ಸಂಗಾತಿಯೊಂದಿಗೆ ಸರಿದೂಗಿಸು ಆರ್ಥಿಕ ಸಂಬಂಧ ಹೀಗಿರಲಿ...

By Suvarna News  |  First Published Aug 31, 2020, 5:42 PM IST

ಹಣ ಖರ್ಚು ಮಾಡುವುದು ಹಾಗೂ ಸೇವಿಂಗ್ಸ್ ಮಾಡುವುದರ ಕುರಿತ ಅಭಿಪ್ರಾಯಗಳು ಬಹಳ ವೈಯಕ್ತಿಕವಾಗಿಯೂ, ವಿಭಿನ್ನವಾಗಿಯೂ ಇರುತ್ತವೆ. ಈ ಬಗ್ಗೆ ಮಾತನಾಡುವುದು ಮುಜುಗರವೆನಿಸಬಹುದು. ಅದನ್ನು ಆದಷ್ಟು ಸಾಮಾನ್ಯವೆಂಬಂತ ಚರ್ಚೆಗೆ ತೆಗೆದುಕೊಂಡು ಹೋಗುವುದು ನಿಮ್ಮ ಕೈಲೇ ಇರುತ್ತದೆ. 


ಪ್ರೀತಿಯಲ್ಲಿ ಹಣ ಮುಖ್ಯವಲ್ಲ ಎಂದು ಏನೇ ಹೇಳಿದರೂ ವಿವಾಹದ ಬಳಿಕ ಹಣ ಸಂಬಂಧದ ನಡುವೆ ಹಲವು ಬಾರಿ ಬಂದು ಹೋಗುತ್ತಲೇ ಇರುತ್ತದೆ. ಪ್ರತಿ ಮೂರರಲ್ಲಿ ಒಂದು ಜೋಡಿ ಜಗಳವಾಡುವುದೇ ಹಣಕಾಸಿನ ವಿಷಯಕ್ಕೆ. ಕೆಲವೊಬ್ಬರದು ಇದೇ ವಿಷಯಕ್ಕೆ ವಿಚ್ಚೇದನದವರೆಗೆ ಹೋಗುವುದೂ ಇದೆ. ಹಣದ ವಿಷಯದಲ್ಲಿ ಪ್ರತಿಯೊಬ್ಬರ ಯೋಚನೆಗಳು, ಚಿಂತನೆಗಳೂ ಅವರು ಬೆಳೆದು ಬಂದ ರೀತಿಗೆ, ಅವರ ಸಂಬಳಕ್ಕೆ ಸರಿಯಾಗಿ ವಿಭಿನ್ನವಾಗಿರುತ್ತವೆ. ಹಾಗಾಗಿ, ನಿಮ್ಮ ಪಾರ್ಟ್ನರ್ ಜೊತೆ ವಿವಾಹಕ್ಕೆ ಮುಂಚೆಯೇ ಹಣಕಾಸಿನ ಸಂಬಂಧ ಮಾತುಕತೆಯಾಡಿಕೊಳ್ಳುವುದು ಒಳಿತು. ಸಂಗಾತಿ ಜೊತೆ ಆರೋಗ್ಯಕರ ಆರ್ಥಿಕ ಸಂಬಂಧ ಹೊಂದಲು ಈ ವಿಷಯಗಳನ್ನು ಗಮನಿಸಿ. 

ಮನಿ ಟಾಕ್
ಹಣದ ವಿಷಯದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ. ನೀವಿಬ್ಬರೂ ಕುಳಿತು ನಿಮ್ಮ ಆರ್ಥಿಕ ಗುರಿ, ನಿರೀಕ್ಷೆಗಳು ಹಾಗೂ ಭಯದ ಕುರಿತು ಮಾತನಾಡಬೇಕು. ಹಣದ ಕುರಿತ ಚಿಂತನೆಗಳೇ ಮನುಷ್ಯರ ನಿಜವಾದ ಬಣ್ಣ ತೋರಿಸುವುದು. ಬಹುತೇಕ ಸಂಬಂಧಗಳಲ್ಲಿ ಈ ಸ್ಟೆಪ್‌ನ್ನು ಕಾಮನ್ ಸೆನ್ಸ್ ಎಂದು ಕಡೆಗಣಿಸುವುದರಿಂದಲೇ ನಂತರದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಣ ಖರ್ಚು ಮಾಡುವುದು ಹಾಗೂ ಸೇವಿಂಗ್ಸ್ ಮಾಡುವುದರ ಕುರಿತ ಅಭಿಪ್ರಾಯಗಳು ಬಹಳ ವೈಯಕ್ತಿಕವಾಗಿಯೂ, ವಿಭಿನ್ನವಾಗಿಯೂ ಇರುತ್ತವೆ. ಈ ಬಗ್ಗೆ ಮಾತನಾಡುವುದು ಮುಜುಗರವೆನಿಸಬಹುದು. ಅದನ್ನು ಆದಷ್ಟು ಸಾಮಾನ್ಯವೆಂಬಂತ ಚರ್ಚೆಗೆ ತೆಗೆದುಕೊಂಡು ಹೋಗುವುದು ನಿಮ್ಮ ಕೈಲೇ ಇರುತ್ತದೆ. 

ಸೆಕ್ಸ್ ಡ್ರೈವ್ ಹೆಚ್ಚಿಸಲು ಅಡುಗೆ ಮನೆ ಮದ್ದಿವು...

Latest Videos

undefined

ಭಾವೋದ್ವೇಗ ಬೇಡ
ಹಣದ ವಿಷಯದಲ್ಲಿ ಜಗಳ ಎದುರಾದಾಗ ಮಾತುಗಳು ಆದಷ್ಟು ವಸ್ತುನಿಷ್ಠವಾಗಿರಬೇಕೇ ಹೊರತು ವ್ಯಕ್ತಿನಿಷ್ಠವಲ್ಲ ಎಂಬುದರತ್ತ ಜಾಗರೂಕತೆ ವಹಿಸಿ. ಹಣದ ವಿಷಯದಲ್ಲಿ ಪಾರ್ಟ್ನರ್ ಎಡವಿದಾಗ ಕೋಪಿಸಿಕೊಳ್ಳುವುದು, ಕಿರುಚಾಡುವುದು  ಮಾಡಬೇಡಿ. ಬಾಲ್ಯದಿಂದ ಈ ಕುರಿತು ಬೆಳೆಸಿಕೊಂಡ ಅಭ್ಯಾಸ, ನಂಬಿಕೆಗಳು ಅಷ್ಟು ಸುಲಭವಾಗಿ ಬದಲಾಗಲಾರವು. ಹಾಗಾಗಿ, ಅವರ ನಂಬಿಕೆ ಸರಿಯಿಲ್ಲವೆನಿಸಿದರೆ ನಿಧಾನವಾಗಿ ಬದಲಾಯಿಸಿಕೊಳ್ಳಲು ಸಮಯ ಕೊಡಿ. ಹಣದ ಕುರಿತ ವಿಷಯಗಳು ಮುನ್ನೆಲೆಗೆ ಬಂದಾಗ ಭಾವೋದ್ವೇಗಕ್ಕೊಳಗಾಗದಿರುವುದು ಉತ್ತಮ. ಕಡ್ಡಿಯನ್ನು ಗುಡ್ಡ ಮಾಡುವ ಬದಲಿಗೆ ಕುಳಿತು ನಿಧಾನವಾಗಿ ಮಾತನಾಡಿ.  ನಿಮ್ಮದೇ ಸರಿಯೆಂಬ ಮನಸ್ಥಿತಿ ಇಟ್ಟುಕೊಳ್ಳದೆ, ಆಲಿಸುವ ವ್ಯವಧಾನ ತೋರಿಸಿ. 

ಇಬ್ಬರಿಗೂ ಸರಿಹೊಂದುವ ವ್ಯವಸ್ಥೆ
ಆರ್ಥಿಕ ಸಂಗತಿಗಳಲ್ಲಿ ನಿಮ್ಮಿಬ್ಬರ ಅಭ್ಯಾಸ, ನಂಬಿಕೆಗಳು ತದ್ವಿರುದ್ಧವಾಗಿದ್ದರೆ, ಇಬ್ಬರಿಗೂ ಸರಿಹೊಂದುವಂತೆ ಇಬ್ಬರೂ ಸ್ವಲ್ಪ ಬಿಟ್ಟುಕೊಟ್ಟು ಒಂದು ವ್ಯವಸ್ಥೆ ಕಲ್ಪಿಸಿಕೊಳ್ಳಬಹುದು. ಉದಾಹರಣೆಗೆ, ಜಾಯಿಂಟ್ ಅಕೌಂಟ್ ತೆರೆದು ಅದಕ್ಕೆ ಇಬ್ಬರೂ ಪ್ರತಿ ತಿಂಗಳು ಇಂತಿಷ್ಟು ಸೇವಿಂಗ್ಸ್ ಎಂದು ಹಾಕಬೇಕೆಂದು ಅಥವಾ ಬಾಡಿಗೆ ಹಂಚಿಕೊಳ್ಳೋಣವೆಂದು ಇತ್ಯಾದಿ. ಇದೆಲ್ಲಕ್ಕಿಂತ ಮೊದಲು ನೀವು ಮಾಡಬೇಕಾದುದು ಖರ್ಚುವೆಚ್ಚದ ಬಜೆಟ್ ತಯಾರಿಸಿಕೊಳ್ಳುವುದು. ಮನೆ ನಡೆಸಲು ಎಷ್ಟು ಬೇಕಾಗುತ್ತದೆ, ಇಬ್ಬರ ಸಂಬಳ ಎಷ್ಟಿದೆ, ಎಷ್ಟನ್ನು ಮನರಂಜನೆ ಇತ್ಯಾದಿಗಳಿಗೆ ಖರ್ಚು ಮಾಡಬಹುದು, ಎಷ್ಟು ಸೇವಿಂಗ್ಸ್ ಪ್ರತಿ ತಿಂಗಳು ಮಾಡಲೇಬೇಕು, ಎಷ್ಟನ್ನು ಶೇರು, ಫಿಕ್ಸ್ಡ್ ಡೆಪಾಸಿಟ್ ಇತ್ಯಾದಿಗಳಲ್ಲಿ ಹಾಕಬಹುದು ಮುಂತಾದ ವಿಷಯ ಚರ್ಚಿಸಿ ಪಟ್ಟಿ ಮಾಡಿಕೊಳ್ಳಿ. ಇದಿಲ್ಲದಿದ್ದರೆ, ಒಬ್ಬರಿಗೆ ತಾನೊಬ್ಬನೇ ಎಲ್ಲ ಮಾಡಬೇಕೆಂಬುದು ಒತ್ತಡವೂ ಎನಿಸಬಹುದು, ಅಹಂಕಾರವೂ ಬರಬಹುದು. 

ವಾರಕ್ಕೊಮ್ಮೆ ಫೈನಾನ್ಸ್ ಮೀಟಿಂಗ್
ತೀರಾ ಫಾರ್ಮಲ್ ಆಗಿ ಅಲ್ಲ, ನಾರ್ಮಲ್ ಆಗಿ ಹಣದ ವಿಷಯಗಳನ್ನು ಮಾತನಾಡಿ. ತಿಂಗಳಿಗೊಮ್ಮೆ ಎಂದಿಟ್ಟುಕೊಂಡರೆ ವಿಷಯವೆತ್ತುವುದೇ ಮುಜುಗರವೆನಿಸಬಹುದು. ಬದಲಿಗೆ ಎಲ್ಲ ವಿಷಯಗಳನ್ನು ಮಾತನಾಡುವಂತೆಯೇ ಹಣಕಾಸಿನ ವಿಚಾರ ಮಾತನಾಡಿ. ಸ್ಟಾಕ್ ತೆಗೆದುಕೊಳ್ಳುವುದು, ಅಥವಾ ಲೋನ್ ಕಟ್ಟುವುದು ಮುಂತಾದುವುಗಳ ಬಗ್ಗೆ ವಿಚಾರವೆತ್ತಿ. ನಿಮ್ಮ ಗುರಿಗಳು ರಿಯಲಿಸ್ಟಿಕ್ ಆಗಿಲ್ಲವೆಂದರೆ ಅದೂ ಕೂಡಾ ಇಂಥ ಮಾತುಕತೆಗಳಿಂದ ಅರಿವಿಗೆ ಬರುತ್ತದೆ. ಹೀಗೆ ಮಾತನಾಡುವುದು ನಾರ್ಮಲ್ ಆಗುತ್ತಾ ಹೋದಂತೆ ಕೇವಲ ಹಣಕಾಸಲ್ಲ, ಎಲ್ಲ ವಿಚಾರಗಳನ್ನೂ ನಿಮ್ಮಿಬ್ಬರ ಮಧ್ಯೆ ಮಾತನಾಡುವುದು ಸುಲಭವಾಗುತ್ತದೆ. 

ಪಾಕ್‌ ನಟಿ ಮೆಹ್ವಿಶ್‌ ಹಯಾತ್‌ ಜೊತೆ ದಾವೂದ್‌ ಅಫೇರ್‌?

ಪ್ರಾಮಾಣಿಕತೆ 
ಹಣದ ವಿಷಯದಲ್ಲಿ ಯಾವಾಗಲೂ ಪ್ರಾಮಾಣಿಕರಾಗಿರಬೇಕು. ಅದರಲ್ಲೂ ಪಾರ್ಟ್ನರ್ ಜೊತೆ ಹಣಕಾಸಿನ ವಿಚಾರ ಮುಚ್ಚುಮರೆ ಮಾಡಬೇಡಿ. ನಿಮ್ಮ ವ್ಯವಹಾರಗಳು ಪಾರದರ್ಶಕವಾಗಿರಲಿ. ಅಗತ್ಯ ಬಿದ್ದಾಗ ಸಹಾಯ ಕೇಳಿ, ಕಾರಣ ಹೇಳಿ. ನೀವಿಬ್ಬರೂ ಒಂದು ಟೀಂ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಸಮಸ್ಯೆಗಳು ಬಂದಾಗ ಒಬ್ಬರನ್ನೊಬ್ಬರು ದೂರುವ ಬದಲಿಗೆ ಪರಿಹಾರದತ್ತ ಗಮನ ಹರಿಯಲಿ. 

click me!