಸಮಯ ಮೀಸಲಿಡಿ. ಅವರೊಂದಿಗೆ ಸೇರಿ ಆಟವಾಡಿ, ಸಿನಿಮಾ ನೋಡಿ, ಅಡುಗೆ ಮಾಡಿ, ಮನೆ ಕ್ಲೀನಿಂಗ್ ಮಾಡಿ. ಇದರಿಂದ ಪಾರ್ಕ್ ಸೇರಿದಂತೆ ಹೊರಗೆಲ್ಲೂ ಹೋಗೋಕೆ ಆಗುತ್ತಿಲ್ಲ ಎಂಬ ಅವರ ಬೇಸರ ಸ್ವಲ್ಪ ಮಟ್ಟಿಗೆ ತಗ್ಗುತ್ತೆ. ಇನ್ನು ಲಾಕ್‍ಡೌನ್ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕವೂ ಅಷ್ಟೆ. ಅವರಿಗಾಗಿ ಸಮಯ ಮೀಸಲಿಡಲು ಮರೆಯಬೇಡಿ. ಇದರಿಂದ ನಿಮ್ಮ ಮತ್ತು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತೆ.

ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಕನಸು ಬೀಳುವುದ್ಯಾಕೆ?

ಅತಿಯಾದ ಕಾಳಜಿ ಬೇಡ
ಮಕ್ಕಳು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳೋದು ಪೋಷಕರ ಜವಾಬ್ದಾರಿ. ಆದ್ರೆ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ಒಳ್ಳೆಯದ್ದಲ್ಲ. ಇದರಿಂದ ಸಂಬಂಧಗಳು ಹಾಳಾಗುತ್ತವೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರಿಗೆ ತಿಳಿಸಿ. ತಪ್ಪು ಕೆಲಸಗಳನ್ನು ಮಾಡುವಾಗ ಎಚ್ಚರಿಸಿ. ಮಕ್ಕಳಿಗೆ ಆಸಕ್ತಿಯಿರುವ, ಇಷ್ಟದ ವಿಷಯಗಳ ಆಯ್ಕೆಗೆ ಅಡ್ಡಿಯುಂಟು ಮಾಡಬೇಡಿ. ಹೀಗೆ ಮಾಡೋದ್ರಿಂದ ಮಕ್ಕಳಿಗೆ ಪೋಷಕರ ಮೇಲೆ ನಂಬಿಕೆ, ಗೌರವ ಬೆಳೆಯುತ್ತದೆ. ಜೊತೆಗೆ ಅವರಲ್ಲಿ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ. 

ಅವರ ಆಯ್ಕೆಗಳನ್ನು ಗೌರವಿಸಿ
ಕೆಲವು ಪೋಷಕರು ಮಕ್ಕಳ ಬಟ್ಟೆಯಿಂದ ಹಿಡಿದು ಅವರು ಯಾವ ಕೋರ್ಸ್ ಮಾಡ್ಬೇಕು, ಯಾವ ವೃತ್ತಿ ಆಯ್ದುಕೊಳ್ಳಬೇಕು ಎಂಬ ತನಕ ಪ್ರತಿಯೊಂದು ವಿಷಯದಲ್ಲೂ ತಾವೇ ನಿರ್ಧಾರ ಕೈಗೊಳ್ಳುತ್ತಾರೆ. ಮಕ್ಕಳಿಗೆ ಆಯ್ಕೆ ಸ್ವಾತಂತ್ರ್ಯ ನೀಡೋದೇ ಇಲ್ಲ. ಆದ್ರೆ ಮಕ್ಕಳು ದೊಡ್ಡವರಾದ ಬಳಿಕ ಪ್ರತಿ ವಿಷಯದಲ್ಲೂ ತಂದೆ-ತಾಯಿ ಮಧ್ಯಪ್ರವೇಶಿಸುವುದರಿಂದ ಸಂಬಂಧ ಹಳಸುತ್ತದೆ. ಮಕ್ಕಳಿಗೆ ಹೆತ್ತವರ ಮೇಲಿರುವ ಗೌರವ, ಪ್ರೀತಿ ಕಡಿಮೆಯಾಗುವ ಸಾಧ್ಯತೆಯೂ ಇದೆ. ಆದಕಾರಣ ಮಕ್ಕಳು ದೊಡ್ಡವರಾದ ಬಳಿಕ ಸಲಹೆಯನ್ನಷ್ಟೇ ನೀಡಿ, ಆಯ್ಕೆ ಸ್ವಾತಂತ್ರ್ಯವನ್ನು ಅವರಿಗೇ ಬಿಡಿ.

ಪರ್ಫೆಕ್ಟ್ ಸಂಬಂಧ ಎಂಬುದು ಇಲ್ಲ, ಅದು ಬೇಕಾಗಿಯೂ ಇಲ್ಲ

ಏಕಾಂತಕ್ಕೆ ಭಂಗ ತರಬೇಡಿ
ಮಕ್ಕಳಿಗೆ ಒಂದಿಷ್ಟು ಏಕಾಂತದ ಸಮಯವನ್ನೂ ನೀಡಿ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಏಕಾಂತದಲ್ಲಿ ಹೆಚ್ಚಿನ ಸಮಯ ಕಳೆಯಲು ಇಷ್ಟಪಡಬಹುದು. ಹಾಗಂತ ಈ ವಿಷಯದಲ್ಲಿ ಭಯಪಡುವ ಅಗತ್ಯವಿಲ್ಲ. ಈ ಹಂತದಲ್ಲಿ ಇಂಥ ವರ್ತನೆ ಸಹಜ. ನಂತರ ಅವರಷ್ಟಕ್ಕೆ ಸರಿಯಾಗುತ್ತಾರೆ. 

"
click me!