ಸಂಭೋಗ ನಿಜಕ್ಕೂ ಆನಂದದಾಯಕವಾಗಲು ಮುನ್ನಲಿವಿನ ಬಗ್ಗೆ ನೀವು ತಿಳಿದಿರುವುದು ಅಗತ್ಯ. ಇದು ಲೈಂಗಿಕ ಶಿಕ್ಷಣದ ಭಾಗವಾಗಬೇಕಿತ್ತು.
ಪ್ರಶ್ನೆ: ನೀವು ಪ್ರಶ್ನೆಗಳಿಗೆ ಉತ್ತರಿಸುವಾಗ ಆಗಾಗ 'ಫೋರ್ ಪ್ಲೇ' ಅಥವಾ 'ಮುನ್ನಲಿವು' ಎಂದು ಹೇಳುತ್ತೀರಿ. ಹಾಗೆಂದರೆ ಏನು ಅಂತ ನನಗೆ ನಿಜವಾಗಿಯೂ ಗೊತ್ತಿಲ್ಲ. ನನಗೆ ಹದಿನೆಂಟು ವರ್ಷ. ಇತ್ತೀಚೆಗೆ ನಾನೂ ಮತ್ತು ನನ್ನ ಗೆಳತಿ ಒಂಟಿಯಾಗಿರುವ ಸಂದರ್ಭ ಬಂತು. ಆಗ ನಾವಿಬ್ಬರೂ ಸೆಕ್ಸ್ ನಡೆಸಿದೆವು. ಆದರೆ ಇಬ್ಬರಿಗೂ ಈ ಮೊದಲ ಅನುಭವ ನೋವಿನಿಂದ ಕೂಡಿತ್ತು. ನನ್ನ ಗೆಳತಿ ಕೂಡ 'ನಿನಗೆ ಫೋರ್ ಪ್ಲೇ ಮಾಡೋಕೆ ಬರೋದೆ ಇಲ್ಲ' ಅಂತ ಹೇಳಿದಳು. ಅದಕ್ಕಾಗಿ ಕೇಳುತ್ತಿದ್ದೇನೆ. ದಯವಿಟ್ಟು ತಿಳಿಸಿಕೊಡಿ.
ಉತ್ತರ: ನಮ್ಮ ಭಾರತೀಯ ಸಮಾಜದಲ್ಲಿ ಒಂದು ಸಮಸ್ಯೆಯಿದೆ. ಅದೇನೆಂದರೆ, ಸಣ್ಣ ಮಕ್ಕಳು ಸೆಕ್ಸ್‌ಗೆ ಸಂಬಂಧಿಸಿದ ಯಾವುದಾದರೂ ಪ್ರಶ್ನೆ ಕೇಳಿದರೆ, "ಛೀ ಹೊಲಸೆಲ್ಲಾ ಮಾತಾಡಬೇಡ' ಎಂದು ಹೇಳಿಬಿಡುವುದು. ಇದರಿಂದಾಗಿ ಸೆಕ್ಸ್‌ಗೆ ಸಂಬಂಧಿಸಿದ ಯಾವುದೇ ವಿಚಾರ ಅಸ್ಪೃಶ್ಯ, ಅದರ ಕುರಿತಾಗಿ ಮುಕ್ತವಾಗಿ ಮಾತಾಡಕೂಡದು ಎಂಬ ಭಾವನೆ ಮಕ್ಕಳಲ್ಲಿ ಮೊಳೆಯುತ್ತದೆ. ಇದು ದೊಡ್ಡವರಾದ ಮೇಲೂ ಮುಂದುವರಿಯುತ್ತದೆ. ಇದರಿಂದಾಗಿಯೇ ಸೆಕ್ಸ್ ಅನ್ನು ಕೂಡ ಪಾಂಗಿತವಾಗಿ, ಅಂದರೆ ಎಬಿಸಿಡಿಯಿಂದ ಆರಂಭಿಸಿ ಝಡ್‌ವರೆಗೂ ನಡೆಸುವ ಕೌಶಲ, ತಿಳುವಳಿಕೆ ಮೂಡಿರುವುದಿಲ್ಲ. ಹೀಗಾಗಿಯೇ ಸೆಕ್ಸ್ ಎಂಬುದು ನೋವಿನ ಅನುಭವ ಆಗುವುದು.
undefined
ಇಂದು ಆಧುನಿಕ ಮಾಧ್ಯಮಗಳ ನೆರವು ಯುವಜನತೆಗೆ ಸಾಕಷ್ಟು ಇದೆ. ಆದರೆ ಪೆನೆಟ್ರೇಟಿವ್ ಸೆಕ್ಸ್ ಅಥವಾ ಸಂಭೋಗಕ್ಕೆ ಕೊಟ್ಟಷ್ಟು ಗಮನವನ್ನು ಸೆಕ್ಸ್‌ನ ಆರೋಗ್ಯಪೂರ್ಣ ಆರಂಭ- ಅಂತ್ಯ- ಆರೋಗ್ಯಗಳತ್ತ ಯಾರೂ ಗಮನ ಹರಿಸುತ್ತಿಲ್ಲ. ಇದು ಬದಲಾಗಬೇಕು.
ನಿಮ್ಮಲ್ಲಿ ಇರುವ ಸಮಸ್ಯೆ ಎಂದರೆ ಮುನ್ನಲಿವಿನ ಕೊರತೆಯದು. ಇದನ್ನು ನಿಮ್ಮ ಗೆಳತಿಯೂ ಗುರುತಿಸಿದ್ದಾಳೆ ಎಂದ ಮೇಲೆ ನೀವು ಈ ವಿಭಾಗದಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಪರಿಶ್ರಮ ಹಾಕಲೇಬೇಕು. ವಿಚಿತ್ರ ಎಂದರೆ, ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು ಎಂಬ ಮಾತನ್ನು ನೀವು ಕೇಳಿದ್ದೀರಲ್ಲ? ಇದೂ ಹಾಗೇ. ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದರಲ್ಲಿ ಅನುಭವ ಪಡೆಯುವಂತಿಲ್ಲ, ಅನುಭವವಿಲ್ಲದೆ ಲೈಂಗಿಕ ಕ್ರಿಯೆಯನ್ನು ನಡೆಸುವಂತಿಲ್ಲ ಎಂಬ ಸ್ಥಿತಿ. ಈಗ ನಿಮ್ಮ ವಿಚಾರದಲ್ಲಿ ಏನು ಮಾಡಬಹುದು ಎಂಬುದನ್ನು ನೋಡೋಣ. ಮುನ್ನಲಿವಿನ ಉದ್ದೇಶವೇ ನಿಮ್ಮ ಶಿಶ್ನ ಹಾಗೂ ಆಕೆಯ ಯೋನಿಗಳು ಪೂರ್ತಿ ಒದ್ದೆಯಾಗಿ ಸಂಭೋಗಕ್ಕೆ ಸಂಪೂರ್ಣ ಸಜ್ಜಾಗುವಂತೆ ಮಾಡುವುದು.
FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ! ...
ಮೊದಲಾಗಿ, ನೇರವಾಗಿ ಸಂಭೋಗಕ್ಕೆ ಮುಂದಾಗಬೇಡಿ. ಅವಸರಿಸಬೇಡಿ. ಅವಸರದ ಲೈಂಗಿಕ ಕ್ರಿಯೆಯಲ್ಲಿ ಆನಂದ ಇಲ್ಲ. ನಿಮ್ಮದೇ ಸಮಯ ತೆಗೆದುಕೊಳ್ಳಿ. ನಿಮ್ಮ ಸಂಗಾತಿಯ ಪಕ್ಕ ಕೂತುಕೊಳ್ಳಿ. ಒಂದು ರೊಮ್ಯಾಂಟಿಕ್ ಸಿನೆಮಾ ನೋಡಿ, ಹಿತವಾದ ಸಂಗೀತ ಕೇಳಿ. ಅಥವಾ ಪ್ರೀತಿ ಮತ್ತು ಸೆಕ್ಸ್‌ಗೆ ಸಂಬಂಧಿಸಿದ ಯಾವುದಾದರೂ ಮಾತುಕತೆಗಳನ್ನು ತೊಡಗಿ. ಆಗ ನಿಮಗೇ ನಿಮ್ಮ ಒಳಗೆ ಆಗುತ್ತಿರುವ ಆನಂದದ ಅರಿವು ಆಗುತ್ತದೆ.
ಮೆತ್ತಗೆ ನಿಮ್ಮ ಸಂಗಾತಿಯ ಕೈ ಹಿಡಿದುಕೊಳ್ಳಿ. ಸಂಗಾತಿಯೂ ನಿಮ್ಮ ಕೈ ಹಿಡಿದುಕೊಳ್ಳುವಂತೆ ಮಾಡಿ. ಈ ಸ್ಪರ್ಶವೇ ನಿಮಗೆ ಹಿತವನ್ನೂ ಆನಂದವನ್ನೂ ತರುವಂತಿರಲಿ. ನಿಮ್ಮ ಕೈಗಳು ನೇರವಾಗಿ ನಿಮ್ಮ ಸಂಗಾತಿಯ ಲೈಂಗಿಕ ಅಂಗಗಳಿಗೆ ಹೋಗುವ ಮುನ್ನ, ಸಾಕಷ್ಟು ಸಮಯ ಮುಂಗುರುಳು, ಹಣೆ, ಕಿವಿ, ಕೈಬೆರಳು, ಬೆನ್ನು ಇತ್ಯಾದಿಗಳ ಮೇಲೂ ಓಡಾಡಲಿ. ಆಕೆಯೂ ಹಾಗೇ ಮಾಡಲಿ. ನನ್ನ ದೇಹ ಸಂಪೂರ್ಣ ನಿನ್ನದು, ನಿನ್ನ ದೇಹ ಈಗ ನನ್ನದು ಎಂಬ ಆತ್ಮೀಯ ಭಾವವನ್ನು ಇಬ್ಬರೂ ಇಬ್ಬರಲ್ಲೂ ಮೂಡಿಸದೆ ಹೋದರೆ. ಲೈಂಗಿಕತೆಯಲ್ಲಿ ಆನಂದವಿರುವುದಿಲ್ಲ.
ನಿಮ್ಮ ಕೈಬೆರಳುಗಳು, ಮೂಗು, ನಾಲಿಗೆ, ತುಟಿಗಳು ಸಾಕಷ್ಟು ಉಪಯೋಗವಾಗಲಿ. ಕಿವಿಯ ಹಿಂದೆ ಮುತ್ತಿಡುವುದು ಹೆಚ್ಚಿನ ಹುಡುಗಿಯರಿಗೆ ಉನ್ಮಾದವನ್ನುಂಟುಮಾಡುತ್ತದೆ. ಹಾಗೇ ತುಟಿಗಳನ್ನು ಚುಂಬಿಸುವುದು ಆನಂದದಾಯಕ ಕ್ರಿಯೆ. ಇದರಲ್ಲೂ ನೂರಾರು ವೈವಿಧ್ಯಗಳಿವೆ. ಇದನ್ನೂ ನೀವು ಇಂಟರ್‌ನೆಟ್‌ನಿಂದ ತಿಳಿಯಬಹುದು. ಸಾಕಷ್ಟು ಹೊತ್ತು ನಿಮ್ಮ ತುಟಿಗಳ ಮಿಲನದಲ್ಲಿ ನೀವು ಸಮಯ ವಿನಿಯೋಗಿಸಿದರೆ, ಅದೇ ನಿಮ್ಮ ದೇಹಗಳನ್ನು ಶ್ರುತಿಗೊಂಡ ವೀಣೆಯಂತೆ ಮುಂದಿನ ಕ್ರಿಯೆಗೆ ಸಜ್ಜುಗೊಳಿಸುತ್ತದೆ. ನಾಲಿಗೆಯಿಂದಲೂ ನೀವು ಸಾಕಷ್ಟು ಉದ್ರೇಕಿಸಬಹುದು. ಹಾಗೇ ನಿಮ್ಮ ಕೈ ಬೆರಳುಗಳು ಆಕೆಯ ದೇಹದ ಮೇಲೆ ಓಡಾಡಿ, ಆಕೆಗೆ ಆನಂದವನ್ನು ಉಂಟುಮಾಡುವ ತಾಣಗಳು ಯಾವುದು ಎಂಬುದನ್ನು ಅನ್ವೇಷಿಸಬೇಕು. ಇದು ಸಾಕಷ್ಟು ಶೋಧನೆಯಿಂದಲೇ ತಿಳಿಯಬೇಕಾದ ವಿಷಯ.
#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ? ...
ಹಾಗೇ ನಿಮ್ಮ ಮೂಗನ್ನೂ , ಕಾಲುಗಳನ್ನೂ ನೀವು ಸೃಜನಶೀಲವಾಗಿ ಉಪಯೋಗಿಸಬಹುದು. ಇಲ್ಲಿ ಯಾವುದೇ ತಡೆ ಇಲ್ಲ. ತಾರತಮ್ಯ ಇಲ್ಲ. ಲೈಂಗಿಕ ಕ್ರಿಯೆಯ ಸಮಯದಲ್ಲಿ ದೇಹದ ಯಾವ ಅಂಗವೂ ನಿರುಪಯುಕ್ತ ಅಲ್ಲ. ಪ್ರತಿಯೊಂದು ಕ್ರಿಯೆಯೂ ಇಲ್ಲಿ ಆನಂದದಾಯಕವಾಗಿರಬೇಕು. ಮತ್ತು ಅದು ಸಂಗಾತಿಯ ಸಮ್ಮತಿಯನ್ನೂ ಹೊಂದಿರಬೇಕು. ಆಕೆಗೆ ಕಿರಿಕಿರಿ ಉಂಟುಮಾಡುವ ತಾಣಗಳನ್ನು ಸ್ಪರ್ಶಿಸುವುದು, ಚುಂಬಿಸುವುದು ತಪ್ಪು. ಅದು ಮೂಡ್ ಅನ್ನು ಕೆಡಿಸಬಹುದು.
ಇದನ್ನೆಲ್ಲ ಓದುವಾಗ ಒಂದು ಕ್ಲಿಷ್ಟಕರ ವಿಜ್ಞಾನವನ್ನು ಓದಿದಂತೆ ಭಾಸವಾಗುತ್ತದೆಯೇ? ಹಾಗೇನೂ ಇಲ್ಲ. ಎಲ್ಲ ವಿಜ್ಞಾನಗಳಂತೆಯೇ ಥಿಯರಿಗಿಂತ ಪ್ರಯೋಗವೇ ಹೆಚ್ಚು ತಿಳುವಳಿಕೆ ನೀಡುವುದು. ಮುಂದುವರಿಯಿರಿ. ಆಲ್ ದಿ ಬೆಸ್ಟ್.