ಪ್ರೀತಿಯೇ ತೋರದ ಅಪ್ಪನಿಗೆ ಮಗಳು ಮನೆ ಕಟ್ಟಿಸಿಕೊಟ್ಟಾಗ?

By Suvarna NewsFirst Published Sep 2, 2023, 4:08 PM IST
Highlights

ಮೂರನೇ ಮಗು ಅಪ್ಪನಿಗೆ ಬೇಡವಾಗಿತ್ತು. ಆದರೂ ಭೂಮಿಗೆ ಮುದ್ದಾದ ಮಗು ಬಂದು ಬಿಡ್ತು. ಹುಟ್ಟುವ ಮುಂಚಿನಿಂದಲೂ ಇದ್ದ ಅಸಹನೆ ಮುಂದುವರಿದಿತ್ತು. ಮಗಳಿಗೋ ಅಪ್ಪನ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. 

ಅಪ್ಪಾ... ಚಿಕ್ಕವರಿದ್ದಾಗ ಅವರೇ ಪ್ರಪಂಚ. ನನ್ನಪ್ಪನೇ ನಮ್ಮ ಸ್ನೇಹಿತ. ಊಟ ಮಾಡದೆ ಮಲಗಿದರೆ ನಿದ್ದೆಯಲ್ಲಿದ್ದರು ಬಂದು ಮುದ್ದಾಡಿ ಕೈತುತ್ತು ತಿನ್ನಿಸ್ತಿದ್ರು. ಶಿಸ್ತಾಗಿ ಬಟ್ಟೆ ಹಾಕಿಸಿ ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ರು. ದೊಡ್ಡವರಾಗ್ತಾ ಅಪ್ಪಾ ದೂರದ ಬೆಟ್ಟ. ಒಡನಾಟ ಕೊಂಚ ಕಡಿಮೆ. ಭಯ, ಕೋಪ, ಸೇರಿದಂತೆ ಅಪ್ಪನೊಂದಿಗೆ ಹತ್ತು ಹಲವು ತಗಾದೆಗಳು. ಬೆಳೆಯುತ್ತಾ ಅಪ್ಪಾ ನಮಗೆ ಅಂತಾ ಏನು ಮಾಡಿದ್ರು?? ಅವರ ಅಪ್ಪನ ನೋಡಿ ಅಷ್ಟು ಆಸ್ತಿ ಮಾಡಿದ್ದಾರೆ. ಇವರ ಅಪ್ಪನನ್ನ ನೋಡಿ ಹೇಗೆಲ್ಲಾ ನೋಡ್ಕೊತಾರೆ ಅನ್ನೋ ಮಾತುಗಳು. ಅಬ್ಬಬ್ಬಾ, ಅದೇ ನಾವು ಆ ಸ್ಥಾನದಲ್ಲಿ ನಿಂತು ಯೋಚಿಸಿದ್ರೆ..! ಅಪ್ಪನ ಅಂಗಾಲ ಧೂಳಿಗೂ ನಾವು ಸಮವಲ್ಲ. ತನ್ನ ಹೊಟ್ಟೆ ಕಟ್ಟಿ ನಮ್ಮ ಹೊಟ್ಟೆ ತುಂಬಿಸಿದ ಮಹಾನುಭಾವ. ತಪ್ಪು ಮಾಡಿದರೂ ಮುದ್ದಾಡಿ ಮನ್ನಿಸುವ ಮುಗ್ಧ ಜೀವಿ. ಕಷ್ಟಪಟ್ಟು ಕೆಲಸ ಮಾಡಿ ನಮ್ಮನ್ನ ಹಾಯಾಗಿರಿಸಿದ ಅದ್ಭುತ ಜೀವಿ! ಅಲ್ವಾ, ಅದಕ್ಕೆ ಅಪ್ಪನಿಗೆ ಪ್ರತಿಯಾಗಿ ಏನು ಮಾಡಲಾಗದು ಬದಲಾಗಿ ನಾವು ಮಕ್ಕಳಾಗಿ ಮಾಡಬೇಕಾದ ಕರ್ತವ್ಯ ಮಾಡಿ ಕೊಂಚ ಅವರನ್ನ ಖುಷಿಯಲ್ಲಿರಿಸೋಣ. ಅಪ್ಪಾ ಲವ್ ಯು -

ಹೀಗೆ ಫಾದರ್ಸ್ ಡೇ ಗೆ ಒಂದು ಪೋಸ್ಟ್ ಬರೆಯುತ್ತಿದ್ದೆ. ಆದರೇ ಮನದಾಳದಲ್ಲಿ ಅದೊಂತರಾ ದುಃಖ ಆವರಿಸಿಬಿಟ್ಟಿತ್ತು. ಗಂಟಲು ಬಿಗಿದಿತ್ತು. ಮನಸ್ಸು ಕೇಜಿಗಟ್ಲೆ ಭಾರವಾಗಿತ್ತು. ಕಣ್ಣಂಚಲ್ಲಿ ನೀರು ಸಮುದ್ರದ ಅಲೆಯಂತೆ ಬಂದು ಹೋಗುತ್ತಿತ್ತು. ಆದರೆ ಕಣ್ಣಂಚಿನ ಒಂದು ಹನಿ ನೀರನ್ನು ಆಚೆ ಹಾಕದೆ ಪೋಸ್ಟ್ ಹಾಕಿ ಒಮ್ಮೆ ವ್ಯಂಗ್ಯವಾಗಿ ನಕ್ಕುಬಿಟ್ಟೆ. ಅರೇ ಯಾಕೇ? ಅಪ್ಪನ ನೆನಪಿಗಾ? ಆ ಹಳೇ ದಿನಗಳನ್ನ ಮಿಸ್ ಮಾಡ್ಕೊತಿದ್ದೀರಾ? ಅಥವಾ ಅಪ್ಪಾಇದ್ದಾರಾ? ಅಥವಾ...? ಹೀಗಂತ ಪ್ರಶ್ನೆ ನಿಮ್ಮ ತಲೆಯಲ್ಲಿ ಬೈ‌ಒನ್ ಗೇಟ್ ಒನ್ ತರಾ ಮೂಡ್ತಿದೆ ಅಲ್ವಾ. ಉತ್ತರ ಕೊಡ್ತಿನಿ ನನ್ ಜೊತೆ ಬನ್ನಿ.

ಮೊದಲ ಪಿರಿಯಡ್ಸ್ ಆದ ಮಗಳಿಗೆ ಸಹಾಯ ಮಾಡಿದ ಯುವಕ, ಆತನ ತಾಯಿಗೆ ಸಲಾಂ ಎಂದ ನೆಟ್ಟಿಗರು

Latest Videos

ದೇವರ ದಯೇ ನಮ್ಮ‌ ತಂದೆ ಯಾವುದೇ ರೀತಿಯ  ಖಾಯಿಲೆ ಇಲ್ಲದೆ ಆರೋಗ್ಯವಾಗಿದ್ದಾರೆ.  ಮತ್ತು ಹಾಗೇ ಇರಲಿ‌ ಅನ್ನೊದು ನನ್ನ‌ ಆಸೆ . ಓಕೆ ಈಗ ಹೇಳ್ತಿನಿ ಯಾಕೇ ಆ ಪೋಸ್ಟ್ ಬರೆಯುವಾಗ ನನಗೆ ಅಷ್ಟೊಂದು ನೋವಾಯ್ತು ಅಂತಾ. ನಾನು ಬರೆದಿರುವ ಆ ಪೋಸ್ಟ್ ನಲ್ಲಿ 70% ಸುಳ್ಳು ತುಂಬಿತ್ತು. ಅಂದ್ರೆ ಅಪ್ಪನ ಪ್ರೀತಿಯನ್ನು ಅಷ್ಟಾಗಿ ಕಾಣದ ನತದೃಷ್ಟ ಜೀವ ಇದು. ನನಗೆ ಈ ಅನುಭವ ನನ್ನ ತಾಯಿಯ ಗರ್ಭದಲ್ಲಿ ಇದ್ದಾಗಿನಿಂದ ಆಗಿದೆ. ನಾನು ಆಗ ಹೊಟ್ಟೆಯಲ್ಲಿ 3 ತಿಂಗಳ ಜೀವ. ನನಗೆ ಆಗ ಒಬ್ಬ ಅಣ್ಣ ಹಾಗೂ ಅಕ್ಕ ಇದ್ರು. ನಾನು 3ನೇ ಮಗು. ಆದ್ರೆ ಅದ್ಯಾಕೋ ನನ್ನ ಅಪ್ಪನಿಗೆ ನಾನು ಬೇಡವಾಗಿದ್ದೆ. ಅಮ್ಮನ ಜೊತೆ ಪ್ರತಿನಿತ್ಯ ಗಲಾಟೆ. 'ಈ ಮಗು ಬೇಡಾ. ಎರಡೇ ಸಾಕು. ಬಾ ಡಾಕ್ಟರ್ ಹತ್ರ ಹೋಗೊಣ'. ಆದ್ರೆ ಯಾವ ತಾಯಿ ಹೃದಯ ಇದಕ್ಕೆ ಹು ಅನ್ನುತ್ತೆ ಹೇಳಿ? ಅಮ್ಮನ ಗೋಳಾಟ ಕೇಳೊಕೆ ಯಾರೂ ಇರಲಿಲ್ಲ. ಒಂದು ಕಡೆ ಬಡತನ. ಇನ್ನೊಂದು ಕಡೆ ಗಂಡನ ಕಿರುಕುಳ. ಹು ಅನ್ನೊಕು ಆಗದೇ ಊಹು ಅಂತಾ ಬಾಯಿ ಬಿಟ್ಟು ಹೇಳಲೂ ಆಗದೇ ಅಪ್ಪನ ಆಜ್ಞೆಗೆ ತಲೆ ಬಾಗಿ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. 

ವೈದ್ಯರನ್ನ ನಾರಾಯಣನಿಗೆ ಹೋಲಿಸುತ್ತಾರೆ‌. ಆದ್ರೆ ಅದ್ಯಾಕೋ ಆ ಡಾಕ್ಟರ್ ಯಮನಾಗಿಬಿಟ್ಟಿದ್ದು. 'ಈಗಿನ ಕಾಲದಲ್ಲಿ ಆರತಿಗೊಂದು, ಕೀರತಿಗೊಂದು ಸಾಕು ಬಿಡಿ,' ಅಂತಾ ನಮ್ಮ ಅಮ್ಮನಿಗೆ ಇಂಜೆಕ್ಷನ್ ಕೊಟ್ಟೆ ಬಿಟ್ಟಿದ್ರು. 

ಅಮ್ಮಾ ಕಣ್ಣೀರಲ್ಲೆ ಮನೆಗೆ ಬಂದ್ಲು. ನನ್ನ ತಾಯಿಯವರ ತಂದೆ ನನ್ನ ಮುದ್ದು ಅಮ್ಮನ ವಿಚಾರ ತಿಳಿದು ನೋಡಲು ಬಂದರು.  ಈ ವಿಚಾರ ತಿಳಿದು ನನ್ನ ಅಪ್ಪನಿಗೆ ಸಖತ್ ಕ್ಲಾಸ್ ತೆಗೆದುಕೊಂಡ್ರು. 'ಮಗು ಸಾಕೊಕೆ ಆಗದಿದ್ರೆ ನಾವ್ ನೋಡ್ಕೊತೀವಿ. ನಿನ್ನ ಈ ದುಡುಕಿನಿಂದ ಆದ ಈ ಅನಾಹುತದಿಂದ ನನ್ನ ಮಗಳಿಗೆ ಏನಾದರೂ ಆದ್ರೆ ಇನ್ಯಾವತ್ತು ನಾ ನಿನ್ನ ಬಿಡಲ್ಲ,' ಅಂದಿದ್ದರು.

ಡಾಕ್ಟರ್ ಯಮನಾದ್ರೆ ಆ ನಾರಾಯಣ ಅಂದ್ರೆ ಭಗವಂತ ನನ್ನ ಜೀವ ಗಟ್ಟಿ ಇಟ್ಟಿದ್ದ. ಈ ಭೂಮಿಗೆ ಭಗವಂತ ನನ್ನ ತುಂಬಾ ಗಟ್ಟಿಮುಟ್ಟಾಗಿ ಮುದ್ ಮುದ್ದಾಗಿ ಕಳಿಸಿಕೊಟ್ಟಿದ್ದ. ನನ್ನ ತಾಯಿಯ ಗರ್ಭದಿಂದ ಈ ಭೂ-ತಾಯಿಯ ಮಡಿಲಿಗೆ ಬಂದು ಬಿಟ್ಟೆ. ನನ್ನ ಸಾಕ್ತಿನಿ ಅಂತಾ ನನ್ನ ಸಂಬಂಧಿಗಳು ನಾ ಮುಂದು ತಾ ಮುಂದು ಅಂತಾ ಬಂದ್ರು. ನಮ್ಮ ಅಪ್ಪಾ ನನ್ನ ನೋಡಿ ಇಷ್ಟು ಚಂದವಾದ ಮಗಳನ್ನ ನಾನು‌ ಯಾರಿಗೂ ಕೊಡಲ್ಲ ಅಂದು ಬಿಟ್ರು.

Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...

ಆದ್ರೆ ಅದೇ ಪ್ರೀತಿ ಉಳಿಲಿಲ್ಲ. ನಾನು ದೊಡ್ಡವಳಾಗ್ತಾ ಅಪ್ಪನಿಗೆ ನಾನು ಒಂಥರಾ ಶತ್ರು. ಪ್ರೀತಿ ಇತ್ತು. ಆದ್ರೆ ನನ್ನ ಅಣ್ಣನಿಗೆ ಸಿಗುವಷ್ಟು ಪ್ರೀತಿ ನನ್ನ ಅಕ್ಕನ ಮೇಲೆ ಇದ್ದಷ್ಟು ಕಾಳಜಿ ಈ ಜೀವದ ಮೇಲೆ ಇರಲಿಲ್ಲ. 

ಅಪ್ಪನ ಹೆಗಲ ಮೇಲೆ ಕೂತು ಜಾತ್ರೆ ನೋಡಬೇಕು. ಅಪ್ಪನ ಕೈಹಿಡಿದು ಊರ ಸುತ್ತಬೇಕು. ಅಪ್ಪನ ಎದೆಮೇಲೆ ನೆಮ್ಮದಿಯ ನಿದ್ದೆ ಮಾಡಬೇಕು. ಹೀಗೆ ಅಪ್ಪನ ಆಸರೆಯನ್ನ ಈ ಜೀವ ತುಂಬಾ ಬಯಸಿತ್ತು. ಆದರೇ ಅಪ್ಪನಿಗೆ ಈ ಮಗಳು ನುಂಗಲಾರದ ತುತ್ತಾಗಿದ್ದಳು. ಓದುತ್ತೇನೆ ಅಂದಾಗ, 'ನೀನಾ 7th ಪಾಸ್ ಆಗೋದೆ ಕಷ್ಟ. ನೀನೆನ್ ಉದ್ಧಾರ ಆಗಲ್ಲ,' ಅಂತಿದ್ರು. ಸರಿಯಾಗಿ ನೋಟ್ ಪುಸ್ತಕವಿರದೆ ಪಕ್ಕದ ಗೆಳತಿ ಹತ್ತಿರ ಒಂದು ಪೇಜ್ ಕೇಳಿ ಪಡೆದು ಅದರಲ್ಲೆ ಇಡೀ ದಿನದ ಕ್ಲಾಸ್ ವರ್ಕ್. ಭಗವಂತ ಮಾತ್ರ ಸದಾ ನನ್ನೊಂದಿಗಿದ್ದ. ನನ್ನ ಅಕ್ಕ ಹಾಗೂ ಅಣ್ಣನಿಗೆ ಸಿಗದ ಕೆಲ ಸರ್ಕಾರಿ ಸೌಲಭ್ಯಗಳು ನನಗೆ ಮಾತ್ರ ಧಾರಾಳವಾಗಿ ಸಿಕ್ತಿದ್ವು. ರೇಷನ್ , ಬಟ್ಟೆ, ಪುಸ್ತಕ, ನೋಟ್ ಬುಕ್, ಪೆನ್ ಕೂಡಾ ಸಿಕ್ಕಿದ್ದಿದೆ‌. ಆದ್ರೆ ನಾನು ದಡ್ಡಿ ಅಂತಾ ಅವೆಲ್ಲವನ್ನ ನನ್ನಿಂದ ಕಿತ್ತುಕೊಂಡ ಪ್ರಸಂಗಗಳು ಇವೆ. ಹೋಗ್ತಾ ಹೋಗ್ತಾ ಓದಿಗಿಂತ ಬದುಕಿನ ಮೇಲಿನ ಆಸಕ್ತಿ ಹೆಚ್ಚಾಯ್ತು. ನಾನು ದೊಡ್ಡ ಮಟ್ಟಕ್ಕೆ ಬರnsಬೇಕು. ಅಪ್ಪ ನನ್ನ ಹೆಮ್ಮೆಯಿಂದ ಮಾತನಾಡಿಸಬೇಕು. ನನ್ನ ಮನೆಯಲ್ಲಿ ನನಗೆ ಗೌರವ ಸಿಕ್ಕರೆ ಅದೇ ಜೀವನದ ದೊಡ್ಡ ಸಾಧನೆ ಅಂದುಕೊಂಡು ಓದಲಾರಂಭಿಸಿದೆ. ಹಾಗಂತಾ ನಾನೇನು ಫಸ್ಟ್ ರ್ಯಾಂಕ್ ಸ್ಟೂಡೆಂಟ್ ಅಲ್ಲಾ ಫೇಲ್ ಆಗ್ತಿರ್ಲಿಲ್ಲಾ ಅಷ್ಟೇ. 

PUC ಮುಗೀತು‌ ಡಿಗ್ರಿ ಹೋಗ್ಬೇಕು. ನಮ್ಮ‌ ಅಪ್ಪ. ಅವರಿವರ ಮಾತು ಕೇಳಿ 'ನೀ ಕಲಿತಿದ್ದು ಸಾಕು. ಮನೆಲಿರು. ಮದುವೆ ಮಾಡಿ ಕೊಡ್ತಿವಿ ಹೋಗು. ಮಗಳನ್ನ ಮದುವೆ ಮಾಡೋದು ಬಿಟ್ಟು ಕಾಲೇಜ್ ಕಳಿಸ್ತಿದ್ದೀರಾ ಅಂತಾ ಜನಾ ಉಗೀತಾರೆ,' ಅಂತಾ ಹೇಳಿದ್ರು. ನಾನೂ ಸಿಕ್ಕಾಪಟ್ಟೆ ಮೊಂಡಿ ಆಗೋಗಿದ್ದೆ.  ಅದಕ್ಕೆ ಸಿಕ್ಕ ಕೆಲ ಸಮಯವನ್ನ ಬಳಸಿಕೊಂಡು ಮಕ್ಕಳಿಗೆ ಪಾಠಹೇಳಿಕೊಟ್ಟು ಕಾಲೇಜಿಗೆ ಬೇಕಾದ ಹಣವನ್ನ (500 ರೂ.)  ಹೊಂದಿಸಿಕೊಂಡೆ. ಸ್ವಲ್ಪ ಹಣವನ್ನ ಅತ್ಯಾಪ್ತರೊಬ್ಬರು ಕೊಟ್ರು ಅದು 500 ರೂ. ಕೆಲವರಿಗೆ ಅದು ಚಿಕ್ಕ ಹಣ. ನನಗಂತೂ ಅದು‌ ಕೋಟಿ‌ ಲೆಕ್ಕ. ಅವರಿವರ ಸಹಾಯ ಹಾಗೂ ಅದೇ ಕಾಲೇಜಿನ ಒಬ್ಬ ಶಿಕ್ಷಕಿಯ ಸಹಾಯದಿಂದ ಕಾಲೇಜ್ ನಲ್ಲಿ‌ ಅಡ್ಮಿಷನ್ ಗಿಟ್ಟಿಸಿಕೊಂಡೆ. ಅಪ್ಪನಿಗೆ ಈ ವಿಚಾರ ಗೊತ್ತಾಗಿ ಕೆಂಡಾಮಂಡಲವಾಗಿದ್ದರು. ಈ ತರಾ  ಯಾವನ್ ಸಪೋರ್ಟ್ ಕೊಟ್ಟಾ ಅಂತಾ ಕೋಗಾಡಿದ್ರು. ನಾನು ಅಳುತ್ತಾ, ನಗುತ್ತಾ ಗಲಾಟೆ ಮಾಡುತ್ತಾ 3 ವರ್ಷ ಮುಗಿಸಿಬಿಟ್ಟೆ. 

Seetharama: ಲೈಫಲ್ಲಿ ಏನೂ ಇಲ್ಲದಿದ್ದಾಗ ಬದುಕೋದನ್ನ ಕಲೀಬೇಕು! : ಬದುಕಿದ ಪಾಠ ಕಲಿಸಿದ ಸೀತಾ

ಕೊನೆಗೆ ಕನಸಿನ‌ ಹುದ್ದೆಯನ್ನ ಅರಸಿ ಕನಸಿನ ನಗರಿಗೆ ಬಂದೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಕೆಲಸದಲ್ಲಿ ಒಳ್ಳೆ ಹೆಸರು ಮಾಡಿದೆ. ಅಪ್ಪನಿಗೊಂದು ಮನೆ ಕಟ್ಟಿಸಿಕೊಟ್ಟೆ. ನಮ್ಮ ಅಪ್ಪನ ಹೆಸರಲ್ಲಿ  ನನ್ನ ಹಣ ಖರ್ಚು ಮಾಡಿ ಮದುವೆ ಮಾಡಿಕೊಂಡೆ. ಅಪ್ಪನಿಗೆ ನನ್ ಮೇಲೆ ಪ್ರೀತಿ ಬಂತಾ? ಆ ದೇವರಿಗೆ ಪ್ರೀತಿ ನಾನು ಅಷ್ಟೇ. ನಾವು ಅದು ಸಿಕ್ಕಿಲ್ಲ ಇದು ಸಿಕ್ಕಿಲ್ಲ ಅನ್ನೊದಕ್ಕಿಂತ ಈ‌ ಎಲ್ಲಾ ಹಂತದಲ್ಲಿ ನನಗೆ ಆಸರೆ ಆಗಿದ್ದು ಆ ಭಗವಂತ. ಯಾವುದೋ ಒಂದು ರೂಪದಲ್ಲಿ ನಾನಿದ್ದೀನಲ್ಲಾ ಅಂತಾ ಜೊತೆಯಾಗಿದ್ದ. ಆ ಶಕ್ತಿ ಸಾಕು ಅಲ್ವಾ?

click me!