ಕೊರೊನಾ ಚಂಡಮಾರುತದಲ್ಲಿ ಕೊಚ್ಚಿ ಹೋದ ದಾಂಪತ್ಯ : ಹೆಚ್ಚಾಯ್ತು Divorce Case

By Suvarna News  |  First Published Jul 13, 2022, 6:33 PM IST

ಕೊರೊನಾದಿಂದ ಬದುಕಿ ಬಂದಿದ್ದೆ ಒಂದು ಸಾಹಸ ಎನ್ನುವವರಿದ್ದಾರೆ. ಮಹಾಮಾರಿ ಅನೇಕರನ್ನು ಬಲಿ ಪಡೆದಿದೆ. ಕೊರೊನಾಕ್ಕೆ ಒಳಗಾದವರು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೊರೊನಾ ದಾಂಪತ್ಯದ ಮೇಲೂ ಪರಿಣಾಮ ಬೀರಿದೆ.  
 


ತೂಫಾನ್ ರೀತಿಯಲ್ಲಿ ಬಂದ ಕೊರೊನಾ ಸದ್ಯ ತನ್ನ ಆರ್ಭಟವನ್ನು ಕಡಿಮೆ ಮಾಡಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು,ಯಾವಾಗ ಬೇಕಾದ್ರೂ ಮತ್ತೆ ಚಂಡಮಾರುತ ಬೀಸಬಹುದು ಎಂಬ ಭಯ ಎಲ್ಲರ ಮನಸ್ಸಿನಲ್ಲಿದೆ. ಕೊರೊನಾ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಮೇಲೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಕೊರೊನಾದಿಂದಾಗಿ ಆತಂಕ, ಭಯ, ಒಂಟಿತನ ಮತ್ತು ಅನಿಶ್ಚಿತತೆಯ ವಾತಾವರಣ ಎಲ್ಲೆಡೆ ಮನೆ ಮಾಡಿದೆ. ಕೊರೊನಾ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ನಂತ್ರ ಸಂಬಂಧಗಳು ಹಳಸಲು ಶುರುವಾಗಿದೆ. ಕೊರೊನಾ ನಂತ್ರ ವಿಚ್ಛೇದನ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಲಾಕ್ ಡೌನ್ ನಲ್ಲಿ ಕೆಲ ಸಂಗಾತಿ ಒಟ್ಟಿಗೆ ದಿನಗಳನ್ನು ಕಳೆದಿದ್ದಾರೆ. ಇಬ್ಬರು ಇಡೀ ದಿನ ಒಟ್ಟಿಗಿದ್ದ ಕಾರಣ ಕೆಲ ಭಿನ್ನಾಭಿಪ್ರಾಯ ಹೆಚ್ಚಾಗಿ ವಿಚ್ಛೇದನಕ್ಕೆ ಕಾರಣವಾಗಿದೆ. ಮತ್ತೆ ಕೆಲ ಸಂಗಾತಿಗಳು ಸಂಪೂರ್ಣ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದೂರ ಉಳಿಯುವಿಕೆ, ಜವಾಬ್ದಾರಿ, ಕೆಲಸದ ಒತ್ತಡ ಇವು ಕೂಡ ಕೆಲ ಸಂಬಂಧ ಮುರಿದು ಬೀಳಲು ಕಾರಣವಾದವು. 

ವಿಚ್ಛೇದನ ಪ್ರಕರಣಗಳಲ್ಲಿ ಶೇಕಡಾ 50 -60 ರಷ್ಟು ಹೆಚ್ಚಳ : ತಜ್ಞರ ಪ್ರಕಾರ, ಸಾಂಕ್ರಾಮಿಕ ರೋಗದ ನಂತರ ಮನಸ್ಸಿನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಆತಂಕ ಮತ್ತು ಅನಿಶ್ಚಿತತೆಯಿಂದಾಗಿ ವಿಚ್ಛೇದನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಕೀಲರು ಮತ್ತು ಕಾನೂನು ಸಲಹಾ ಸಂಸ್ಥೆಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಶೇಕಡಾ 50ರಿಂದ 60ರಷ್ಟು ಹೆಚ್ಚಳವಾಗಿದೆ.

Tap to resize

Latest Videos

ವಿಚ್ಛೇದನಕ್ಕೆ ಇವು ಕಾರಣ : 

ತಾಳ್ಮೆ ಕೊರತೆ : ತಜ್ಞರ ಪ್ರಕಾರ, ಕರೋನಾ ನಂತರ ಜನರ ಸಹನೆ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದಾಗಿ ಶೀಘ್ರದಲ್ಲೇ ಕೋಪ ಬರ್ತಿದೆ. ಈ ಕಾರಣದಿಂದಾಗಿ ಖಿನ್ನತೆ, ಗೊಂದಲ ಮತ್ತು ಹೆದರಿಕೆಯ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಉದ್ಯೋಗ ಮತ್ತು ಹಣದ ಚಿಂತೆಗಳಿಂದ ಜನರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾತು ಮಾತಿಗೂ ದಂಪತಿ ಮಧ್ಯೆ ಜಗಳ ಹೆಚ್ಚಾಗ್ತಿದೆ. ಇದೇ ವಿಚ್ಛೇದನಕ್ಕೆ ದಾರಿಮಾಡಿ ಕೊಡ್ತಿದೆ. 

ಇದನ್ನೂ ಓದಿ: ಮದುವೆ ಫಿಕ್ಸ್ ಆಗ್ತಿದ್ದಂತೆ ಶಾಕಿಂಗ್ ವಿಷ್ಯ ಸರ್ಚ್ ಮಾಡ್ತಾರಂತೆ ಹುಡುಗೀರು!

ಇನ್ನೊಂದು ಕಾರಣ ದಾಂಪತ್ಯ ದ್ರೋಹ : ವಿಚ್ಛೇದನ ಪ್ರಕರಣಗಳು ಹೆಚ್ಚಾಗಲು, ವಿಚ್ಛೇದನಕ್ಕೆ ಅರ್ಜಿಗಳು ಹೆಚ್ಚೆಚ್ಚು ಬರಲು ಪ್ರಮುಖ ಕಾರಣವೆಂದರೆ ದಾಂಪತ್ಯ ದ್ರೋಹ ಎನ್ನುತ್ತಾರೆ ತಜ್ಞರು. ಮೋಸ, ಹಣದ ಕೊರತೆ ಮತ್ತು ದಂಪತಿ ನಡುವೆ ದೈಹಿಕ ಅನ್ಯೋನ್ಯತೆಯ ಕೊರತೆಯೂ ಇದಕ್ಕೆ ಕಾರಣವಾಗ್ತಿದೆ. ಹಿಂದೆಯೂ ಈ ಎಲ್ಲ ಸಮಸ್ಯೆಗಳಿತ್ತು. ಆದ್ರೆ ಅದನ್ನು ಅನುಸರಿಸಿಕೊಂಡು ಸಂಗಾತಿ ಜೀವನ ನಡೆಸುತ್ತಿದ್ದರು. ಆದ್ರೀಗ ಆ ತಾಳ್ಮೆ ಜನರಲ್ಲಿ ಇಲ್ಲ ಎನ್ನುತ್ತಾರೆ ತಜ್ಞರು. 

ಇದನ್ನೂ ಓದಿ: ಅಬ್ಬಬ್ಬಾ...! ಇಲ್ಲಿ ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ!

ಆರ್ಥಿಕ ಮುಗ್ಗಟ್ಟು ವಿಚ್ಛೇದನಕ್ಕೆ ಕಾರಣ : ಕೊರೊನಾ ರೋಗದ  ನಂತರ ಮಾನಸಿಕ ಆರೋಗ್ಯ ಸಮಸ್ಯೆ ಶೇಕಡಾ 30 ರಿಂದ 40ರಷ್ಟು ಹೆಚ್ಚಳವಾಗಿದೆ ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಇದ್ರಿಂದಾಗಿ ಜನರು ಸಂಬಂಧಗಳಲ್ಲಿ ರಾಜಿ ಮಾಡಿಕೊಳ್ಳುವುದು ಇನ್ನಷ್ಟು ಕಷ್ಟಕರವಾಗಿದೆ. ಇದರ ಜೊತೆಗೆ ನಿಂದನೀಯ, ಅತೃಪ್ತಿಕರ ದಾಂಪತ್ಯದಲ್ಲಿ ಸಿಕ್ಕಿಬೀಳಲು ಮಹಿಳೆಯರು ಇಷ್ಟಪಡ್ತಿಲ್ಲ. ಸಮಸ್ಯೆಯಾಗ್ತಿದ್ದಂತೆ ಅದ್ರಿಂದ ಹೊರಗೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ. ಕೊರೊನಾ ನಂತ್ರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಆ ಸಂದರ್ಭದಲ್ಲ ಸಾಕಷ್ಟು ಹಣಕಾಸಿನ ಅಡಚಣೆ ಎದುರಿಸಿದ್ದಾರೆ.  ಈಗ ನಿಧಾನವಾಗಿ ಆರ್ಥಿಕ ಸ್ಥಿತಿ ಸುಧಾರಣೆ ಕಾಣ್ತಿದ್ದರೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಂಬಳ ಸ್ಥಿರವಾಗಿದ್ದು, ಸಂಸಾರ ನಡೆಸುವುದು ಕಷ್ಟವಾಗ್ತಿದೆ. ಹೆಚ್ಚುತ್ತಿರುವ ವಿವಾಹ ವಿಚ್ಛೇದನಕ್ಕೆ ಪತಿಯ ಆರ್ಥಿಕ ಸ್ಥಿತಿ ಕೂಡ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!